ಸಿನಿಮಾ

ಟಾಲಿವುಡ್ ಸ್ಟಾರ್ ಪ್ರಭಾಸ್ ಚಿರಂಜೀವಿ ಫ್ಯಾಮಿಲಿಯ ಅಳಿಯನಾಗ್ತಾರಾ ..?ತಿಳಿಯಲು ಈ ಲೇಖನ ಓದಿ…

By admin

December 18, 2017

ಬಾಹುಬಲಿ -2’ ಬಂದಿದ್ದೇ ಬಂದಿದ್ದು ಟಾಲಿವುಡ್ ಸ್ಟಾರ್ ಪ್ರಭಾಸ್ ಮನೆ ಮಾತಾಗಿದ್ದಾರೆ. ಈ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸುದ್ದಿಯಾದ ವಿಷಯಗಳಲ್ಲಿ ಪ್ರಭಾಸ್ ಮದುವೆ ಸುದ್ದಿ ಕೂಡ ಪ್ರಮುಖವಾಗಿದೆ.

ಟಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಬ್ಯಾಚುಲರ್ ಹೀರೋ ಅಂದ್ರೆ ಪ್ರಭಾಸ್. ಕೆಲವು ದಿನಗಳಿಂದ ಈ ನಟನ ಮದುವೆಯ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿದೆ. ಆದರೆ ಈಗ ಟಾಲಿವುಡ್ ಅಂಗಳದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ನಿಹಾರಿಕಾ ಅವರೊಂದಿಗೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳತೊಡಗಿದೆ.

ಚಿರಂಜೀವಿ ಸಹೋದರ ಹಾಗೂ ನಟ ನಾಗೇಂದ್ರ ಬಾಬು ಅವರ ಪುತ್ರಿ ನಿಹಾರಿಕಾರನ್ನು ಪ್ರಭಾಸ್ ಮದುವೆಯಾಗಲಿದ್ದಾರೆ. ನಿರೂಪಕಿಯಾಗಿದ್ದ ನಿಹಾರಿಕಾ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಟ ವರುಣ್ ತೇಜ ಸಹೋದರಿ ನಿಹಾರಿಕಾ ಅವರನ್ನು ಪ್ರಭಾಸ್ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಆದರೆ, ಇದನ್ನು ಚಿರಂಜೀವಿ ಅಲ್ಲಗಳೆದಿದ್ದಾರೆ..

ನಿಹಾರಿಕಾ ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರಲ್ಲಿ ತೆರಕಂಡ ‘ಒಕ ಮನಸು’ ಸಿನಿಮಾದ ಮೂಲಕ ಸಿನಿ ಅಂಗಳಕ್ಕೆ ಪಾದರ್ಪಣೆ ಮಾಡಿದ್ದಾರೆ. ಪ್ರಭಾಸ್ ಮತ್ತು ನಿಹಾರಿಕಾ ಮದುವೆಯ ಬಗ್ಗೆ ನಟನ ಕೃಷ್ಣಂರಾಜು ಚಿರಂಜೀವಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಗಾಸಿಪ್ ಗಳು ಹರಿದಾಡುತ್ತಿವೆ.

ಇತ್ತ ಚಿರಂಜೀವಿ ಕುಟುಂಬ ಮೂಲಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಲ್ಲ ಅಂತೆ ಕಂತೆಗಳು ಸುಳ್ಳು ಅಂತಾ ಹೇಳುತ್ತಿವೆ ಎಂಬ ಮತ್ತೊಂದು ಗಾಸಿಪ್ ಹರಿದಾಡುತ್ತಿದೆ.

ಈ ಎಲ್ಲಾ ಗಾಸಿಪ್ ಗಳು ಒಂದು ಕಡೆಯಾದರೆ ಮೊದಲಿನಿಂದಲೂ ಅನುಷ್ಕಾ ಶೆಟ್ಟಿ ಅವರನ್ನು ಪ್ರೀತಿಸುತ್ತಿದ್ದು, ಅವರನ್ನೇ ಮದುವೆ ಆಗುತ್ತಾರೆ ಎಂದು ಪ್ರಭಾಸ್ ಆಪ್ತ ಮೂಲಗಳು ಹೇಳುತ್ತಿವೆ. ಇನ್ನು ಇವರಿಬ್ಬರ ನಡುವೆ ಪ್ರೇಮಾಂಕುರವಿದೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ.

ಹುಟ್ಟು ಹಬ್ಬಕ್ಕಾಗಿ ಇಬ್ಬರು ಒಬ್ಬರಿಗೊಬ್ಬರು ಭಾರೀ ಬೆಲೆಯ ಗಿಫ್ಟ್ ಗಳನ್ನು ನೀಡಿದ್ದರು. ಪ್ರಭಾಸ್ ‘ಸಾಹೋ’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.