ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಸುಮಾರು 710 ಅಡಿ ಕೆಳಗಿನ ಪ್ರದೇಶದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದನ್ನು ಪತ್ತೆ ಹಚ್ಚಿರುವ ಬೆಳವಣಿಗೆ ವಿಶ್ವಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.
ಈ ಜೀವಂತ ಪಳೆಯುಳಿಕೆ ಟೈರನ್ನೋಸರಸ್ ರೆಕ್ಸ್ ಹಾಗೂ ಟ್ರೈಸೆರಟಾಪ್ಸ್ ಇದ್ದಂತಹ ಕಾಲದ್ದಾಗಿರಬೇಕು ಹಾಗೂ ೮೦ ಲಕ್ಷ ವರ್ಷದ ಹಳೆಯದ್ದಾಗಿರಬೇಕೆಂದು ಅಂದಾಜಿಸಲಾಗಿದೆ.
ಯುರೋಪಿಯನ್ ಯೂನಿಯನ್ ಪ್ರಾಜೆಕ್ಟ್ ಸಂಶೋಧಕರು ಈ ಹಾವಿನಂತಿರುವ ಗಂಡು ತಿಮಿಂಗಿಲವನ್ನು ಅಲ್ಗಾರ್ವೇ ತೀರದಲ್ಲಿ ಈ ಬೇಸಿಗೆಯಲ್ಲಿ ಪತ್ತೆ ಹಚ್ಚಿದ್ದರು. ಈ ಜೀವಿ ಉದ್ದ, ಸಪೂರವಾಗಿದ್ದು ಹಾವಿನಂತಹ ದೇಹಾಕೃತಿ ಹೊಂದಿದೆ ಹಾಗೂ ೧.೫ ಮೀಟರ್ ಉದ್ದವಿದೆ.
ಈ ಜೀವಿಯನ್ನು ’ಖ್ಲಾಮಿಡೊಸೆಲಖಸ್ ಎಂಗುನಿಯಸ್’ ಎಂದು ಹೆಸರಿಸಲಾಗಿದ್ದು ಅದರ 3೦೦ ಹಲ್ಲುಗಳು 25 ಸಾಲುಗಳಲ್ಲಿ ಫ್ರಿಲ್ ಮಾದರಿ ಜೋಡಿಸಲ್ಪಟ್ಟಿವೆ. ಈ ತಿಮಿಂಗಿಲಕ್ಕೆ ಆರು ಜತೆ ಗಿಲ್ ಅಥವಾ ಶ್ವಾಸಾಂಗವಿದ್ದು ಅದರ ಅಂಚುಗಳು ನೆರಿಗೆಯಾಕಾರದಲ್ಲಿವೆ. ಸಾಗರ ತಳದಲ್ಲಿ ಸಾಕಷ್ಟು ಪೋಷಕಾಂಶಗಳು ದೊರೆಯದೆ ಈ ಜೀವಿ ಬೆಳೆದಿಲ್ಲವೆನ್ನಲಾಗಿದೆ.
ಪೋರ್ಚುಗೀಸ್ ಇನ್ಸ್ಟಿಟ್ಯೂಟ್ ಫಾರ್ ದಿ ಸೀ ಎಂಡ್ ಎಟ್ಮಾಸ್ಫಿಯರ್ ಈ ಜೀವಿಯನ್ನು ‘ಲಿವಿಂಗ್ ಫಾಸ್ಸಿಲ್’ ಎಂಉ ಬಣ್ಣಿಸಿದೆ. ಆಸ್ಟ್ರೇಲಿಯಾ, ಜಪಾನ್ ಮತ್ತು ನ್ಯೂಜಿಲೆಂಡಿನಲ್ಲಿ ಇತ್ತೀಚೆಗೆ ಪತ್ತೆ ಹಚ್ಚಲಾದ ತಿಮಿಂಗಿಲಗಳ ಪಟ್ಟಿಗೆ ಇದು ಸೇರಿದೆ.