ಸುದ್ದಿ

ತಾಮ್ರ ಬಳಸುವುದರಿಂದ ಆಗುವ ಉಪಯೋಗಗಳೇನು ಗೊತ್ತಾ? ತಾಮ್ರದಲ್ಲಿದೆ ರೋಗಮುಕ್ತ ಗುಣಗಳು..!

By admin

September 17, 2019

ಇದು ಪ್ಲಾಸ್ಟಿಕ್ ಯುಗ ಮನುಷ್ಯ ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದಾರೆ. ತಾನು ಬಳಸುವ ದಿನನಿತ್ಯದ ಹಲವು ವಸ್ತುಗಳು ಅಷ್ಟಲ್ಲದೆ ತಿನ್ನಲು, ಕುಡಿಯಲು ಬಳಸುವ ವಸ್ತು ಸಹ ಪ್ಲಾಸ್ಟಿಕ್ ನಿಂದಲೇ ಕೂಡಿರುತ್ತದೆ. ಆದರೆ ಈ ಪ್ಲಾಸ್ಟಿಕ್ ಮನುಷ್ಯನ ಜೀವಕ್ಕೆ ಮುಂದೊಂದು ದಿನ ಕುತ್ತು ತರುತ್ತದೆ ಎಂದು ತಿಳಿದು ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಮನುಷ್ಯನ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳಬೇಕಾದ ಸಣ್ಣದೊಂದು ಈ ಸಲಹೆಯನ್ನು ಅನುಸರಿಸಿ. ಏನಾದು ಅಂತೀರಾ?

ಹೌದು ನಾವು ದಿನನಿತ್ಯ ಬಳಸುವ ಕೆಲವು ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ ಹೀಗೆ ಮುಂತಾದ ವಸ್ತುಗಳನ್ನು ಬಳಸುವ ಬದಲಾಗಿ ತಾಮ್ರ ಬಳಸಿದರೆ ಎಷ್ಟೋ ಉಪಯೋಗಗಳಿದೆ. ತಾಮ್ರವು ದೇಹಕ್ಕೆ ಅಲ್ಪಪ್ರಮಾಣದಲ್ಲಿ ಅಗತ್ಯವಾದ ಖನಿಜಗಳಲ್ಲಿ ಒಂದಾಗಿದ್ದು,ತಾಮ್ರದ ವಸ್ತುಗಳಿಂದ ಹೆಚ್ಚು ಆರೋಗ್ಯಕಾರಿಯಾಗಿರಬಹುದು ಎಂಬ ಸತ್ಯ ತಿಳಿದುಬಂದಿದೆ.ಕೆಂಪು ರಕ್ತ ಕಣಗಳು ಮತ್ತು ಕೊಲ್ಯಾಜೆನ್‌ಗಳನ್ನು ನಿರ್ಮಿಸಲು ತಾಮ್ರ ಅಗತ್ಯವಾಗಿದ್ದು, ಆಹಾರದಿಂದ ದೇಹಕ್ಕೆ ಅಗತ್ಯವಿರುವ ಶಕ್ತಿಯ ಉತ್ಪಾದನೆ ಯಲ್ಲಿಯೂ ಸಹ ತಾಮ್ರ ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನೂ ಕೆಲವು ಅಧ್ಯಾಯನದ ವರದಿಯ ಪ್ರಕಾರ ತಾಮ್ರದ ಪಾತ್ರೆಗಳಲ್ಲಿ ಸುಮಾರು ಹದಿನಾರು ಗಂಟೆಗಳ ಕಾಲ ಶೇಖರಿಸಿಟ್ಟ ನೀರಿನಲ್ಲಿ ಸಾಲ್ಮೋನೆಲ್ಲಾ ಮತ್ತು ಈ ಕೊಲೈಗಳಂತಹ ಮಾರಕ ಬ್ಯಾಕ್ಟೀರಿಯಾಗಳು ಇಲ್ಲವಾದರಿಂದ ತಾಮ್ರದ ಪಾತ್ರೆಯಲ್ಲಿರುವ ನೀರು ಕುಡಿದರೆ ಆರೋಗ್ಯದ ಮೇಲೆ ಉತ್ತಮ ಪ್ರಯೋಜನ ಬೀರುತ್ತದೆ ಎಂದು ತಿಳಿಸಿದೆ.

ಹಿಂದಿನ ಕಾಲದಲ್ಲಿ ಪೂರ್ವಜರು ತಾಮ್ರದ ಪಾತ್ರೆಯಲ್ಲಿಯೇ ಅಡುಗೆ ಮಾಡುತ್ತಿದ್ದರು ಮತ್ತು ನೀರನ್ನು ಕುಡಿಯುತ್ತಿದ್ದರು. ಅಲ್ಲದೆ ತಾಮ್ರವೂ ಕೂಡ ನೀರನ್ನು ಶುದ್ಧಿ ಕರಿಸುವ ಗುಣವನ್ನು ಹೊಂದಿದ್ದು, ಕನಿಷ್ಠ ನಾಲ್ಕು ಗಂಟೆಗಳ ಕಾಲ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ದೇಹಕ್ಕೆ ಒಳ್ಳೆಯದು.ಜೊತೆಗೆ ತಾಮ್ರವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು , ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಬಳಸಿಕೊಂಡು ಬಳಿಕ ದೇಹದಿಂದ ಪರಿಣಾಮಕಾರಿಯಾಗಿ ಹೊರಹಾಕಲು, ಮತ್ತು ತೂಕ ಇಳಿಕೆಗೆ ಸಹಾಯಕವಾಗಿದೆ.

ತಾಮ್ರದಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು, ತಾಮ್ರದ ಬಿಂದಿಗೆಯ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಹಲವಾರು ಬ್ಯಾಕ್ಟೀರಿಯಾಗಳನ್ನು ಕೊಂದು ಜೀರ್ಣವ್ಯವಸ್ಥೆಯನ್ನ ಉತ್ತಮ ಗೊಳಿಸುತ್ತದೆ.ಅಲ್ಲದೆ ದೇಹದಲ್ಲಿನ ರಕ್ತದೊತ್ತಡ ನಿಯಂತ್ರಿಸಲು ಹಾಗೂ ಹೃದಯದ ಬಡಿತವನ್ನು ಕ್ರಮಬದ್ದಗೊಳಿಸಲು , ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಜೊತೆಗೆ ತಾಮ್ರವು ಅತಿಸೂಕ್ಷ್ಮಜೀವಿ ನಿರೋಧಕ ಗುಣವನ್ನು ಹೊಂದಿದ್ದು, ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಮತ್ತು ಸೋಂಕಿನ ವಿರುದ್ಧ ಪ್ರಬಲವಾಗಿ ಹೋರಾಡಲು ನೆರವಾಗುತ್ತದೆ