ವ್ಯಕ್ತಿ ವಿಶೇಷಣ

ಜಗತ್ತಿನ ಅತೀ ಚಿಕ್ಕ ಮಹಿಳೆಯ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

By admin

January 22, 2018

ನಮ್ಮ ಕರ್ನಾಟಕದವರಾದ ಮಾಲತಿ ಹೊಳ್ಳ ಇದಕ್ಕೊಂದು ಜ್ವಲಂತ ಉದಾಹರಣೆ. ನಮ್ಮ ನೆರೆಯ ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ ಜ್ಯೋತಿ ಆಮ್ಗೆ ಎಂಬ ಮಹಿಳೆಗೆ ಈಗ ಜ್ಯೋತಿ  (ಜನನ: ಡಿಸೆಂಬರ್ 16, 1993). ಆದರೆ ಇವರನ್ನು ನೋಡಿದ ಯಾರೂ ಇವರಿಗೆ ಇಪ್ಪತ್ತೈದು ವರ್ಷ ವಯಸ್ಸು ಎಂದು ಹೇಳುವಿದಿಲ್ಲ ಬದಲಿಗೆ ಪುಟ್ಟ ಮಗುವಿರಬಹುದು ಎಂದೇ ತಿಳಿದುಕೊಳ್ಳುತ್ತಾರೆ.

ಏಕೆಂದರೆ ಇವರ ಎತ್ತರ ಕೇವಲ 2.06 ಅಡಿ ಹಾಗೂ ತೂಕ ಕೇವಲ ಐದೂವರೆ ಕೇಜಿ! ದೇವರು ನೀಡಿದ ಈ ಕೊರತೆಯೇ ಈಕೆಯನ್ನು ಜಗತ್ತಿನ ಜೀವಂತ ಅತ್ಯಂತ ಚಿಕ್ಕ ಮಹಿಳೆ ಎಂಬ ಗಿನ್ನಿಸ್ ದಾಖಲೆಯನ್ನು ಪಡೆದಿದ್ದಾರೆ.

ಬೆಳವಣಿಗೆಯನ್ನೇ ಪಡೆಯಲಿಲ್ಲ:-

ಜ್ಯೋತಿಯವರ ಎತ್ತರ 62.8 ಅಥವಾ 2.06 ಅಡಿ ಯಾಗಿದೆ ಹಾಗೂ ಕೇವಲು ಐದೂವರೆ ಕೇಜಿ ಮಾತ್ರ ತೂಗುತ್ತಾರೆ. ಹುಟ್ಟಿದ ಬಳಿಕ ಈಕೆಯ ತೂಕ ಕೇವಲ ಒಂಬತ್ತು ಪೌಂಡುಗಳಷ್ಟು ಮಾತ್ರವೇ ಏರಿಕೆಯಾಗಿದೆ.

ಇವರ ಈ ಸ್ಥಿತಿಗೆ ಕುಬ್ಜತನದ ಒಂದು ಬಗೆಯ ಕಾಯಿಲೆಯಾದ ‘ಆಕೊಂಡ್ರೊಪ್ಲಾಸಿಯಾ’ ಎಂದು ಕರೆಯುತ್ತಾರೆ. ಈ ಕಾಯಿಲೆಯಿಂದಾಗಿ ಈಕೆಗೆ ಒಂದು ವರ್ಷವಾಗುತ್ತಲೇ ಈಕೆಯ ಶರೀರ ಬೆಳವಣಿಗೆಯನ್ನು ಕಳೆದುಕೊಂಡಿತು.

ಈಕೆ ಚಿಕ್ಕದಿದ್ದರೂ ತನ್ನನ್ನು ಇತರರಂತೇ ಪರಿಗಣಿಸಬೇಕು ಎಂಬ ಸಂಕಲ್ಪ:-

ಹದಿಹರೆಯಕ್ಕೆ ಬಂದ ಬಳಿಕ ಆಕೆಯ ಇತರ ಸಹಪಾಠಿಗಳೆಲ್ಲರೂ ಸಾಮಾನ್ಯ ಬೆಳವಣಿಗೆಯನ್ನು ಪಡೆದಿದ್ದರೂ ಜ್ಯೋತಿ ಯಾವುದೇ ಅಳುಕು ತೋರದೇ ಅವರಿಗೆ ಸರಿಸಮಾನವಾಗಿ ಪಾಠಗಳನ್ನು ಕಲಿಯುತ್ತಿದ್ದಳು ಹಾಗೂ ಆಕೆಗೆಂದೇ ನಾಗ್ಪುರದ ಶಾಲೆಯಲ್ಲಿ ಎತ್ತರದ ಪೀಠೋಪಕರಣವನ್ನು ನಿರ್ಮಿಸಲಾಗಿತ್ತು.

ಈಕೆಯನ್ನು ವಿಶ್ವದ ಅತಿ ಚಿಕ್ಕ ಜೀವಂತ ಮಹಿಳೆ ಎಂದು ಖಚಿತಪಡಿಸಲಾಯಿತು:-

ಈಕೆಯ ಹದಿನೆಂಟನೆಯ ಹುಟ್ಟುಹಬ್ಬದ ದಿನದಂದೇ 2011ರ ಗಿನ್ನೆಸ್ ದಾಖಲೆಗಳಲ್ಲಿ ಈಕೆಯ ಹೆಸರನ್ನು ದಾಖಲಿಸಲಾಯಿತು. ಈ ದಾಖಲೆಯ ಪ್ರಕಾರ ಈಕೆ ಜಗತ್ತಿನ ಜೀವಂತ ಅತ್ಯಂತ ಚಿಕ್ಕ ಮಹಿಳೆ ಯಾಗಿದ್ದಾಳೆ. ಈ ದಾಖಲೆ ಇದಕ್ಕೂ ಹಿಂದೆ ಅಮೇರಿಕಾದ ಬ್ರಿಗೆಟ್ ಜೋರ್ಡಾನ್ ಎಂಬ 6.7 ಸೆ.ಮೀ ಎತ್ತರದ ಮಹಿಳೆಯದ್ದಾಗಿತ್ತು.

ತಾನು ಒಂದು ದಿನ ಬಾಲಿವುಡ್ ತಾರೆಯಾಗಬೇಕೆಂದು ಬಯಸುತ್ತಿದ್ದಾಳೆ:-

ಈ ದಾಖಲೆಯನ್ನು ಪಡೆದ ಬಳಿಕ ಈಕೆ ಇಂದು ವಿಶ್ವವಿಖ್ಯಾತಳಾಗಿದ್ದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ತನ್ನ ಗುರಿಯತ್ತ ಈಕೆ ಗಮನ ಹರಿಸಿದ್ದಾಳೆ. ಬಾಲಿವುಡ್‪ನಲ್ಲಿ ನಟನೆಯ ವೃತ್ತಿ ಹೊಂದುವುದು ಈಕೆಯ ಬಯಕೆಯಾಗಿದೆ. ಈಕೆಯ ನೆಚ್ಚಿನ ಬಾಲಿವುಡ್ ನಟರೆಂದರೆ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಹಾಗೂ ಅಮಿತಾಭ್ ಬಚ್ಚನ್.