ಸುದ್ದಿ

ಜೋಗ ಜಲಪಾತದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್(ಕೋತಿರಾಜ್) ಸಿಕ್ಕಿದ್ದು ಯಾವ ಸ್ಥಿತಿಯಲ್ಲಿ ಗೊತ್ತಾ..?ತಿಳಿಯಲು ಈ ಲೇಖನ ಓದಿ…

By admin

February 28, 2018

ಜೋಗ ಜಲಪಾತದ ನೆತ್ತಿ ಪ್ರದೇಶದ ಜಲಪಾತಕ್ಕೆ  ಧುಮುಕಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಹುಡುಕಲು ಜಲಪಾತಕ್ಕೆ ಇಳಿದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಕತ್ತಲಾದರೂ ವಾಪಸ್ಸು ಬರದೆ ಇದ್ದದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿತ್ತು.

ಮೂರು ದಿನಗಳ ಹಿಂದೆ ಬೆಂಗಳೂರು ಮೂಲದ ಮಂಜುನಾಥ್ ಎಂಬುವರು ತನ್ನ ಬೈಕ್‌‌ನಲ್ಲಿ ಜೋಗ ಜಲಪಾತದ ನೆತ್ತಿ ಪ್ರದೇಶಕ್ಕೆ ಬಂದಿದ್ದು, ಜೋಗ್‌ಫಾಲ್ಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆ ಯುವಕನ ಮೃತದೇಹವನ್ನು ಹುಡುಕಲೆಂದು,ಮಂಗಳವಾರ ಮಧ್ಯಾಹ್ನ ಮೈಸೂರು ಬಂಗಲೆ ಬಳಿಯ ಮೆಟ್ಟಿಲುಗಳ ಮೂಲಕ ಜಲಪಾತದ ಗುಂಡಿಗೆ ಇಳಿದಿದ್ದ ಜ್ಯೋತಿರಾಜ್‌ ರಾತ್ರಿಯಾದರೂ ವಾಪಸ್ಸು ಬಂದಿರಲಿಲ್ಲ.ಇದು ಎಲ್ಲರ ಆತಂಕಕ್ಕೆ ಕಾರಣವಾಗಿತ್ತು.

ಪತ್ತೆಯಾಗಿದ್ದು ಎಲ್ಲಿ..?ಯಾವ ಸ್ಥಿತಿಯಲ್ಲಿದ್ದರು ಗೊತ್ತಾ..?

ಜೋಗ ಜಲಪಾತದ ನೆತ್ತಿ ಪ್ರದೇಶದ ಜಲಪಾತಕ್ಕೆ  ಧುಮುಕಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಹುಡುಕಲು ಹೋಗಿ, ನಿನ್ನೆಯಿಂದ ನಾಪತ್ತೆಯಾಗಿದ್ದ ಜ್ಯೋತಿರಾಜ್ ಪತ್ತೆಯಾಗಿದ್ಡು, ರಾಜಾ ಫಾಲ್ಸ್​ನ ಬಂಡೆಯ ಮೇಲೆ ಕುಳಿತಿದ್ದರು ಎಂದು ಹೇಳಲಾಗಿದೆ.

ಶೋಧ ಕಾರ್ಯ ನಡೆಸಿ ಅಗ್ನಿಶಾಮಕ ಸಿಬ್ಬಂದಿ, ಜ್ಯೋತಿರಾಜ್ ಅಲಿಯಾಸ್ (ಕೋತಿರಾಜ್)ನನ್ನು ಪತ್ತೆ ಮಾಡಿದ್ದು, ರಾಜಾ ಫಾಲ್ಸ್​ನ ಬಂಡೆಯ ಬಳಿ ಅತಿಯಾದ ಚಳಿ ಇದ್ದ ಕಾರಣ, ನಿಶ್ಶಕ್ತರಾಗಿದ್ದ ಜ್ಯೋತಿರಾಜ್ ಅಲ್ಲಿಯೇ ಕುಳಿತಿದ್ದರು ಎನ್ನಲಾಗಿದೆ.