ತಾಮ್ರದ ಬಾಟೆಲ್‍ನಲ್ಲಿ ನೀರು ಕುಡಿಯುತ್ತಿದ್ದಿರಾ ಹಾಗಾದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಿ ಏಕೆಂದರೆ ಇದು ನಿಮ್ಮ ಹಾಗು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ಸುದ್ದಿ ಓದಲೇಬೇಕು. ಏಕೆಂದರೆ ತಾಮ್ರ ಬಳಸುವುದರಿಂದ ನಿಮ್ಮ ಜೀವಕ್ಕೆ ಅಪಾಯವಾಗಲಿದೆ. ಎಲ್ಲೆಡೆ ತಾಮ್ರದ ದರ್ಬಾರ್ ಶುರುವಾಗಿದ್ದು, ನೀವು ತೆಳ್ಳಗಾಗಬೇಕೆಂದರೆ, ಬಿಪಿ, ಶೂಗರ್, ಟೆನ್ಶನ್ ಕಡಿಮೆ ಆಗಬೇಕೆಂದರೆ ಕಾಪರ್ ನಲ್ಲಿ ನೀರು ಕುಡಿಯಿರಿ ಎಂದು ಹಲವು ಮಂದಿ ಸಲಹೆ ನೀಡುತ್ತಾರೆ. ಅಚ್ಚರಿಯಂದರೆ ಕಾಪರ್ ಅತಿಯಾದ್ರೆ ಪಿತ್ತಕೋಶ (ಲಿವರ್) ಕಾಯಿಲೆ ಬರುತ್ತದೆ ಎಂಬ ವಿಚಾರ ವಿಶ್ವ ಮಟ್ಟದಲ್ಲಿ ವರದಿಯಾಗಿದೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ.
ಮಾಲ್‍ನಿಂದ ಹಿಡಿದು ಗಲ್ಲಿಗಲ್ಲಿಗಳಲ್ಲೂ ತಾಮ್ರದ ಮಾರಾಟ ತುಂಬಾ ಜೋರಾಗಿಯೇ ನಡೆಯುತ್ತಿದೆ. ಒಂದು ಲೀಟರ್ ನೀರು ಹಿಡಿಯುವ ತಾಮ್ರದ ಬಾಟೆಲ್‍ಗೆ ಕನಿಷ್ಠ ಅಂದರೂ 1300 ರೂ. ಆದರೂ ಕೊಡಲೇಬೇಕು. ಇಷ್ಟಾದರೂ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿ ಜನರು ತಾಮ್ರದ ಮೇಲೆ ಹಣ ಹಾಕುತ್ತಿದ್ದಾರೆ. ರಾತ್ರಿಯಲ್ಲಿ ತಾಮ್ರದೊಳಗೆ ನೀರಿಟ್ಟು ಬೆಳಗ್ಗೆ ಕುಡಿದರೆ ಗ್ಲೋ ಬರುತ್ತೆ, ಆರೋಗ್ಯವಾಗಿರುತ್ತಾರೆ ಎಂದು ಹತ್ತು ಹಲವು ಕಾರಣಗಳಿಗೆ ಕಾಪರ್ ಫೇಮಸ್ ಆಗಿದೆ.
