ಕುಟುಂಬದ ಆರ್ಥಿಕ ಸಂಕಷ್ಟವನ್ನು ತೀರಿಸಿಕೊಳ್ಳಲು ಕೆಲವರು ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮಕ್ಕೆ ಬರುತ್ತಾರೆ. ಸಮಾಜಕ್ಕೆ ಏನಾದರೂ ಒಳಿತು ಮಾಡುವ ಉದ್ದೇಶದಿಂದ ಕೆಲವರು ಹಾಟ್ ಸೀಟ್ಮೇಲೆ ಕೂರುತ್ತಾರೆ. ವಿದ್ಯಾಭ್ಯಾಸಕ್ಕೆ ಸಹಾಯ ಆಗಲಿ ಎಂದೂ ಕೆಲವರು ಪುನೀತ್ ರಾಜ್ ಕುಮಾರ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಂಥದ್ರಲ್ಲಿ, ಇವರೆಲ್ಲರಿಗಿಂತಲೂ ಕೊಂಚ ವಿಭಿನ್ನವಾಗಿ ಕಂಡಿದ್ದು ಮನೋಜ್ ಎಂಬ ಯುವಕ.
‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಗೆದ್ದ ಹಣದಿಂದ ತಂದೆಗೆ ಸಹಾಯ ಮಾಡಬೇಕು ಎಂಬ ಇಚ್ಛೆಏನೋ ಮನೋಜ್ ಗಿದೆ. ಆದ್ರೆ,ಅದಕ್ಕಿಂತ ಹೆಚ್ಚಾಗಿ ತಾನು ಮುಟ್ಟಾಳ ಅಲ್ಲ ಎಂಬುದನ್ನ ತನ್ನ ತಂದೆಗೆ ಮನೋಜ್ ಸಾಬೀತು ಪಡಿಸಬೇಕಂತೆ. ಅದಕ್ಕಾಗಿ, ಕೋಟಿ ಗೆಲ್ಲುವ ಈ ಕಾರ್ಯಕ್ರಮಕ್ಕೆ ಮನೋಜ್ ಬಂದಿದ್ದಾನೆ.
ಹಲವು ಬಾರಿ ‘ಮುಟ್ಟಾಳ’ ಅಂತ ಮನೋಜ್ ಗೆ ಆತನ ತಂದೆ ತಿವಿದಿದ್ದಾರಂತೆ. ‘ತಾನು ಮುಟ್ಟಾಳ ಅಲ್ಲ..ಬುದ್ಧಿವಂತ’ ಎಂದು ಕರುನಾಡಿಗೆ ಸಾರುವ ಉದ್ದೇಶ ಮನೋಜ್ ಗಿತ್ತು. ಹಾಗಾದ್ರೆ,’ಕನ್ನಡದ ಕೋಟ್ಯಧಿಪತಿ’ಯಲ್ಲಿ ಮನೋಜ್ ಗೆದ್ದ ಮೊತ್ತವೆಷ್ಟು.? ಸಂಪೂರ್ಣ ಮಾಹಿತಿ ಫೋಟೋಸ್ಲೈಡ್ ಗಳಲ್ಲಿ ಓದಿರಿ…
”ಇನ್ನೊಬ್ಬರಮೇಲೆ ಅವಲಂಬಿತನಾಗದೆ, ಸ್ವಂತ ಕಾಲ ಮೇಲೆ ನಿಲ್ಲಲಿ, ಕಷ್ಟ ಗೊತ್ತಾಗಲಿ ಎಂಬ ಕಾರಣಕ್ಕೆ ‘ಮುಟ್ಟಾಳ’ ಅಂತ ಕರೆದಿದ್ದೆ” ಎನ್ನುತ್ತಾರೆ ಮನೋಜ್ ತಂದೆ. ಅಂದ್ಹಾಗೆ, ಮನೋಜ್ತಂದೆ ಹಿಂದಿ ಶಿಕ್ಷಕರು. ಈ ಕಾರ್ಯಕ್ರಮದಲ್ಲಿ ಮನೋಜ್ ಗೆಲ್ಲುವ ಹಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸದುದ್ದೇಶ ಮನೋಜ್ ತಂದೆಗಿತ್ತು.