ದೇಶ-ವಿದೇಶ

ಚಾಲಾಕಿ ಚೀನಾ ದೇಶವು ನಮ್ಮ ಭಾರತ ಮತ್ತು ವಿಶ್ವವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಸಂಗತಿಗಳ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!

By admin

July 20, 2017

ಇದು ನಮ್ಮ ದೇಶದ ವಿರುದ್ದ ನಡೆಯುತ್ತಿರುವ ದೊಡ್ಡ ಷಡ್ಯಂತ್ರ. ಚೀನಾ ದೇಶವು  ನಮ್ಮ ದೇಶದ ಗಡಿಯಲ್ಲಿ ಕೊಡುತ್ತಿರುವ ಉಪಟಳದ ಬಗ್ಗೆ ನಿವು ಮಾಧ್ಯಮಗಳಲ್ಲಿ ನೋಡಿರುತ್ತೀರಿ.

ಅದೇ ರೀತಿ ಬಿಸಿನೆಸ್’ನಲ್ಲಿ ಚೀನಾ ದೇಶವು ನಮ್ಮ ದೇಶ ಮತ್ತು ವಿಶ್ವವನ್ನು ತಮ್ಮ            ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಸಂಗತಿಗಳ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!

 

ಚೀನಾ ದೇಶವು ತಮ್ಮ ದೇಶದ ಜನರನ್ನು ಬೆಳೆಸಲು ಟೊಂಕ ಕಟ್ಟಿ ನಿಂತಿದೆ. ಹಾಗೂ ಬೇರೆ ದೇಶದ ವಸ್ತುಗಳನ್ನು ಬಳಸದೆ, ತಮ್ಮ ಸಂಪತ್ತು ಬೇರೆ ಕಡೆ ಹೋಗದಂತೆ ತಡೆದಿದೆ.

ನಮ್ಮ ಭಾರತ ದೇಶದವರು ಚೀನಾ ವಸ್ತುಗಳನ್ನು ಬ್ಯಾನ್ ಬ್ಯಾನ್  ಮಾಡಿ ಅಂತ ಎಷ್ಟೇ ಬಾಯಿ ಬಡಕೊಂಡ್ರು, ಚೀನಾ ದೇಶವು ತನ್ನ ದೇಶದ ಸುಮಾರು 7 ಲಕ್ಷ ಕೋಟಿಯಷ್ಟು ವಸ್ತುಗಳನ್ನು ಭಾರತದ ಮಾರುಕಟ್ಟೆಗೆ ಬಿಟ್ಟಿದೆ. ಚೀನಾದ ಫೋನ್’ಗಳು, ನಮ್ಮ ದೇಶದ ಸ್ವದೇಶೀ ಮಾರುಕಟ್ಟೆಯನ್ನು ಉಸಿರು ಕಟ್ಟುವಂತೆ ಮಾಡಿದೆ. ಹೀಗೆ ಚೀನಾ ಎಲ್ಲಾ  ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದೆ.

ಚೀನಾ ತನ್ನ ಮನೆಯೊಳಗೆ ಯಾರನ್ನು ಬಿಟ್ಟುಕೊಳ್ಳುತ್ತಿಲ್ಲ, ಆದರೆ ಭಾರತದ ಪ್ರತಿ ಮನೆ ಮನೆಯನ್ನು ಸೇರಿಬಿಟ್ಟಿದೆ. ಇಲ್ಲಿ ಓದಿ:-ಮೋದಿ ತಂತ್ರಗಾರಿಕೆಯಿಂದಾಗಿ ತಾನು ತೋಡಿದ ಹಳ್ಳದಲ್ಲಿ ತಾನೇ ಬಿದ್ದಿದೆ ಚೀನಾ!!!

ಆದರೇ ಚೀನಾಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡುವ ಸಮಯ ಬಂದಿದೆ. ಈ ಜವಬ್ದಾರಿ ಸರ್ಕಾರ ಮತ್ತು ಗಡಿ ಕಾಯುವ ಸೈನಿಕರಿಗಸ್ಟೆ ಮೀಸಾಲಾಗಿಲ್ಲ, ನಮ್ಮೆಲ್ಲರದ್ದಾಗಿದೆ.

ನಮ್ಮ ವ್ಯಾಪಾರಿಗಳು,ಅದರಿಬ್ದ ಖರೀದಿದಾರರು ಎಲ್ಲರೂ ಒಂದಾಗಿ ಸೇರಿ ಚೀನಾ ದೇಶದ ವಸ್ತುಗಳನ್ನು ತಿರಸ್ಕರಿಸಿ, ನಮ್ಮ ಭಾರತ ದೇಶವನ್ನು ಬಲಪಡಿಸಬೇಕಾಗಿದೆ.

ಇದಕ್ಕೆಲ್ಲಾ ನಾವು ಏನು ಮಾಡಬೇಕು ಗೊತ್ತಾ?

ಚೀನಾ ವಸ್ತುಗಳನ್ನು ತಿರಸ್ಕರಿಸೋಣ, ಭಾರತವನ್ನು ರಕ್ಷಿಸೋಣ.