ಗ್ಯಾಜೆಟ್

ಜಿಯೋ ಗ್ರಾಹಕರೇ ಎಚ್ಚರ..!ಇನ್ಮೇಲೆ ಈ ಆಫರ್ ಸಿಗಲ್ಲ!ಯಾಮಾರಿದ್ರೆ ನಿಮ್ಮ ಜೋಬಿಗೆ ಬೀಳುತ್ತೆ ಕತ್ತರಿ..!

By admin

October 04, 2017

ಸದ್ಯ ಭಾರತದಲ್ಲಿ ಅನ್ ಲಿಮಿಟೆಡ್ ಕಾಲಿಂಗ್ ಮತ್ತು ಅನ್ ಲಿಮಿಟೆಡ್ ಡಾಟಾ ಆಫರ್ ನೀಡವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು ರಿಲಯನ್ಸ್ ಜಿಯೋ ಸಂಸ್ಥೆ. ತನ್ನ ಜನಪ್ರಿಯ ಯೋಜನೆಯಾದ ಅನ್  ಲಿಮಿಟೆಡ್ ವಾಯ್ಸ್ ಕಾಲ್ ಗೆ ಬ್ರೇಕ್ ಹಾಕಿ, ಇನ್ಮೇಲೆ ಜಿಯೋ ಫ್ರೀ ವಾಯ್ಸ್ ಕಾಲ್ ಅನ್ನು 300 ನಿಮಿಷಗಳಿಗೆ ನಿಗದಿಪಡಿಸಲು ಮುಂದಾಗಿದೆ.

ಯಾಕೆ ಈ ನಿರ್ಧಾರ..!ಯಾರಿಗೆಲ್ಲಾ ಅನ್ವಯಿಸುತ್ತೆ..?

ಹೌದು, ಜಿಯೋ ಗ್ರಾಹಕರು ಇನ್ಮೇಲೆ ದಿನಕ್ಕೆ 300 ನಿಮಿಷ ಮಾತ್ರ ಉಚಿತ ಕರೆ ಮಾಡಬಹುದು. ಇಷ್ಟಕ್ಕೂ ಜಿಯೋ ಸಂಸ್ಥೆಯ ಈ ಕಠಿಣ ನಿರ್ಧಾರಕ್ಕೆ ಕಾರಣ ಕೇಳಿದರೆ ಅಚ್ಚರಿಯಾಗುತ್ತದೆ. ಆದ್ರೆ ಈ ನಿಯಮ ಎಲ್ಲಾ ಜಿಯೋ ಗ್ರಾಹಕರಿಗೂ ಅನ್ವಯವಾಗುವುದಿಲ್ಲ. ಕೆಲವೊಂದು ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ. ಕೆಲ  ಜಿಯೋ ಗ್ರಾಹಕರು ಸಂಸ್ಥೆಯ ಈ ಆಫರ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ವೈಯುಕ್ತಿಕ ಬಳಕೆ ನೀಡಲಾಗಿದ್ದ ಈ ಸೇವೆಯನ್ನು ಮುಂದಿಟ್ಟುಕೊಂಡು ಕೆಲ ಖಾಸಗಿ ಸಂಸ್ಥೆಗಳು ತಮ್ಮ  ವಾಣಿಜ್ಯಾತ್ಮಕ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿವೆಯಂತೆ.

ಆಫರ್ ಹಿಂತೆಗೆದುಕೊಳ್ಳಲು ಪ್ರಮುಖ ಕಾರಣ…

ಅನ್ ಲಿಮಿಟೆಡ್ ಕಾಲಿಂಗ್ ಸೇವೆಯನ್ನು ಪಡೆದ ಈ ಖಾಸಗಿ ಸಂಸ್ಥೆಗಳು ತಮ್ಮ ಉತ್ಪನ್ನಗಳು ಮತ್ತು ತಮ್ಮ ಸಂಸ್ಥೆಯ ಯೋಜನೆಗಳನ್ನು ಪ್ರಮೋಷನ್ ಗೆ ಬಳಸಿಕೊಳ್ಳುತ್ತಿದ್ದಾರಂತೆ.. ಇದೇ ಕಾರಣಕ್ಕೆ ಇಂತಹ  ವಂಚಕ ನಡೆಯನ್ನು ತಪ್ಪಿಸುವ ಉದ್ದೇಶದಿಂದಲೇ ಜಿಯೋ ಸಂಸ್ಥೆ ಈ ಕಠಿಣ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಇನ್ನು ಮುಂದೆ ಎಷ್ಟು ಸಮಯ ಕರೆ ಮಾಡಬಹುದು?

ಸಂಸ್ಥೆಯ ಈ ನಿರ್ಧಾರದಿಂದಾಗಿ ಜಿಯೋ ಗ್ರಾಹಕ ಪ್ರತೀ ತಿಂಗಳು ಅಂದರೆ 28 ದಿನಗಳು, 3000 ನಿಮಿಷಗಳಷ್ಟು ಕರೆಗಳನ್ನು  ಮಾತ್ರ ಮಾಡಬಹುದು. ಅಂದರೆ ಪ್ರತೀ ನಿತ್ಯ 300 ನಿಮಿಷದಂತೆ ಅಥವಾ 7 ದಿನಕ್ಕೆ 1200 ನಿಮಿಷಗಳಷ್ಟು ಮಾತ್ರ ಕರೆ ಮಾಡಬಹುದಾಗಿದೆ.

ಯಾರಿಗೆಲ್ಲಾ ಈ ಕಾಯಿದೆ ಅನ್ವಯಿಸುತ್ತೆ…

ಯಾರೆಲ್ಲಾ ಜಿಯೋದ ಈ ಅನ್ ಲಿಮಿಟೆಡ್ ಕಾಲ್ ಆಫರ್ ಅನ್ನು ಅತಿಯಾಗಿ ಬಳಸಿಕೊಳ್ಳುತ್ತಿದ್ದಾರೋ ಅವರಿಗೆ 300 ನಿಮಿಷಗಳ ಮಿತಿ ನಿಗದಿಪಡಿಸಲಾಗುತ್ತದೆ. ದಿನಕ್ಕೆ 10 ಗಂಟೆಗಳಷ್ಟು ಕಾಲ ಮಾತನಾಡುವವರಿಗೆ ಈ ನಿಯಮ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.