ಉಪಯುಕ್ತ ಮಾಹಿತಿ

ಜೀವನದಲ್ಲಿ ಯಶಸ್ಸು ಸಿಗಬೇಕಂದ್ರೆ,ಈ ಅಂಶಗಳನ್ನು ಅನುಸರಿಸಿ…

By admin

July 20, 2017

ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.

ಯಶಸ್ಸಿನ ಹಾದಿ ಸುಲಭವಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಒಬ್ಬ ಯಶಸ್ವಿ ಮನುಷ್ಯನ ಹಿಂದೆ ಸಾಕಷ್ಟು ಹೋರಾಟವಿರುತ್ತದೆ. ನಮ್ಮ ಪ್ರೀತಿಯ ಮೇಷ್ಟ್ರು ದಿವಂಗತ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ಹೇಳುತ್ತಾರೆ: “ಯಶಸ್ಸಿನ ಕಥೆಯನ್ನು ಓದಿದರೆ ಕೇವಲ ನಿಮಗೊಂದು ಸಂದೇಶ ಸಿಗಬಹುದು ಆದರೆ ಸೋಲಿನ ಕಥೆಗಳಿಂದ ಗೆಲುವಿನ ದಾರಿಯಲ್ಲಿ ಸಹಾಯವಾಗುವುದು” ಎಂದು.

 

ಯಶಸ್ಸಿನ ಹಾದಿಯಲ್ಲಿ ಈ ಅಂಶಗಳನ್ನು ಅನುಸರಿಸಿ , ನಡೆಯುವ ದಾರಿಯನು ಸುಗಮಗೊಳಿಸಿ

ಈ ಯಶಸ್ಸು ಅನ್ನೋದು ಮರೀಚಿಕೆಯಂತೆ. ನೀವು ಅದರ ಹಿಂದೆ ಓಡಿದಷ್ಟು ಅದು ನಿಮ್ಮಿಂದ ದೂರ ಓಡುತ್ತದೆ. ಅದಕ್ಕೇ ಏನೋ ಕೃಷ್ಣ ಹೇಳಿದ್ದು :- ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ ಅಂತ. ಅಂದರೆ ಫಲದ ಅಪೇಕ್ಷೆ ಇಲ್ಲದೇ ನಿನ್ನ ಕರ್ಮ (ಕರ್ತವ್ಯ) ನೀನು ಮಾಡು.