ಜ್ಯೋತಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಪ್ಪಲಿ ಸೇರಿದಂತೆ ಬೇರೆಯವರ ಈ ನಾಲ್ಕು ವಸ್ತುಗಳನ್ನು ಎಂದೂ ಬಳಸಬೇಡಿ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ..

By admin

April 18, 2018

ದಿನ ನಿತ್ಯದ ಜೀವನದಲ್ಲಿ ನಾವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ  ಅನೇಕ ವಸ್ತುಗಳನ್ನು ನಾವು ಬಳಸುತ್ತಿರುತ್ತೇವೆ.ನಾವು ಹೀಗೆ ಬಳಸುವ ವಸ್ತುಗಳು ನಮ್ಮ ಜೀವನದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪ್ರಭಾವವನ್ನು ಬೀರುತ್ತವೆ.

ನಾವು ಸಾಮಾನ್ಯವಾಗಿ ನಮ್ಮ ಸ್ನೇಹಿತರ,ಸಂಭಂದಿಕರ ವಸ್ತುಗಳನ್ನು ಅದಲು ಬದಲು ಮಾಡಿಕೊಂಡು ಉಪಯೋಗಿಸುತ್ತಿರುತ್ತೇವೆ.ಆದರೆ ಜ್ಯೋತಿಷ್ಯದಲ್ಲಿ ಹೇಳಿರುವ ಪ್ರಖಾರ ಬೇರೆಯವರ ಕೆಲವೊಂದು ವಸ್ತುಗಳನ್ನು ಉಪಯೋಗಿಸುವುದರಿಂದ ಅವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ಹೇಳಲಾಗಿದೆ.

ಹಾಗಾದ್ರೆ ಬೇರೆಯವರ ಯಾವ ವಸ್ತುಗಳನ್ನು ಉಪಯೋಗಿಸುವುದರಿಂದ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ..?

ಚಪ್ಪಲಿ-ಶೂ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾಲಿನಲ್ಲಿ ಶನಿ ವಾಸವಾಗಿರುತ್ತಾನೆ. ಹಾಗಾಗಿ ಚಪ್ಪಲಿ-ಶೂ ಶನಿಗೆ ಸಂಬಂಧಿಸಿದ್ದಾಗಿರುತ್ತದೆ. ಬೇರೆಯವರ ಚಪ್ಪಲಿಯನ್ನು ಪದೇ ಪದೇ ಬಳಕೆ ಮಾಡಿದ್ರೆ ಜಾತಕದಲ್ಲಿ ಶನಿ ಕೆಟ್ಟ ಪ್ರಭಾವ ಬೀರುತ್ತಾನೆ.

ರತ್ನಗಳು

ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಕ್ಕೆ ಮಹತ್ವದ ಸ್ಥಾನವಿದೆ. ರತ್ನ ಧಾರಣೆಯಿಂದ ಗ್ರಹ ಸಂಬಂಧಿ ಸಮಸ್ಯೆ ದೂರವಾಗುತ್ತದೆ. ಆದ್ರೆ ತಪ್ಪು ರತ್ನ ಧಾರಣೆ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತದೆ. ಬೇರೆಯವರ ರತ್ನವನ್ನು ಅಪ್ಪಿತಪ್ಪಿಯೂ ಬಳಸಬಾರದು.

ಟವೆಲ್

ಬಹುತೇಕರು ಬೇರೆಯವರ ಟವೆಲ್ ಬಳಸ್ತಾರೆ. ವಾಸ್ತು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಬೇರೆಯವರ ಟವೆಲ್ ಬಳಕೆಯಿಂದ ಅವರ ನಕಾರಾತ್ಮಕ ಪ್ರಭಾವಕ್ಕೆ ನಾವು ಒಳಗಾಗ್ತೇವೆ. ಚರ್ಮಕ್ಕೆ ಸಂಬಂಧಿಸಿದ ಖಾಯಿಲೆಯಿದ್ದರೆ ಅದು ಟವೆಲ್ ಬಳಸಿದ ವ್ಯಕ್ತಿಗೆ ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ.

ಎಣ್ಣೆ

ಮನೆಯಿಂದ ಹೊರಗೆ ಹೋದಾಗ ಬಹುತೇಕರು ಬೇರೆಯವರ ಎಣ್ಣೆಯನ್ನು ತಲೆಗೆ ಹಾಕಿಕೊಳ್ತಾರೆ. ಎಣ್ಣೆ, ಶನಿಗೆ ಸಂಬಂಧಿಸಿದ್ದಾಗಿದೆ. ಬೇರೆಯವರ ಎಣ್ಣೆ ಬಳಕೆಯಿಂದ ಶನಿಗೆ ಸಂಬಂಧಿಸಿದ ಸಮಸ್ಯೆ ಎದುರಿಸಬೇಕಾಗುತ್ತದೆ.