ಈ ನಟಿ ನಿಮಗೆ ನೆನಪಿದ್ದಾರಾ..? ಕನ್ನಡ ನನ್ನ ಶತ್ರು, ಪೂರ್ಣಚಂದ್ರ, ಪ್ರೇಮಖೈದಿ ಹಾಗೂ ಇತ್ತೀಚೆಗೆ ಬಿಡುಗಡೆಯಾದ ದರ್ಶನ್ ಅಭಿನಯದ ಅಂಬರೀಶ ಸಿನಿಮಾಗಳಲ್ಲಿ ನಟಿಸಿರುವ ಇವರು ಹೆಸರು ರೇಖಾ. ಇವರ ಮೊದಲ ಹೆಸರು ಜೋಸೆಫೆನ್. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದ ರೇಖಾ ಮಲಯಾಳಂ, ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ನಟಿಸಿದ್ದಾರೆ.
ಈ ನಟಿ ಸಿನಿಮಾಗಳ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಾವು ಬದುಕಿರುವಾಗಲೇ ತಮ್ಮ ಸಮಾಧಿ ಸ್ಥಳವನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಇಂತಹ ಘಟನೆಗಳು ಬಹಳ ಅಪರೂಪ ಬಿಡಿ. ಚೆನ್ನೈನ ಕಿಲ್ಪಾಕ್ ಎಂಬಲ್ಲಿ ತನ್ನ ತಂದೆ ಸಮಾಧಿ ಪಕ್ಕದಲ್ಲೇ ರೇಖಾ ಕೂಡಾ ತಮ್ಮ ಸಮಾಧಿ ಸ್ಥಳವನ್ನು ಖರೀದಿಸಿದ್ದಾರಂತೆ. ಹೀಗಂತ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಬಲವಾದ ಕಾರಣ ಕೂಡಾ ಇದೆ.
ರೇಖಾ, ತನ್ನ ತಂದೆ ವರದರಾಜ್ ಅವರನ್ನು ಬಹಳ ಇಷ್ಟಪಡುತ್ತಿದ್ದರಂತೆ. ತಂದೆ ಎಂದರೆ ಅವರಿಗೆ ಪ್ರಾಣ. ಆದರೆ ವರದರಾಜ್ ಅವರಿಗೆ ರೇಖಾ ಸಿನಿಮಾರಂಗಕ್ಕೆ ಬರುವುದು ಸ್ವಲ್ಪವೂ ಇಷ್ಟವಿರಲಿಲ್ಲವಂತೆ. ರೇಖಾ ಅವರು ನಟಿಸಿರುವ ಯಾವ ಸಿನಿಮಾವನ್ನು ಕೂಡಾ ತಂದೆ ನೋಡಿಲ್ಲವಂತೆ. ತಂದೆ ನನ್ನ ಸಿನಿಮಾಗಳನ್ನು ನೋಡಲಿಲ್ಲ ಎಂಬ ಬೇಸರ ಒಂದು ಕಡೆ ಆದರೆ, ತಂದೆ ಇಷ್ಟಕ್ಕೆ ವಿರುದ್ಧವಾದ ಕ್ಷೇತ್ರದಲ್ಲಿ ಮುಂದುವರೆದಿದ್ದಕ್ಕೆ ಅವರಿಗೆ ಪಶ್ಚಾತಾಪ ಕೂಡಾ ಇದೆಯಂತೆ.
ಆದರೆ ತನ್ನ ತಂದೆ ಸಮಾಧಿ ಪಕ್ಕದಲ್ಲೇ ತನ್ನ ಸಮಾಧಿ ಇರಬೇಕು ಎಂಬುದು ರೇಖಾ ಅವರ ಆಸೆಯಂತೆ. ಈಗಾಗಲೇ ಸೈಟ್ ಖರೀದಿಸಿದ್ದು, ತಾನು ಸತ್ತಾಗ ಅದೇ ಸ್ಥಳದಲ್ಲಿ ನನ್ನನ್ನು ಮಣ್ಣು ಮಾಡಬೇಕು ಎಂದು ಮನೆಯವರು ಹಾಗೂ ಸಂಬಂಧಿಕರ ಬಳಿ ರೇಖಾ ಮಾತು ಪಡೆದಿದ್ದಾರೆ ಎನ್ನಲಾಗಿದೆ.