ಸ್ಪೂರ್ತಿ

ತಿನ್ನದೇ ಉಳಿದ ಊಟವನ್ನು ನೀವ್ ಏನ್ ಮಾಡ್ತೀರೋ ಗೊತ್ತಿಲ್ಲಾ.?ಆದ್ರೆ ಮಿಕ್ಕಿದ ಊಟವನ್ನು ಈ ಬಾಲಕಿಯರು ಏನ್ ಮಾಡ್ತಾರೆ ಗೊತ್ತಾ.! ಈ ಲೇಖನ ಎಲ್ಲರಿಗೂ ಸ್ಪೂರ್ತಿ ಶೇರ್ ಮಾಡಿ…

By admin

March 01, 2018

ರಾತ್ರಿಯಾದರೆ ಸಾಕು ತಮ್ಮ ತಮ್ಮ ಮನೆಗಳಲ್ಲಿ ಬೆಚ್ಚಗೆ ತಮ್ಮ ಮನೆಯಲ್ಲಿ ಮಲುಗುವಂತ ಜನರ ನಡುವೆ ಇಂತವರು ಇರುತ್ತಾರಾ ?ಅನ್ನೋದೇ ಡೌಟ್. ಆದರೆ ಇರುವುದು ಖಚಿತವಾಗಿದೆ. ಇವರು ಮಾಡುವಂತ ಕೆಲಸಕ್ಕೆ ನೀವು ನಿಜವಾಗಿಯೂ ಸಲ್ಯೂಟ್ ಹೊಡೆಯುತ್ತಿರ.

 

 ಹಸಿದವರಿಗೆ ಆಹಾರ ಪೂರೈಸುತ್ತಿರುವ ಇವರ ಸ್ಪೂರ್ತಿದಾಯಕ ಮಾತುಗಳು:-

ದೇಶದ 20 ಕೋಟಿ ಹಸಿವುಳ್ಳ ನಾಗರಿಕರಿಗೆ ಆಹಾರವನ್ನು ಒದಗಿಸುವ ಭಾರತದಲ್ಲಿ ಸಾಕಷ್ಟು ಆಹಾರವಿದೆ. ಆದರೆ ತಿಳಿವಳಿಕೆ ಅಥವಾ ತಿಳಿಯದೆ, ಎಲ್ಲರೂ ಈ ಆಹಾರವನ್ನು ವ್ಯರ್ಥ ಮಾಡುತ್ತಾರೆ. ಇದು ಭಾರತದಲ್ಲಿನ ಒಂದು ನಗರದಿಂದ ಸ್ಪೂರ್ತಿದಾಯಕ ಕಥೆಯ ಒಂದು ಉದಾಹರಣೆಯಾಗಿದೆ. ಸಮಾಜದ ಎಲ್ಲ ಭಾಗಗಳಿಂದ ಬಂದ ಜನರು, ಪ್ರತಿ ನಾಗರಿಕ ಮತ್ತು ಸಂಘಟನೆಯು ಆಹಾರದ ಹಾನಿ ಮತ್ತು ಹಸಿವನ್ನು ಪರಿಹರಿಸುವ ಕಡೆಗೆ ತಮ್ಮ ಬೆಂಬಲವನ್ನು ನೀಡುತ್ತಿದ್ದಾರೆ.

 

ಶೀತಲ್ ಶರ್ಮ ಹಾಗು ಇವರ ಸ್ನೇಹಿತರು ಅಹಮದಾಬಾದ್ ಮೂಲದವರು ಇವರು ಇವರು ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ರಾತ್ರಿ ಹೊತ್ತು ಆದರೆ ಸಾಕು ಇವರು 600 ಕ್ಕೂ ಹೆಚ್ಚು ಮಂದಿಯನ್ನು ಊಟ ಕೊಡುತ್ತಾರೆ. ಅದೆಷ್ಟೋ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಭಿಕ್ಷೆ ಬೇಡುತ್ತಾರೆ. ಹಾಗು ಹಸಿವನ್ನು ತಾಳಲಾರದೆ ಪಡುವಂತ ಕಷ್ಟಗಳನ್ನ ನೀವು ನೋಡಿರುತ್ತೀರಾ ಇಲ್ಲ ಕೇಳಿರುತ್ತೀರ. ಅಹಮದಾಬಾದ್ ನ ಕೆಲವು ಏರಿಯಾಗಳಲ್ಲಿ ಇವರು ಹಸಿವಿನಿಂದ ಇರುವಂತರಿಗೆ ಊಟ ಕೊಡುತ್ತಾರೆ.

ಹೋಟೆಲ್ಗಳಲ್ಲಿ ರೆಸ್ಟೋರೆಂಟ್ಗಳಲ್ಲಿ. ಕಲ್ಯಾಣಮಂಟಪಗಳಲ್ಲಿ ಹಾಗು ಸಮಾರಂಭಗಳಲ್ಲಿ ಮಿಕ್ಕಿದ ಊಟವನ್ನು ಇವರು ಸಂಪರ್ಕಿಸಿ ಅಲ್ಲಿಂದ ತಂದಂತ ಊಟವನ್ನು ಸ್ನೇಹಿತರೆಲ್ಲರು ಒಟ್ಟಿಗೆಸೇರಿ ಪ್ಯಾಕಿಂಗ್ ಮಾಡಿ. ರಸ್ತೆ ಬದಿಗಳಲ್ಲಿ ಹಸಿವಿನಿಂದ ಇರುವಂತ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಾರೆ.