Law

ಚಿನ್ನದ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್..! ಶಾಕ್ ಆಗ್ಬೇಡಿ! ಈ ಲೇಖನಿ ಓದಿ…

By admin

August 28, 2017

ಚಿನ್ನ ಅನ್ನೋ ಹೆಸರು ಕೇಳಿದ್ರೆ, ಹೆಂಗಳೆಯರ ಮುಖ ಅರಳುತ್ತೆ. ಆದರೆ ಇನ್ನೂ ಮುಂದೆ ಚಿನ್ನ ಕೊಳ್ಳಬೇಕಾದ್ರೆ ಯೋಚನೆ ಮಾಡಬೇಕಾಗುತ್ತೆ.ಯಾಕೆ ಗೊತ್ತಾ? ಮುಂದೆ ಓದಿ…

ಯಾಕೆಂದ್ರೆ ಇನ್ನು ಮುಂದೆ ಎಲ್ಲಾ ಬಗೆಯ ಚಿನ್ನದ ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯವಾಗಿದೆ. ಹೌದು, ಎಲ್ಲಾ ರೀತಿಯ ಚಿನ್ನದ ವಹಿವಾಟುಗಳಿಗೆ ಪಾನ್ ಸಂಖ್ಯೆ ನಮೂದಿಸುವುದನ್ನು ಕೇಂದ್ರ ಸರ್ಕಾರ  ಕಡ್ಡಾಯ ಮಾಡಿದೆ.

ಕೇಂದ್ರ ಸರ್ಕಾರ ಮೊದಲೇ 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಚಿನ್ನದ ವಹಿವಾಟು ನಡೆಸುವಾಗ ಪಾನ್ ಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯ ಮಾಡಿತ್ತು.

ತೆರಿಗೆ ವಂಚನೆಯನ್ನು ತಪ್ಪಿಸಲು ಈ ಕಾನೂನು ಜಾರಿ…

ತೆರಿಗೆ ಕಳ್ಳರು ತೆರಿಗೆ ವಂಚಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದ್ದು,    ಚಿನ್ನದ ಪ್ರಿಯರು ಚಿನ್ನ ಕೊಳ್ಳುವ ಮುಂಚೆ ಎಲ್ಲಾ ಬಗೆಯ ಚಿನ್ನದ ವ್ಯವಹಾರಗಳಿಗೆ ಪಾನ್ ನಂಬರ್’ನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದೆ.

ಚಿನ್ನವನ್ನು ಖರೀದಿ ವ್ಯವಹಾರದಲ್ಲಿನ ತೆರಿಗೆ ವಂಚನೆಯನ್ನು ತಡೆಯಲು ಇಂತಹ ಕ್ರಮ ಕೈಗೊಳ್ಳಲಾಗಿದೆ. ಚಿನ್ನದ ದಾಸ್ತಾನು ವ್ಯವಹಾರ ಕಡ್ಡಾಯವಾಗಿ ನಮೂದಿಸುವುದರಿಂದ ವಂಚನೆ ತಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಲ್ಲದೇ, ಆದಾಯ ತೆರಿಗೆ ಮಾಹಿತಿಯ ಸಮಗ್ರ ಬಳಕೆ, ಚಿನ್ನದ ವ್ಯವಹಾರಗಳಿಗೆ ಪಾನ್ ಸಂಖ್ಯೆಯ ಕಡ್ಡಾಯ ಮಾಡುವುದರಿಂದ ತೆರಿಗೆ ವಂಚನೆ ತಡೆಯಬಹುದು ಎಂದು ಹೇಳಲಾಗಿದೆ.

ಹೀಗಾಗಿ ಕೇಂದ್ರ ಸರ್ಕಾರ ಚಿನ್ನದ ಎಲ್ಲಾ ವ್ಯವಹಾರಗಳಿಗೆ ಪಾನ್ ಕಡ್ಡಾಯ ಎಂದು ಹೇಳಿದೆ. ಹೀಗಾಗಿ   ಚಿನ್ನದ ಪ್ರಿಯರು ಚಿನ್ನ ಕೊಳ್ಳುವುದಕ್ಕೆ ಮುಂಚೆ ಪಾನ್ ನೋಂದಣಿ ಮಾಡುವುದು ಕಡ್ಡಾಯವಾಗಿದೆ.

ಹಾಗಾದ್ರೆ ಎಲ್ಲರ ಹತ್ತಿರ ಪಾನ್ ಇದೆಯಾ ಎಂಬುದೇ ಪ್ರಶ್ನೆಯಾಗಿದೆ..?