ಈ ತರಕಾರಿ ವ್ಯಾಪಾರಿಯ ಸಮಯೋಚಿತ ನಿರ್ಧಾರದಿಂದ ಆಗಬಹುದಾದ ಭಾರೀ ಅನಾಹುತ ತಪ್ಪಿದೆ.
ಕಂಜೂರ್ ಮಾರ್ಗ್ ಮತ್ತು ಭಂದೂಪ್ ರೈಲು ನಿಲ್ದಾಣಗಳ ನಡುವೆ ಸುಮಾರು ಒಂದೂವರೆ ಅಡಿಗಳಷ್ಟು ರೈಲು ಹಳಿ ಕಾಣಿಸದಿರುವುದನ್ನು ಈ ವ್ಯಾಪಾರಿ ಗಮನಿಸಿದ್ದಾರೆ.
ಅದೇ ವೇಳೆಗೆ ರೈಲೊಂದು ಬರುತ್ತಿರುವುದನ್ನೂ ನೋಡಿದ್ದಾರೆ. ರೈಲು ಇಲ್ಲಿಗೆ ಬಂದರೆ ಭಾರೀ ಅನಾಹುತ ಸಂಭವಿಸುವುದು ಗ್ಯಾರಂಟಿ ಎಂಬುದನ್ನು ಅರಿತ ಆತ ತಡ ಮಾಡದೇ ತನ್ನ ಕೈಲಿದ್ದ ಛತ್ರಿಯನ್ನು ಓಪನ್ ಮಾಡಿ ರೈಲು ಹಳಿಗಳ ಮಧ್ಯೆ ನಿಂತು ರೈಲು ನಿಲ್ಲಿಸುವಂತೆ ಸೂಚಿಸಿದ್ದಾರೆ.
ಇದನ್ನು ಕಂಡ ರೈಲಿನ ಲೋಕೋಪೈಲಟ್ ರೈಲನ್ನು ನಿಲ್ಲಿಸಿದ್ದಾರೆ. ಬಂದು ನೋಡಿದರೆ ರೈಲು ಹಳಿಯೇ ಮಾಯವಾಗಿದ್ದನ್ನು ತೋರಿಸಿದ ವ್ಯಾಪಾರಿ ಈ ಮಾರ್ಗದಲ್ಲಿ ಸಂಚರಿಸಿದ್ದರೆ ಭಾರೀ ಅವಘಡವಾಗುತ್ತಿತ್ತು ಎಂದು ವಿವರಿಸಿದ್ದಾರೆ. ಈ ವ್ಯಾಪಾರಿಯ ಸಕಾಲಿಕ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.