ತಮಿಳುನಾಡಿನ ಪಲ್ಲಾಪಟ್ಟಿ ಗ್ರಾಮದ 18 ವರ್ಷದ ಬಾಲಕ ರಿಫತ್ ಶಾರೂಕ್ 64 ಗ್ರಾಮ್ ತೂಕದ ಸ್ಯಾಟ್‍ಲೈಟ್ ರೂಪಿಸಿದ್ದು, ಇದು ವಿಶ್ವದ ಅತ್ಯಂತ ಕಿರಿಯ ಸ್ಯಾಟ್‍ಲೈಟ್ ಎಂಬ ಹಿರಿಮೆಗೆ ಪಾತ್ರವಾಗಿದೆ.
ಸ್ಯಾಟಲೈಟ್ ಅಂದರೆ ಉಪಗ್ರಹ ರೂಪಿಸೋದು ಅಂದರೆ ವಿಜ್ಞಾನಿಗಳಿಗೆ ಜೀವಮಾನದ ಸಾಧನೆ. ಅದಕ್ಕಾಗಿ ಹಲವಾರು ವರ್ಷಗಳ ಕಾಲ ಶ್ರಮ ವಹಿಸುತ್ತಾರೆ. ಆದರೆ ಇಲ್ಲೊಬ್ಬ 18 ವರ್ಷದ ಬಾಲಕನೊಬ್ಬ ಅತೀ ಕಿರಿಯ ಅಂದರೆ ಅಂಗೈಯಲ್ಲಿ ಹಿಡಿದುಕೊಳ್ಳಬಹುದಾದ ಸ್ಯಾಟ್‍ಲೈಟ್ ರೂಪಿಸಿ ವಿಶ್ವದ ಗಮನ ಸೆಳೆದಿದ್ದಾನೆ.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ `ಕಲಾಂ ಸ್ಯಾಟ್ ಹೆಸರಿನ ಜೂನ್ 21 ರಂದು ನಾಸಾದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಮೂಲಕ ಭಾರತದ ಬಾಲಕನ ಸಂಶೋಧನೆಯ ಸ್ಯಾಟ್‍ಲೈಟ್ ಮೊದಲ ಬಾರಿ ಪ್ರದರ್ಶನಗೊಳ್ಳಲಿದೆ.
ಸ್ಯಾಟಲೈಟ್ ಬಗ್ಗೆ ವಿವರಣೆ ನೀಡಿದ ರಿಫತ್, ಇದೊಂದು ಸಬ್ ಆರ್ಬಿಟ್ ಕಕ್ಷೆ ಯಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 240 ನಿಮಿಷಗಳ ಮಿಷನ್ ಸ್ಪಾನ್ ಇದಾಗಿದ್ದು 12 ನಿಮಿಷಗಳ ಕಾಲ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ 3ಡಿ ಪ್ರಿಂಟೆಡ್ ಕಾರ್ಬನ್ ಫೈಬರ್ ಬಳಸಿ ಇದನ್ನು ರೂಪಿಸಲಾಗಿದೆ ಎಂದರು.