ಜೀವನದಲ್ಲಿ ಮುಂದೆ ಏಳಿಗೆ ಹೊಂದಬೇಕಾದರೆ ಪಾಲಿಸ ಬೇಕಾದ ನಿಯಮಗಳು,ಇತರರೊಡನೆ ವ್ಯವಹರಿಸ ಬೇಕಾದ ರೀತಿ,ಸಮಾಜದಲ್ಲಿ ನಮ್ಮ ನಡೆ ಹೇಗಿರಬೇಕು.ಮುಂತಾದ ಅನೇಕ ಅಂಶಗಳ ಬಗ್ಗೆ ಚಾಣಕ್ಯನು ನಮಗೆ ಅನೇಕ ನೀತಿಗಳನ್ನು ಬೋಧಿಸಿದ್ದಾನೆ.
ನಮ್ಮ ಪ್ರಗತಿಗೆ ಅನೇಕ ಸಂದರ್ಭಗಳಲ್ಲಿ ಇವೆಲ್ಲವೂ ಉಪಯೋಗಕ್ಕೆ ಬರುತ್ತವೆ. ಚಾಣಕ್ಯ ಇವಷ್ಟನ್ನೇ ಅಲ್ಲದೆ,ಸ್ತ್ರೀಯರ ಬಗ್ಗೆಯೂ ಹಲವು ವಿಷಯಗಳನ್ನು ತಿಳಿಸಿದ್ದಾನೆ.
1.ಯಾವುದೇ ವಿಷಯವಾಗಲೀ,ಸ್ತ್ರೀಯು ತನ್ನ ಗಂಡನ ಅನುಮತಿ ಪಡೆದುಕೊಳ್ಳ ಬೇಕಂತೆ.ಇಲ್ಲವಾದಲ್ಲಿ ಗಂಡನ ಆಯುಷ್ಯ ಕಡಿಮೆಯಾಗುತ್ತದಂತೆ.
2.ಸುಳ್ಳುಹೇಳುವುದು, ಸ್ವಾರ್ಥ,ಅಸೂಯೆ,ಕಠಿಣವಾಗಿ ವರ್ತಿಸುವುದು,ಮೂರ್ಖತ್ವ,ಪರಿಶುಭ್ರತೆಯನ್ನು ಪಾಲಿಸದಿರುವುದು,ಕ್ರೂರತ್ವ ಮುಂತಾದ ಆಂಶಗಳು ಸ್ತ್ರೀಯರಲ್ಲಿ ಪ್ರಧಾನವಾಗಿರುತ್ತವೆ. ಇವುಗಳಿಂದಾಗಿ ಅನೇಕ ಸ್ತ್ರೀಯರು ಜೀವನದಲ್ಲಿ ಮುಂದೆ ಬರಲಾಗುವುದಿಲ್ಲ.ಈ ಲಕ್ಷಣಗಳೇ ಅವರಿಗೆ ಬದ್ಧ ವೈರಿಗಳಂತೆ.
3.ಪುರುಷರಿಗಿಂತ ಸ್ತ್ರೀಯರಿಗೆ,ಹಸಿವು ಎರಡುಪಟ್ಟು,ನಾಚಿಕೆ ನಾಲಕ್ಕುಪಟ್ಟು,ದೈರ್ಯ ಆರುಪಟ್ಟು,ಆಸೆ ಎಂಟುಪಟ್ಟು ಹೆಚ್ಚಾಗಿರುತ್ತದಂತೆ.
4.ನಮ್ಮ ಜ್ಞಾನವನ್ನು ಆಚರಣೆಯಲ್ಲಿ ತರದಿದ್ದರೆ,ಜ್ಞಾನ ನಶಿಸುತ್ತದಂತೆ.ತನ್ನ ನಿರ್ಲಕ್ಷದಿಂದ ಪುರುಷರು ಜ್ಞಾನವನ್ನು ಕಳೆದುಕೊಳ್ಳುತ್ತಾರೆ. ಹೇಗೆ ಒಬ್ಬ ಮುಖಂಡನಿಲ್ಲದ ಕಾರಣ ಸೈನಿಕರು ಸೋಲುತ್ತಾರೆಯೋ,ಅದೇ ರೀತಿ ಗಂಡನಿಲ್ಲದ ಕಾರಣ ಸ್ತ್ರೀ ನಾಶವಾಗುತ್ತಾಳಂತೆ.
