ಗ್ಯಾಜೆಟ್

ಜಿಯೋ ಫ್ರೀ 4G ಫೋನ್ ಬುಕಿಂಗ್ ಶುರು!ಇವತ್ತೇ ಬುಕ್ ಮಾಡಿ.ಬುಕ್ ಮಾಡೋದು ಹೇಗೆ ಗೊತ್ತಾ?ಈ ಲೇಖನಿ ಓದಿ…

By admin

August 17, 2017

ಕೆಲವು ದಿನಗಳ ಹಿಂದಷ್ಟೇ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಕಂಪನಿ ಕಡಿಮೆ ಬೆಲೆ ಜಿಯೋ ಫ್ಯೂಚರ್ ಫೋನ್ ಬಿಡುಗಡೆ ಮಾಡಿದ್ದರು. ಈ ಜಿಯೋ ಫೋನ್ ಬೆಲೆ ಕೇವಲ 1500ರೂ ಗಳು ಇರಲಿದ್ದು, ಈ 1500ರೂ ಗಳನ್ನು ಡೆಪಾಸಿಟ್ ಮಾಡಿದ್ರೆ, ಮೂರೂ ವರ್ಷದ ನಂತರ ಈ ಹಣವನ್ನು ಹಿಂದಿಗಿಸುವುದಾಗಿ ಹೇಳಿಕೊಂಡಿತ್ತು.

ಹಾಗಾಗಿ ಜಿಯೋ ಫ್ಯೂಚರ್ ಫೋನ್ ಬುಕಿಂಗ್ ಅಧಿಕೃತವಾಗಿ ಆಗಸ್ಟ್ 24 ರಿಂದ ಬುಕಿಂಗ್ ಪ್ರಾರಂಭವಾಗುತ್ತಿದ್ದರೂ, ಕೆಲವು ಅಧಿಕೃತ ಡೀಲರ್ ಗಳು ಈಗಾಗಲೇ ಬುಕಿಂಗ್ ಗೆ ಅವಕಾಶ ಒದಗಿಸಿಕೊಡಲಿದ್ದಾರೆ.

ಈಗಾಗಲೇ ಲಕ್ಷಾಂತರ ಮಂದಿ ಈ ಫೋನ್ ಕೊಂಡುಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದು, ಈ ಹಿನ್ನಲೆಯಲ್ಲಿ ಜಿಯೋ ಫೋನ್ ಅನ್ನು ಸರದಿಯಲ್ಲಿ ಅದಷ್ಟು ಬೇಗನೆ ಕೊಂಡುಕೊಳ್ಳಬೇಕು ಎನ್ನುವ ಪ್ಲಾನ್ ನಿಮಗಿದ್ದಲ್ಲಿ, ಜಿಯೋ ಫೋನ್ ಬುಕ್ ಮಾಡಲು ಬೇಕಾದ ಅಧಿಕೃತ ದಾಖಲಾತಿಗಳ ಬಗ್ಗೆ ಪೂರ್ಣ ಮಾಹಿತಿಯೂ ಇಲ್ಲಿದೆ.

ಹಾಗಾದ್ರೆ ಜಿಯೋ ಫ್ಯೂಚರ್ ಫೋನ್ ಬುಕಿಂಗ್ ಮಾಡೋದು ಹೇಗೆ ಗೊತ್ತಾ?

ಆಧಾರ್ ಕಾರ್ಡ್ ಕಡ್ಡಾಯ :-

ನಿಮ್ಮ ಹತ್ತಿರದ ಅಧಿಕೃತ ರಿಲಯನ್ಸ್ ಜಿಯೋ ಡೀಲರ್ ಗಳ ಮಳಿಗೆಗೆ ಭೇಟಿ ಕೊಡಿ. ನಿಮ್ಮ ಜೊತೆ ಮರೆಯದೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತೆಗೆದುಕೊಂದು ಹೋಗಿ.

ಯಾಕಂದ್ರೆ ನಿಮ್ಮ ಆಧಾರ್ ವಿವರಗಳನ್ನು ಸೆಂಟ್ರಲೈಸ್ಡ್ ಸಾಫ್ಟ್ ವೇರ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.

ನಿಮ್ಮಆಧಾರ್ ವಿವರಣೆಗಳನ್ನು ಅಪ್ ಲೋಡ್ ಮಾಡಿದ ನಂತರ ಈ ಸಾಫ್ಟ್ ವೇರ್ ನಿಮಗೆ ಒಂದು ಟೋಕನ್ ನಂಬರ್ ನೀಡುತ್ತದೆ. ಈ ನಂಬರ್ ನ್ನು ಯಾವುದೇ ಕಾರಣಕ್ಕೂ ಕಳೆಯಬೇಡಿ. ಇದು ಫೋನ್ ನಿಮ್ಮ ಕೈ ಸೇರುವಾಗ ಅಗತ್ಯ ಬರುತ್ತದೆ.

ಸೂಚನೆ:-

ಒಬ್ಬರ ಆಧಾರ್ ಕಾರ್ಡ್ ಬಳಸಿ ಕೇವಲ ಒಂದು ಫೋನ್ ಪಡೆಯಬಹುದಾಗಿದೆ. ನಿಮಗೆ ಹೆಚ್ಚಿನ ಫೋನ್ ಬೇಕಿದ್ದಲ್ಲಿ ಪಡೆಯಲು ಸಾಧ್ಯವಿಲ್ಲ. ಜೊತೆಗೆ ಆಧಾರ ಕಾರ್ಡ್ ಯಾರ ಹೆಸರಲ್ಲಿದೆಯೋ ಅವರೇ ಸ್ವತಹ ಶಾಪ್’ಗೆ ಹೋಗಿ ಫೋನ್ ಬುಕ್ ಮಾಡಬೇಕಾಗುತ್ತದೆ.

ಜಿಯೋ ಫ್ಯೂಚರ್ ಫೋನ್ ನಿಮ್ಮ ಕೈ ತಲುಪೋದು ಯಾವಾಗ ಗೊತ್ತಾ?

ಒಂದು ವೇಳೆ ನೀವು ಈ ದಿನ ಫೋನ್ ಬುಕ್ ಮಾಡಿದ್ದಲ್ಲಿ ಸೆಪ್ಟೆಂಬರ್ 1 ಅಥವಾ 5 ರ ಒಳಗಡೆ ನಿಮ್ಮ ಕೈ ತಲುಪುವ ಸಾಧ್ಯತೆ ಇದೆ. ಬುಕಿಂಗ್ ಹೆಚ್ಚಾದಂತೆಲ  ನಿಮ್ಮ ಕೈ ತಲುಪುವ ದಿನಗಳು ಕೂಡ ಮುಂದೆ ಹೋಗಲಿವೆ.

ಆನ್ಲೈನ್ನಲ್ಲಿ ಕೂಡ ಬುಕ್ ಮಾಡಬಹುದು…

ವರದಿಗಳ ಪ್ರಕಾರ ಆಗಷ್ಟ್ 24ರ ನಂತರ ನೀವು ಆನ್ಲೈನ್ ಮತ್ತು ಜಿಯೋ ಆಪ್’ನಲ್ಲೂ ಬುಕ್ ಮಾಡಬಹುದು.