ಸುದ್ದಿ

ಜಾನ್ಸನ್ ಬೇಬಿ ಪೌಡರ್ ನಿಂದಾಗಿ ಮಹಿಳೆಗೆ ಸಿಕ್ತು 286 ಕೋಟಿ ರೂ. ಹೇಗೆ ಗೊತ್ತಾ,.!!

By admin

October 14, 2019

ಲಾಸ್ ಏಂಜಲೀಸ್ ನ ನ್ಯಾಯಾಲಯವೊಂದರಲ್ಲಿ 71 ವರ್ಷದ ಮಹಿಳೆ, ನ್ಯಾನ್ಸಿ ಕ್ಯಾಬಿಬಿ ಎಂಬಾಕೆಗೆ ಬಹುದೊಡ್ಡ ಜಯ ಲಭಿಸಿದೆ. ಕಳೆದೆರಡು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದನ್ಯಾನ್ಸಿ ವಿರುದ್ಧ ಪ್ರಸಿದ್ಧ ಫಾರ್ಮಾಸ್ಯುಟಿಕಲ್ ಹಾಗೂ ಗ್ರಾಹಕರ ಫೇವರಿಟ್ ಪ್ರಾಡಕ್ಸ್ ಜಾನ್ಸನ್ ಆ್ಯಂಡ್ ಜಾನ್ಸನ್. ಕಂಪೆನಿಗೆ ಹಿನ್ನಡೆಯಾಗಿದೆ. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ 40.3 ಮಿಲಿಯನ್ ಡಾಲರ್ ಅಂದರೆ ಸುಮಾರು . 2,86,00,00,000[286 ಕೋಟಿ]ರೂಪಾಯಿ ಮೊತ್ತವನ್ನು ನ್ಯಾನ್ಸಿಗೆ ಪರಿಹಾರವಾಗಿ ನೀಡಬೇಕೆಂದು ಕಂಪೆನಿಗೆ ಅದೇಶಿಸಿದೆ….

2017ರಲ್ಲಿ ಕಂಪೆನಿ ವಿರುದ್ಧ ಕೇಸ್ ದಾಖಲು… ನ್ಯಾನ್ಸಿ ಕಂಪೆನಿ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ್ದರು.ತಮ್ಮ ದೂರಿನಲ್ಲಿ ಕಂಪೆನಿಯ ‘ಬೇಬಿ ಟಾಕಮ್ ಪೌಡರ್’  ಬಳಸಿತನಗೆ ಮೆಸೊಥೆಲಿಯೋಮಾ[ಶ್ವಾಸಕೋಶದಕ್ಯಾನ್ಸರ್] ಉಂಟಾಗಿದೆ ಎಂದು ತಿಳಿಸಿದ್ದರು.

 2017ರಲ್ಲಿನ್ಯಾನ್ಸಿಗೆ ತಾನು  ಶ್ವಾಸಕೋಶದಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರಗೊತ್ತಾಗಿದೆ. ಇದಕ್ಕಾಗಿ ಸರ್ಜರಿ, ಕೀಮೋಥೆರಪಿ, ರೇಡಿಯೇಶನ್ ಹಾಗೂ ಹಾಗೂ ಇಮ್ಯುನೋಥೆರಪಿ ಕೂಡಾಮಾಡಿಸಿಕೊಂಡಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಶುಕ್ರವಾರದಂದು ನ್ಯಾನ್ಸಿಪರ ತೀರ್ಪು ಪ್ರಕಟಿಸಿದೆ ಹೀಗಿದ್ದರೂನ್ಯಾನ್ಸಿಗೆ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಿದ್ದು ಹೇಗೆ ಎಂಬ ವಿಚಾರ ಈವರೆಗೂ ಬಯಲಾಗಿಲ್ಲ.

ಆದರೆ ಎಲ್ಲಾ ಸಾಕ್ಷಿಗಳೂ ನ್ಯಾನ್ಸಿ ಪರವಾಗಿದ್ದವು. ಇನ್ನು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿ ವಿರುದ್ಧ ಇಂತಹ ಆರೋಪ. ಕೇಳಿ ಬಂದಿದ್ದು ಇದು ಮೊದಲಲ್ಲ. ಕಂಪೆನಿಯ ಬೇಬಿ ಪೌಡರ್ ನಿಂದ ಶ್ವಾಸಕೋಶ ಹಾಗೂ ಅಂಡಾಶಯ ಕ್ಯಾನ್ಸರ್ ಉಂಟಾಗಿದೆ  ಎಂದು 14 ಸಾವಿರಕ್ಕೂ ಅಧಿಕ ದೂರುಗಳು ಕೇಳಿ ಬಂದಿವೆ.