ಆಶ್ಚರ್ಯ ವೇನೆಂದರೆ ರಾತ್ರಿಎಲ್ಲಾ ತಾಮ್ರದ ಬಾಟಲಿನಲ್ಲಿ ನೀರಿಟ್ಟು ಕುಡಿದರೆ ಕಾಯಿಲೆ ಬರಲಿದೆ. ಪೌಷ್ಠಿಕತೆಗೆ ಕಾಪರ್ ವರವೂ ಹೌದು, ವಿಷವೂ ಹೌದು. ರಾತ್ರಿಯಲ್ಲಿ ಕಾಪರಿನಲ್ಲಿ ನೀರಿಟ್ಟು ಬೆಳಗ್ಗೆ ಕುಡಿದರೆ ಶೇ. 4 ಸಾವಿರದಷ್ಟು ಕಾಪರ್ ಪ್ರಮಾಣ ಜಾಸ್ತಿಯಾಗಿರುತ್ತದೆ. ಆಗ ನೀರಿನಲ್ಲಿ ಕಾಪರ್ ಲಿಚ್ಚಿಂಗ್ ಆದಾಗ ಮೆಟಲ್ ಪ್ರಮಾಣ ಹೆಚ್ಚಾಗಿ ರಾತ್ರಿಯಿಂದ ಬೆಳಗ್ಗೆ ಆಗುವ ಬದಲಾವಣೆಗಳು ಲಿವರ್ ಡ್ಯಾಮೇಜ್ ಮಾಡುತ್ತದೆ. ಇದನ್ನು ವೀಲಸನ್ ಡಿಸೀಸ್ (ವಿಲ್ಸನ್ ರೋಗ) ಎಂದು ಕರೆಯುತ್ತಾರೆ.
ಒಂದು ದಿನಕ್ಕೆ ನಮ್ಮ ದೇಹಕ್ಕೆ 1.1 ಎಂ.ಜಿ ಮಾತ್ರ ತಾಮ್ರ ಸಾಕು. ಅನ್ನ ತಿಂದರು ಅದರಲ್ಲಿ ಕಾಪರ್ ಸಿಗಲಿದೆ. ಆದರೂ ತಾಮ್ರ ಬಳಸುತ್ತೇವೆ. ಕಾಪರ್ ವಿಷ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಈ ಪ್ರಕಾರ ಆತ್ಮಹತ್ಯೆಗೆ ಹಲವೆಡೆ ಕಾಪರ್ ಸೆಲ್ ಫೈಡ್ ಕುಡಿಯುತ್ತಾರೆ, ಕುಡಿದರೆ ಸಾಯುತ್ತಾರೆ ಎಂಬ ಸತ್ಯ ರುಜುವತ್ತಾಗಿದೆ. ಹೀಗಾಗಿ ಕಾಪರ್ ಪ್ರಮಾಣ ದೇಹ ಸೇರಿದರೆ ಅಪಾಯವಾಗುತ್ತದೆ. ಕಾಪರ್ ಬಳಕೆಯ ಸೈಡ್ ಎಫೆಕ್ಟ್ ಗೊತ್ತಿರುವವರು, ವ್ಯಾಪಾರಿಗಳು, ಕಾಪರ್ ಬಗ್ಗೆ ಜಾಸ್ತಿ ಕೇಳಿದರೆ ಮಾತನಾಡಲು ಹಿಂದೇಟು ಹಾಕುತ್ತಾರೆ. ಇಷ್ಟಲ್ಲದೇ ಕಾಪರ್ ಎಂದರೆ ಮೆಟಲ್. ಪಿತ್ತಕೋಶಕ್ಕೆ ಹೋದ ಮೆಟಲ್ ಹೊರತರುವುದು ಕಷ್ಟವಾಗುತ್ತದೆ. ಆಗ ದೇಹದಲ್ಲಿ ಮೆಟಲ್ ಸಂಗ್ರಹವಾಗಿ ಕಾಯಿಲೆಗಳು ಉದ್ಭವವಾಗುತ್ತದೆ.
ಕಾಪರ್ ಬಳಸಲು ಒಂದು ಉಪಾಯವಿದೆ. ಕಾಪರ್ ನಲ್ಲಿ ನೀರು, ಹಾಲು ಏನ್ ಹಾಕಿದರೂ ತಕ್ಷಣ ಉಪಯೋಗಿಸಬೇಕು. ಆದರೆ ತಡ ಮಾಡಿದರೆ ಮೆಟಲ್ ಪ್ರಮಾಣ ಆಹಾರ ಸೇರುತ್ತದೆ. ಸೈಡ್ ಎಫೆಕ್ಟ್ ಶುರುವಾಗುತ್ತದೆ.