ಮಹಿಳೆಯರು ಹೆಚ್ಚಾಗಿ ಬಿಸಿಲಿಗೆ ಹೋಗುವಾಗ ಲೋಷನ್ ಹಚ್ಚಿಕೊಂಡು ಹಾಗೂ ಮುಖಕ್ಕೆ ಸ್ಕರ್ಫ್ಕ ಕಟ್ಟಿಕೊಂಡು ಹೋಗುತ್ತಾರೆ. ಹೀಗೆ ನಾವು ಕವರ್ ಮಡಿದ ಜಾಗವನ್ನ ಬಿಟ್ಟು ಬೇರೆ ಎಲ್ಲಾಕಡೆ ಸೂರ್ಯನ ಕಿರಣಗಳಿಂದ ನಮ್ಮ ಚರ್ಮ ಸುಟ್ಟು ಕಪ್ಪಾಗಿರುತ್ತದೆ. ಹೀಗೆ ಟ್ಯಾನ್ ಆಗಿರುವುದನ್ನ ತೆಗೆದು ಹಾಕಲು ನೀವು ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಳ್ಳಬಹುದು.
ಅಡುಗೆ ಮನೆಯಲ್ಲಿರುವ ಟೋಮೋಟೋ ನಿಮ್ಮ ದೇಹದ ಮೇಲಿನ ಕಲೆಯನ್ನು ತೆಗೆದು ಹಾಕುತ್ತದೆ. ಟೋಮೋಟೋದಲ್ಲಿರುವ ಲೈಕೊಪೀನ್ ಚರ್ಮದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ವಿಟಮಿನ್ ಸಿ ಮತ್ತು ಎಂಟಿಆಕ್ಸಿಡೆಂಟ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಚರ್ಮದ ಡೆಡ್ ಸ್ಕಿನ್ ತೆಗೆದು ಹಾಕುವ ಜೊತೆಗೆ ಕಲೆಯನ್ನು ದೂರ ಮಾಡುತ್ತದೆ.
ಒಂದು ಟಬ್ ಬಿಸಿ ನೀರಿಗೆ ಉಪ್ಪು ಹಾಗೂ ಶಾಂಪೂ ಹಾಕಿ. ಇದಾದ ನಂತ್ರ ನಿಮ್ಮ ಪಾದವನ್ನು ಈ ನೀರಿನಲ್ಲಿ 20 ನಿಮಿಷಗಳ ಕಾಲ ಇಟ್ಟುಕೊಳ್ಳಿ. ನಂತರ ಕಾಲನ್ನು ಬೇರೆ ನೀರಿನಲ್ಲಿ ಕ್ಲೀನ್ ಮಾಡಿ, ಟೊಮೊಟೊ, ಕಡಲೆ ಹಿಟ್ಟು ಹಾಗೂ ಗುಲಾಬಿ ನೀರನ್ನು ಮಿಕ್ಸ್ ಮಾಡಿ ಅದನ್ನು ಕಾಲಿಗೆ ಹಚ್ಚಿಕೊಳ್ಳಿ. ಕೆಲ ಸಮಯ ಬಿಟ್ಟು ಕಾಲನ್ನು ಸ್ವಚ್ಛಗೊಳಿಸಿ.