ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ, ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು.
ಜನನ : 1886ರ ಜನವರಿ 31, ಧಾರವಾಡ
ತಂದೆ ತಾಯಿ : ರಾಮಚಂದ್ರ ಭಟ್ಟ, ಅಂಬಿಕೆ.
ಕಾವ್ಯನಾಮ : ಅಂಬಿಕಾತನಯದತ್ತ.
ವಿಧ್ಯಾಭ್ಯಾಸ :-
1913 ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ 1918 ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. 1935 ರಲ್ಲಿ ಎಂ.ಎ. ಮಾಡಿಕೊಂಡು, ಕೆಲಕಾಲ (1944 – 1956) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.
ಸಾಂಸಾರಿಕ ಜೀವನ :-
ಬೇಂದ್ರೆಯವರು 1919ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು
ಸಾಹಿತ್ಯ:-
ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. 1918 ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. “ಗರಿ”, “ಕಾಮಕಸ್ತೂರಿ “, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು.
ಜ್ಞಾನಪೀಠ ಪ್ರಶಸ್ತಿ :-
ಬೇಂದ್ರೆಯವರಿಗೆ ಕಾಶಿಹಿಂದೂ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಜೊತೆಗೆ, ಇವರ ನಾಕುತಂತಿ ಕೃತಿಗೆ 1974 ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ.
ಕವನ ಸಂಕಲನಗಳು :-
- 1922: ಕೃಷ್ಣಾಕುಮಾರಿ;
- 1932: ಗರಿ;
- 1934: ಮೂರ್ತಿ ಮತ್ತು ಕಾಮಕಸ್ತೂರಿ;
- 1937: ಸಖೀಗೀತ.
- 1398: ಉಯ್ಯಾಲೆ;
- 1938: ನಾದಲೀಲೆ;
- 1943: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)
- 1946: ಹಾಡುಪಾಡು;
- 1951: ಗಂಗಾವತರಣ;
- 1956: ಸೂರ್ಯಪಾನ;
- 1956: ಹೃದಯಸಮುದ್ರ;
- 1956: ಮುಕ್ತಕಂಠ;
- 1957: ಚೈತ್ಯಾಲಯ;
- 1957: ಜೀವಲಹರಿ;
- 1957: ಅರಳು ಮರಳು;
- 1958: ನಮನ;
- 1959: ಸಂಚಯ;
- 1960: ಉತ್ತರಾಯಣ;
- 1961: ಮುಗಿಲಮಲ್ಲಿಗೆ;
- 1962: ಯಕ್ಷ ಯಕ್ಷಿ;
- 1964: ನಾಕುತಂತಿ;
- 1966: ಮರ್ಯಾದೆ;
- 1968: ಶ್ರೀಮಾತಾ;
- 1969: ಬಾ ಹತ್ತರ;
- 1970: ಇದು ನಭೋವಾಣಿ;
- 1972: ವಿನಯ;
- 1973: ಮತ್ತೆ ಶ್ರಾವಣಾ ಬಂತು;
- 1977: ಒಲವೇ ನಮ್ಮ ಬದುಕು;
- 1978: ಚತುರೋಕ್ತಿ ಮತ್ತು ಇತರ ಕವಿತೆಗಳು;
- 1982: ಪರಾಕಿ;
- 1982: ಕಾವ್ಯವೈಖರಿ;
- 1982: ತಾ ಲೆಕ್ಕಣಕಿ ತಾ ದೌತಿ;
- 1982: ಬಾಲಬೋಧೆ;
- 1986: ಚೈತನ್ಯದ ಪೂಜೆ;
- 1987: ಪ್ರತಿಬಿಂಬಗಳು.
ಪ್ರಶಸ್ತಿ, ಪುರಸ್ಕಾರ, ಬಿರುದು:-
- 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
- 1948ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- 1964ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
- 1965ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
- 1968ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
- 1973ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ.
- ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
- ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.
ನಿಧನ :-
ಸಾಹಿತ್ಯ ಕ್ಷೇತ್ರದ ಸರ್ವೋಚ್ಛ ನೆಲೆಯಲ್ಲಿ ಗುರುತಿಸಿಕೊಂಡಿದ್ದ ಬೇಂದ್ರೆಯವರು 1981ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿದರು.
ಕೃಪೆ: ವಿಕಿಪೀಡಿಯ