ಸಂಗಾತಿ ನಮ್ಮನ್ನು ಬಿಟ್ಟು ಇತರರನ್ನು ಹೊಗಳಿದ್ರೂ ಅಸೂಯೆ ಉಂಟಾಗೋದು ಸಹಜ. ಸಾಮಾನ್ಯವಾಗಿ ಪ್ರೇಯಸಿ ಎದುರಲ್ಲೇ ಹುಡುಗರು ಇತರ ಯುವತಿಯರತ್ತ ಕಣ್ಣು ಹಾಯಿಸ್ತಾರೆ. ಫ್ಲರ್ಟ್ ಮಾಡ್ತಾರೆ. ಇದನ್ನೆಲ್ಲ ಪ್ರೇಯಸಿ ತಮಾಷೆಯಾಗಿ ತೆಗೆದುಕೊಂಡ್ರೆ ಓಕೆ, ಇಲ್ಲದೇ ಇದ್ರೆ ಬ್ರೇಕಪ್ ಕೂಡ ಆಗಿಬಿಡಬಹುದು.
ಎಂಥಾ ಸುದೀರ್ಘ ಕಾಲದ ಪ್ರೇಮಮಯ ಸಂಬಂಧವಾಗಿದ್ರೂ ಇತರರ ಕಡೆಗೆ ಆಕರ್ಷಿತರಾಗುವುದು ಸಹಜ ಎನ್ನುತ್ತಾರೆ ಸಂಶೋಧಕರು. ಯಾಕೆ ಎಲ್ಲರೂ ಈ ರೀತಿ ಮಾಡ್ತಾರೆ ಅನ್ನೋದಕ್ಕೆ ಕೂಡ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ.
ಗಂಡು-ಹೆಣ್ಣು ಪರಸ್ಪರ ಆಕರ್ಷಿತರಾಗುವುದು ಸಹಜ. ಮಹಿಳೆ ಸಾಮಾನ್ಯವಾಗಿ ಮೊದಲು ಪುರುಷನ ದೇಹದ ಮೇಲ್ಭಾಗವನ್ನು ಗಮನಿಸುತ್ತಾಳಂತೆ. ಆದ್ರೆ ಪುರುಷರ ಗಮನ ಮಾತ್ರ ಮಹಿಳೆಯರ ಸ್ತನ, ಸೊಂಟ ಮತ್ತು ಹಿಪ್ಸ್ ಮೇಲಿರುತ್ತದೆ.
ಒಬ್ಬಳನ್ನು ಪ್ರೀತಿಸುತ್ತಿದ್ರೂ ಅಥವಾ ಮದುವೆಯಾಗಿದ್ರೂ ಪರಸ್ತ್ರೀ ಕಡೆಗೆ ಕಣ್ಣು ಹಾಯಿಸುವ ಅಭ್ಯಾಸ ಪುರುಷರಲ್ಲೇ ಹೆಚ್ಚಾಗಿರುತ್ತದೆ. ಪರಪುರುಷನ ಕಡೆಗೆ ಆಸೆಗಣ್ಣಿನಿಂದ ನೋಡುವ ಮಹಿಳೆಯರ ಸಂಖ್ಯೆ ಕಡಿಮೆ ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ.
ಯಾರು ಇಂತಹ ಆಕರ್ಷಣೆಗೆ ಒಳಗಾಗುವುದಿಲ್ವೋ ಅವರೇ ಜೀವನದಲ್ಲಿ ಹೆಚ್ಚು ಖುಷಿಯಾಗಿ, ತೃಪ್ತಿಯಿಂದ ಇರುತ್ತಾರಂತೆ. ಆಕರ್ಷಣೆ ಸಹಜ, ಆದ್ರೆ ಅದು ನಿಮ್ಮ ಸಂಬಂಧಕ್ಕೆ ಕುತ್ತು ತರುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಅತ್ತಿತ್ತ ಕಣ್ಣು ಹಾಯಿಸದೇ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ.