ಮಾನವನ ದೇಹದೊಳಗೆ ಪ್ರವೇಶಿಸಿದ ಮಾತ್ರೆಯು ಅಲ್ಲಿ ತಾನು ನಡೆಯುವ ಕ್ರಿಯೆಗಳನ್ನು ವೈದ್ಯನಿಗೆ ಕಳುಹಿಸಿಕೊಡುವ ವಿಶಿಷ್ಟ ತಂತ್ರಜ್ಞಾನದ ಡಿಜಿಟಲ್ ಮಾತ್ರೆಗೆ ಅಮೆರಿಕ ಅನುಮತಿ ನೀಡಿದೆ.! ವಿಶ್ವದಲ್ಲಿಯೇ ಇಂತಹದೊಂದು ಡಿಜಿಟಲ್ ಮಾತ್ರೆ ಇದೀಗ ಜನ ಬಳಕೆಗೆ ಬಂದಿದ್ದು, ಇದು ಎಲ್ಲರಿಗೂ ಆಶ್ಚರ್ಯವಾಗಿದೆ.!
ಏನಿದು ಡಿಜಿಟಲ್ ಮಾತ್ರೆ.?
ಮಾನವನ ದೇಹವನ್ನು ಪ್ರವೇಶಿದ ನಂತರ ಮಾತ್ರೆಯೇ ಸ್ವತಃ ತನ್ನ ಮಾಹಿತಿಯನ್ನು ಒದಗಿಸುವ ವಿಶಿಷ್ಟ ತಂತ್ರಜ್ಞಾನದ ಮಾತ್ರೆಗೆ ಡಿಜಿಟಲ್ ಮಾತ್ರೆ ಎಂದು ಹೆಸರಿಡಲಾಗಿದೆ.
ಎಲ್ಲಾ ಮಾತ್ರೆಗಳಂತೆ ಇದು ಸಹ ಸಾಮಾನ್ಯ ಮಾದರಿಯ ಮಾತ್ರೆಯಂತೆ ಕಂಡರೂ ಸಹ ಇದರೊಳಗೆ ತಂತ್ರಜ್ಞಾನ ಅಳಡಿಸಲಾಗಿರುತ್ತದೆ.!
ಮಾತ್ರೆಯಲ್ಲಿ ತಂತ್ರಜ್ಞಾನ.?
ಎಲ್ಲಾ ಮಾತ್ರೆಗಳಂತೆ ಇದು ಸಹ ಸಾಮಾನ್ಯ ಮಾದರಿಯ ಮಾತ್ರೆಯಂತೆ ಇರುತ್ತದೆ. ಆದರೆ ಇದರಲ್ಲಿ ಸಿಲಿಕಾ, ಮ್ಯಾಗ್ನೇಷಿಯಂ, ತಾಮ್ರದಿಂದ ತಯಾರಿಸಿದ ಸಣ್ಣ ಚೀಪ್ ಅಳವಡಿಸಲಾಗಿರುತ್ತದೆ.
ಈ ಚಿಪ್ ಸೆನ್ಸಾರ್ ಸಹಾಯದಿಂದ ಮನುಷ್ಯನ ದೇಹವನನ್ನು ಟ್ರ್ಯಾಕ್ ಮಾಡಿ ಮೊಬೈಲ್‌ಗೆ ಮಾಹಿತಿಯನ್ನು ಕಳುಹಿಸಿಕೊಡುತ್ತದೆ.!
ಮಾತ್ರೆಯ ಉಪಯೋಗವೇನು.?
ಯಾರೇ ಅನಾರೋಗ್ಯಕ್ಕೆ ತುತ್ತಾದರೂ ಸಹ ಮಾತ್ರೆಗಳ ಮೂಲಕ ಕಾಯಿಲೆ ವಾಸಿಯಾಗುವ ಭರವಸೆ ಇರುತ್ತದೆ. ಆದರೆ, ಕಾಯಿಲೆ ವಾಸಿಯಾಗಲು ಬೇಕಾದ ಚಿಕಿತ್ಸೆ ಮಾತ್ರಯಿಂದ ಸಿಕ್ಕಿದೆಯೊ ಅಥವಾ ಇಲ್ಲವೊ ಎಂಬುದು ಸ್ಪಷ್ಟವಾಗಿರುವುದಿಲ್ಲ.
ಆದರೆ, ಈ ಮಾತ್ರೆ ವೈದ್ಯರಿಗೆ ಸರಿಯಾದ ಮಾಹಿತಿಯನ್ನು ನೀಡಲಿದೆ ಮತ್ತು ಚಿಪ್ ಕಲ್ಮಷದ ಮೂಲಕ ಹೊರಬರಲಿದೆ.!!
ಆಗುವ ಲಾಭಗಳೇನು.?
ಡಿಜಿಟಲ್ ಮಾತ್ರೆ ರೋಗಿಯ ಹೊಟ್ಟೆ ಸೇರಿಸಿದ ನಂತರ ಯಾವ ಪ್ರಮಾಣದಲ್ಲಿ ಔಷಧಿಯನ್ನು ಬಳಸಲಾಗಿದೆ ಎಂಬ ಮಾಹಿತಿ ವೈದ್ಯರಿಗೆ ಮತ್ತು ಸ್ವರ್ತ ರೋಗಿಗೆ ಸುಲಭವಾಗಿ ಲಭ್ಯವಾಗುತ್ತದೆ.
ಕೇ ವಲ 30 ನಿಮಿಷಗಳಿಂದ 2ಗಂಟೆಗಳ ಅವಧಿಯಲ್ಲಿ ರೋಗಿಯ ದೇಹದಲ್ಲಿನ ಪೂರ್ಣ ಮಾಹಿತಿಯನ್ನು ತಿಳಿಯಬಹುದು ಎಂದು ಸಂಶೋಧಕರು ಹೇಳಿದ್ದಾರೆ.!