ಟೀ ಪ್ರಿಯರಿಗೆ ಹೊಸ ಸಿಹಿ ಸುದ್ದಿ . ಇದುವರೆಗೂ ಟೀ ಪ್ರಿಯರು ಮಸಾಲಾ ಟೀ, ಲೈಮ್ ಟೀ, ಹರ್ಬಲ್ ಟೀ, ಗ್ರೀನ್ ಟೀ, ಮಶ್ರೂಮ್ ಟೀ ಎಂದೆಲ್ಲ ಹೊಸ ಹೊಸ ಟೀಗಳನ್ನು ಜನರು ಟೆಸ್ಟ್ ಮಾಡಿರಬಹುದು ಇದೀಗಾ ಈ ಟೀಗಳ ಸಾಲಿಗೆ ಹೊಸ ಟೀಂ ಒಂದು ಸೇರ್ಪಡೆಯಾಗುತ್ತಿದೆ. ಯಾವುದಪ್ಪಾ ಅದು ಅಂತೀರಾ? ಹೌದು ಭಾರತಕ್ಕೆ ಬಬಲ್ ಟೀ ಎಂಬ ಹೊಸ ಟೀ ಬಂದಿದೆ. ಬಬಲ್ ಟೀ ಎಂದೊಡನೆ ಟೀ ನಲ್ಲಿ ಬಬಲ್ ಇರಬಹುದು ಎಂದು ಊಹಿಸಬೇಡಿ . ಈ ಟೀ ಮೂಲತಃ ಥೈವಾನ್ ಟೀಯಿಂದ ಹುಟ್ಟಿಕೊಂಡಿದ್ದು, ಇದೊಂದು ಆಲ್ಕೋಹಾಲ್ ರಹಿತವಾದ, ಕಾರ್ಬೋನೇಟೆಡ್ ಅಲ್ಲದ ತಣ್ಣನೆಯ ಹಾಲಿನಿಂದ ತಯಾರಿಸಿದ ಟೀ ಇದಾಗಿದೆ. ಟಾಪಿಯೋಕ ಪರ್ಲ್ ಡ್ರಿಂಕ್, ಬಿಗ್ ಪರ್ಲ್, ಬೊಬಾ ನೈ ಚಾಯ್ ಮುಂತಾದ ಹೆಸರುಗಳು ಬಬಲ್ ಟೀಗಿದೆ.
ಇನ್ನೂ ಈ ಟೀನಲ್ಲಿ ವಿಶೆಷವಾಗಿ ಜೆಲ್ಲಿಗಳಂತಿರುವ ‘ಟ್ಯಾಪಿಕೊ ಪರ್ಲ್’ ಹಾಕಿರುವುದರಿಂದ ಈ ಜ್ಯೂಸ್‌ಗೆ ‘ಬಬಲ್ ಟೀ’ ಎಂಬ ವಿಶೇಷ ಹೆಸರು ಬಂದಿದೆ. ಪೇಯದ ಬುಡದಲ್ಲಿ ಕಾಮಕಸ್ತೂರಿ ಬೀಜದಂತೆ ಕಾಣುತ್ತಿರುತ್ತದೆ. ಅಲ್ಲದೆ ಬಬಲ್ ಟೀ ಫೇಮಸ್ ಆಗುತ್ತಿದ್ದಂತೆಯೇ ಇದರಲ್ಲಿ ಹತ್ತು ಹಲವು ರೀತಿಯ ಫ್ಲೇವರ್‌ಗಳು, ವಿಧಗಳು ಹುಟ್ಟಿಕೊಂಡಿದೆ. 1980ರಲ್ಲಿ ತೈವಾನ್‌ನ ಟೀ ಅಂಗಡಿ ಮಾಲೀಕ ಲಿಯು ಹನ್-ಚೀ ಎಂಬಾತ ತನ್ನ ಅಂಗಡಿಯತ್ತಾ ಜನರನ್ನು ಸೆಳೆಯಲು ಏನಾದರೂ ಹೊಸತನ್ನು ಕಂಡು ಹಿಡಿಯಬೇಕೆಂದು ಕೋಲ್ಡ್ ಮಿಲ್ಕ್ ಟೀಗೆ ಯಮ್, ಹಣ್ಣುಗಳು, ಸಿರಪ್‌ಗಳು ಹಾಗೂ ಟ್ಯಾಪಿಕೊ ಬಾಲ್‌ಗಳನ್ನು ಹಾಕಿ ಮೊದಲು ಈ ಪಾನೀಯವನ್ನು ತಯಾರಿಸಿದ.
ತದನಂತರ ಹತ್ತು ವರ್ಷದಲ್ಲಿ ಇದು ಪೂರ್ವ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಜನಪ್ರಿಯಗೊಂಡಿತು. ಸದ್ಯ ಥೈವಾನ್‌ನ ಪ್ರತೀ ಟೀ ಅಂಗಡಿಗಳೂ ಇದು ತಮ್ಮ ಹೆಗ್ಗುರುತು ಎಂಬಂತೆ ಬಬಲ್ ಟೀ ತಯಾರಿಸುತ್ತವೆ. ಇದರ ಬೇಡಿಕೆ ಹೆಚ್ಚಾಗುತ್ತಿದಂತೆಯೇ ಮತ್ತಷ್ಟು ಹೊಸ ಹೊಸ ರುಚಿಗಳನ್ನು ಕಂಡು ಹಿಡಿದು ಮಾರಲು ಆರಂಭಿಸಿದರು. ಈಗಾಗಲೇ ಅಮೆರಿಕ, ಆಸ್ಟ್ರೇಲಿಯಾ, ಯೂರೋಪ್, ದಕ್ಷಿಣ ಆಫ್ರಿಕಾ ಅಷ್ಟೇ ಏಕೆ, ಬೆಂಗಳೂರಿನ ಮಾಲ್‌ಗಳಲ್ಲಿ ಕೂಡಾ ಈ ಬಬಲ್ ಟೀ ಎಲ್ಲರನ್ನು ಆಕರ್ಷಿಸುತ್ತಾ. ಜನಪ್ರೀತಿ ಗಳಿಸಿದೆ.