5.ಯುವತಿ ಎಷ್ಟೇ ಕುರೂಪಿಯಾಗಿದ್ದರೂ,ಒಳ್ಳೆಯ ಕುಟುಂಬದಲ್ಲಿ ಜನಿಸಿದವಳಾಗಿದ್ದರೆ ಅವಳನ್ನು ಮದುವೆಯಾಗಬಹುದಂತೆ.ಆದರೆ,ಎಷ್ಟೇ ಸುಂದರವಾಗಿದ್ದರೂ,ಕೆಟ್ಟ ಕುಟುಂಬದಲ್ಲಿ ಹುಟ್ಟಿದ್ದರೆ,ಅಂತಹ ಯುವತಿಯನ್ನು ಮದುವೆಯಾಗಬಾರದಂತೆ
6.ಪುರುಷರ ಶರೀರದಲ್ಲಿರುವ ಶಕ್ತಿಯನ್ನು ಸ್ತ್ರಿ ಒಂದೇಪೆಟ್ಟಿಗೆ ಹೀರಿಬಿಡುತ್ತಾಳಂತೆ.
7.ರಾಜ, ಮತ ಗುರು, ವೇಶ್ಯೆಯರೊಂದಿಗೆ ಸನ್ನಿಹಿತ ವಾಗಿರಬಾರದಂತೆ. ಒಂದು ವೇಳೆ ಹಾಗಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಹಾಗೆ.
8.ಬೆಂಕಿ,ನೀರು,ಆಸೆ ಹೆಚ್ಚಾಗಿರುವ ಸ್ತ್ರೀ,ಮೂರ್ಖ,ಹಾವು ಹಾಗು ದೊಡ್ಡ ಜನರಿಂದ ಆದಷ್ಟು ದೂರವಿರಬೇಕಂತೆ.ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ
9.ಮರ್ಯಾದೆಯನ್ನು ಕೊಟ್ಟು ತೆಗೆದುಕೊಳ್ಳುವುದನ್ನು ರಾಜ ಕುಟುಂಬದಿಂದಲೂ, ಸಂಭಾಷಣೆಯನ್ನು ಹೇಗೆ ನಡೆಸಬೇಕೆನ್ನುವುದನ್ನು ಪಂಡಿತರಿಂದಲೂ,ಸುಳ್ಳು ಹೇಳುವುದನ್ನು ಜೂಜುಕೋರರಿಂದಲೂ ಕಲಿಯಬೇಕಂತೆ.
10.ಹಿತ್ತಾಳೆ ಪಾತ್ರೆಗಳನ್ನು ಬೂದಿಯಿಂದಲೂ, ತಾಮ್ರದ ಪಾತ್ರೆಗಳನ್ನು ಹುಳಿ ಪದಾರ್ತಗಳಿಂದಲೂ ಹೇಗೆ ಶುಭ್ರಮಾಡಬಹುದೋ,ಅದೇ ರೀತಿ ಋತುಕ್ರಮ ಸ್ತ್ರೀಯರನ್ನು ಶುಭ್ರಗೊಳಿಸುತ್ತದಂತೆ.
ಸ್ತ್ರೀಯರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಂತೆ. ಯಾವ ಸ್ತ್ರೀ ತನ್ನನ್ನು ಹೆಚ್ಚಾಗಿ ಪ್ರೀತಿಸುತ್ತಾಳೆ ಎಂದು ತಿಳಿಯುತ್ತಾನೋ ಅಂತಹ ಪುರುಷ ಆ ಸ್ತ್ರೀಗೆ ಅಡಿಯಾಳಾಗಿರುತ್ತಾನೆ.