ಸದ್ಯ ಪಿತೃಪಕ್ಷ ನಡೆಯುತ್ತಿದೆ. ಹಿಂದೂ ಧರ್ಮದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಪೂರ್ವಜರ ಆತ್ಮಕ್ಕೆ ಶಾಂತಿ ನೀಡಲು ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡಲಾಗುತ್ತದೆ. ದೇಶದ ಮೂಲೆ ಮೂಲೆಗಳಿಂದ ಜನರು ಗಯಾಕ್ಕೆ ಬಂದು ಪಿಂಡದಾನ ಮಾಡ್ತಾರೆ.
ಒಡಿಸಾದ ಕಠ್ಮಂಡುವಿನಿಂದ ಬಂದ ಪಿಂಡದಾನಿಗಳ ತಂಡವೊಂದು ಗಮನ ಸೆಳೆದಿದೆ. ಅವ್ರು ರೈಲಿನಲ್ಲಿ ಪೂರ್ವಜರಿಗೂ ಟಿಕೆಟ್ ಬುಕ್ ಮಾಡಿದ್ದಾರೆ. ಪೂರ್ವಜರ ಬಗ್ಗೆ ಇವರಿಗೆ ನಂಬಿಕೆಯಿಂದೆಯಂತೆ. ಪಿಂಡದಾನಕ್ಕೆ ಬರುವ ಏಳು ದಿನಗಳ ಮೊದಲು ಭಗವದ್ಗೀತೆ ಪಠಣ ಮಾಡ್ತಾರಂತೆ. ನಂತ್ರ ಪೂರ್ವಜರ ವಸ್ತುಗಳನ್ನು ಕಟ್ಟಿ ಪಿತೃದಂಡ ಸಿದ್ಧಪಡಿಸುತ್ತಾರಂತೆ. ಈ ಪಿತೃದಂಡಕ್ಕೆ ಅವ್ರು ಟಿಕೆಟ್ ಬುಕ್ ಮಾಡಿದ್ದಾರೆ.
ಪ್ರಯಾಣದ ವೇಳೆ ಪಿತೃದಂಡವನ್ನು ಸೀಟ್ ಮೇಲೆ ಕಟ್ಟಲಾಗುತ್ತದೆ. ಟಿಟಿ ಬಂದ್ರೆ ಪಿತೃದಂಡಕ್ಕೂ ಟಿಕೆಟ್ ಮಾಡಿಸಿರುವುದನ್ನು ತೋರಿಸುತ್ತಾರಂತೆ. ಶಿಫ್ಟ್ ನಂತೆ ಸತತ 2 ಗಂಟೆಗಳ ಕಾಲ ಪ್ರತಿಯೊಬ್ಬರೂ ಪಿತೃದಂಡವನ್ನು ಕಾಯ್ತಾರೆ.
ಉಳಿದ ಪ್ರಯಾಣಿಕರು ಅದಕ್ಕೆ ಹಾನಿ ಮಾಡದಿರಲಿ ಎಂಬುದು ಅವ್ರ ಉದ್ದೇಶ. ಪೂರ್ವಜರು ನಮ್ಮನ್ನು ಸಾಕಿದ್ದಾರೆ. ಈಗ ನಾವು ಅವ್ರನ್ನು ಸರಿಯಾಗಿ ನೋಡಿಕೊಂಡು, ನಂತ್ರ ಗಯಾದಲ್ಲಿ ಪಿಂಡದಾನ ಮಾಡ್ತೇವೆ ಎಂದಿದ್ದಾರೆ.