ಇನ್ನೂ ಈ ತಂಪಾದ ಪಾನೀಯದ ರುಚಿ ಹಣ್ಣು, ಅದಕ್ಕೆ ಸೇರಿಸುವ ಬೇಸ್ ಮತ್ತು ಸಿರಪ್‌ಗಳ ಮೇಲೆ ಆಧರಿಸಿದ್ದು, ಬಳಸುವ ಸಾಮಗ್ರಿಗಳಿಗೆ ಅನುಗುಣವಾಗಿ ಈ ಪೇಯ ಕೆಲವೊಮ್ಮೆ ಸಿಹಿ ಅಥವಾ ಕಹಿಯಾಗಿರಬಹುದು. ಅಧ್ಯಯನಗಳ ಪ್ರಕಾರ, ಒಂದು ಬಾರಿಯ ಸರ್ವಿಂಗ್‌ನ ಈ ಪೇಯದಲ್ಲಿ 38 ಗ್ರಾಂನಷ್ಟು ಸಕ್ಕರೆ ಇದ್ದು, 300ರಿಂದ 400 ಕ್ಯಾಲೊರಿ ಇರುತ್ತದೆ. ನಿಮ್ಮ ದೇಹಾರೋಗ್ಯಕ್ಕೆ ಬಬಲ್ ಟೀಯಲ್ಲಿ ನೀವು ಯಾವ ಹಣ್ಣು ಬಳಸುತ್ತೀರಾ? ಮತ್ತು ಎಷ್ಟು ಸಕ್ಕರೆ ಹಾಕುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಬೇಕಾದರೆ ನೀವು ಇದಕ್ಕೆ ಆಯಾ ಸೀಸನ್‌ಗೆ ತಕ್ಕಂತೆ ಮಾವು, ಬಾಳೆಹಣ್ಣು, ಕಲ್ಲಂಗಡಿ ಮುಂತಾದ ಹಣ್ಣುಗಳನ್ನು ಇದಕ್ಕಾಗಿ ಬಳಸಬಹುದು. ಟ್ಯಾಪಿಕೋ ಪರ್ಲ್‌ಗಳಲ್ಲಿ ಪ್ರೋಟೀನ್, ವಿಟಮಿನ್ ಕೆ, ಕ್ಯಾಲ್ಶಿಯಂ ಹಾಗೂ ಪೊಟ್ಯಾಶಿಯಂ ಅಧಿಕವಾಗಿದ್ದು, ಹಾಗಾಗಿ ಈ ಬಬಲ್‌ಗಳು ಟೀಗೆ ಹೆಚ್ಚಿನ ಪೋಷಕಾಂಶ ಒದಗಿಸುತ್ತವೆ
ಅಲ್ಲದೆ ಬಬಲ್ ಟೀ ತಯಾರಿಸುವಾಗ ಅತಿಯಾಗಿ ಸಕ್ಕರೆ ಹಾಗೂ ಫ್ಲೇವರ್ ಬಳಸಿದರೆ ಖಂಡಿತಾ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳನ್ನು ಅವಾಯ್ಡ್ ಮಾಡಿ ಹಣ್ಣುಗಳನ್ನು ಬಳಸಿ ತಯಾರಿಸಿದರೆ ಪೇಯವು ಸಹಜವಾಗಿಯೇ ಸಿಹಿಯಾಗುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಸದ್ಯ ಭಾರತದಲ್ಲಿ ಫೇಮಸ್ಆಗಿರುವ ಈ ಟೀನಲ್ಲಿ ಹಲವು ವೆರೈಟಿಗಳಿದ್ದು, ಕಾಫಿ ಬಬಲ್ ಟೀ, ಕೋಕೋನಟ್ ಬಬಲ್ ಟೀ, ಮ್ಯಾಂಗೋ ಬಬಲ್ ಟೀ, ಕ್ಲಾಸಿಕ್ ಬಬಲ್ ಟೀ ಹಾಗೂ ಸ್ಟ್ರಾಬೆರಿ ಆಲ್ಮಂಡ್ ಮಿಲ್ಕ್ ಬಬಲ್ ಟೀ ಎಂಬುವುದು ಎಲ್ಲೆಡೆ ದೊರೆಯುತ್ತಿದೆ. ಹಾಗದರೆ ಇನ್ನೂ ಯಾಕ್ ಯೋಚನೆ ಮಾಡುತ್ತಿದ್ದೀರಾ? ನೀವು ಟೆಸ್ಟ್ ಮಾಡಿಲ್ಲವಾದಲ್ಲಿ ಒಮ್ಮೆ ಹೋಗಿ ಬಬಲ್ ಟೀಯನ್ನು ಟ್ರೈ ಮಾಡಿ.