ಮುಸ್ಲಿಂ ಸಮುದಾಯದಲ್ಲಿ ಸಾಮಾನ್ಯವಾಗಿ ಮಹಿಳೆಯರು ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ಸಂಪ್ರದಾಯವಿದೆ. ಇನ್ನು ಪಾಕಿಸ್ತಾನದಂತ ರಾಷ್ಟ್ರಗಳಲ್ಲಿ ಈ ನಿಯಮ ಕಡ್ಡಾಯ. ಆದರೆ ಇಲ್ಲೊಂದು ಜೋಡಿ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ಊಟಕ್ಕೆ ತೆರಳಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದಾರೆ.
ಹೌದು, ಪಾಕಿಸ್ತಾನ ಮೂಲದ ನವವಿವಾಹಿತ ಜೋಡಿಯೊಂದು ಊಟಕ್ಕೆ ತೆರಳಿದ್ದು, ಈ ವೇಳೆ ಯುವತಿ ಬುರ್ಖಾ ಧರಿಸಿಲ್ಲ. ಬದಲಿಗೆ ಆಕೆಯ ಪತಿ ಬುರ್ಖಾ ಧರಿಸಿದ್ದಾನೆ. ಪುರುಷ ಪ್ರಧಾನ ಸಮುದಾಯದಲ್ಲಿರುವ ಈ ರೀತಿಯ ಮೌಢ್ಯ ಹಾಗೂ ಮಹಿಳಾ ಸಬಲೀಕರಣ ವಿರೋಧಿ ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಈ ರೀತಿ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಪತ್ನಿ, ಈ ರೀತಿ ಮಾಡುವುದರಿಂದ ಮುಂದಿನ ದಿನದಲ್ಲಿ ಸಮಸ್ಯೆಯಾಗುತ್ತದೆ ಎನ್ನುವ ಅರಿವಿದ್ದರು ಮಾಡುತ್ತಿದ್ದೇವೆ. ಇನ್ನು ಪುರುಷ ಪ್ರಧಾನ ಸಮಾಜ ಕಟ್ಟಲೆಗಳನ್ನು ತೆಗೆಯಲು ನನ್ನೊಂದಿಗೆ ಪತಿಯಿದ್ದು, ಆತನ ಸೌಂದರ್ಯ ನಿಮಗೆ ಯಾರಿಗೂ ಕಾಣಿಸುವುದಿಲ್ಲ. ಕಾರಣ ಆತ ಬುರ್ಖಾ ಧರಿಸಿದ್ದಾನೆ ಎಂದು ಬರೆದುಕೊಂಡಿದ್ದಾಳೆ.
ಇನ್ನು ಈ ಪೋಸ್ಟ್ ಹಾಕುತ್ತಿದ್ದಂತೆ ನೆಟ್ಟಿಗರು ಪರ-ವಿರೋಧ ಚರ್ಚೆಯನ್ನು ಶುರುಮಾಡಿದ್ದು, ಅನೇಕರು ಯುವತಿಯ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಮುಸ್ಲಿಂ ಸಮುದಾಯದ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.