ಹೈದ್ರಾಬಾದ್ ನಲ್ಲಿ ಡಿಸೆಂಬರ್ 1ರಂದು ಭಿಕ್ಷುಕರನ್ನು ಪತ್ತೆ ಮಾಡಿದ್ರೆ ನಿಮಗೆ 500 ರೂಪಾಯಿ ಬಹುಮಾನ ಸಿಗಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಹೈದ್ರಾಬಾದ್ ಗೆ ಆಗಮಿಸ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರವನ್ನು ಸಂಪೂರ್ಣವಾಗಿ ಭಿಕ್ಷುಕರಿಂದ ಮುಕ್ತಗೊಳಿಸುವುದು ಸರ್ಕಾರದ ಉದ್ದೇಶ.
ನವೆಂಬರ್ ಅಂತ್ಯದಿಂದ್ಲೇ ಭಿಕ್ಷುಕರನ್ನು ಹಿಡಿಯುವ ಕೆಲಸ ಆರಂಭವಾಗಲಿದೆ. ಡಿಸೆಂಬರ್ 1ರ ನಂತರ ರಸ್ತೆ ಬದಿಯಲ್ಲಿ, ಫುಟ್ಪಾತ್, ರೈಲು ನಿಲ್ದಾಣ, ಸೇತುವೆಗಳ ಕೆಳಗೆ ಎಲ್ಲಾದ್ರೂ ಭಿಕ್ಷುಕರನ್ನು ಕಂಡ್ರೆ ಸಾರ್ವಜನಿಕರು ಮಾಹಿತಿ ನೀಡಬಹುದು. ಅಂಥವರಿಗೆ 500 ರೂಪಾಯಿ ಸರ್ಕಾರದ ವತಿಯಿಂದ ದೊರೆಯಲಿದೆ.
ಈಗಾಗ್ಲೇ ಸುಮಾರು 200ಕ್ಕೂ ಹೆಚ್ಚು ಭಿಕ್ಷುಕರನ್ನು ಹಿಡಿದು ಅವರ ಬೆರಳಚ್ಚು ಮತ್ತು ಇತರ ದಾಖಲೆಗಳನ್ನು ಪಡೆದುಕೊಂಡು ಬಿಟ್ಟು ಕಳಿಸಲಾಗಿದೆ. ಮತ್ತೊಮ್ಮೆ ಅವರು ಭಿಕ್ಷೆ ಬೇಡಿದ್ದು ಕಂಡುಬಂದಲ್ಲಿ ಜೈಲಿಗೆ ಹಾಕುವುದಾಗಿ ಸರ್ಕಾರ ಎಚ್ಚರಿಸಿದೆ. ಅಕ್ಟೋಬರ್ 20ರಿಂದ್ಲೇ ಈ ಕಾರ್ಯ ಆರಂಭವಾಗಿದೆ.