ಗ್ಯಾಜೆಟ್

ಗ್ರಾಹಕರಿಗೊಂದು ಖುಷಿಯ ಸುದ್ದಿ ‘ಜಿಯೋ 4ಜಿ ಫೀಚರ್ ಫೋನ್ ‘ ..!ತಿಳಿಯಲು ಈ ಲೇಖನ ಓದಿ ..

By admin

November 28, 2017

ಜಿಯೋ ಫೋನ್ ನಿರೀಕ್ಷೆಯಲ್ಲಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಮುಂಗಡ ಬುಕ್ಕಿಂಗ್ ಮಾಡಿದ್ದ ಗ್ರಾಹಕರ ಕೈಗೆ ಈ ವಾರಾಂತ್ಯದಲ್ಲಿ ಜಿಯೋ 4ಜಿ ಫೀಚರ್ ಫೋನ್ ಸಿಗಲಿದೆ. ಮೂಲಗಳ ಪ್ರಕಾರ ಅಕ್ಟೋಬರ್ 1ರಂದು ಜಿಯೋ ತನ್ನ ಫೀಚರ್ ಫೋನ್ ಡಿಲೆವರಿ ಶುರು ಮಾಡಲಿದೆ. ಮೊದಲ ಬಾರಿ ಪ್ರಿ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ಕಿಂಗ್ ಆಗಿತ್ತು. ಆ ವೇಳೆ ಫೋನ್ ಕಾಯ್ದಿರಿಸಿ ಖರೀದಿ ಮಾಡಲು ಸಾಧ್ಯವಾಗದವರಿಗೆ ಕಂಪನಿ ಇಂಟರೆಸ್ಟ್ ರಿಜಿಸ್ಟ್ರೇಷನ್ ಗೆ ಅವಕಾಶ ನೀಡಿತ್ತು.

ಕಂಪನಿ ವೆಬ್ ಸೈಟ್ ನಲ್ಲಿ ಇಂಟರೆಸ್ಟ್ ರಿಜಿಸ್ಟ್ರೇಷನ್ ಈಗಲೂ ಇದೆ. ಇದ್ರಲ್ಲಿ ಆಸಕ್ತರು ತಮ್ಮ ಹೆಸರು ನೋಂದಾಯಿಸಬೇಕಾಗುತ್ತದೆ. ಈಗಾಗಲೇ ಹೆಸರು ನೋಂದಾಯಿಸಿದವರಿಗೆ ಕಂಪನಿ ಸಂದೇಶ ರವಾನೆ ಮಾಡಲಿದೆಯಂತೆ.

ಈ ಸಂದೇಶದಲ್ಲಿ ಒಂದು ಲಿಂಕ್ ನೀಡಲಾಗಿದೆ. ಈ ಲಿಂಕ್ ಓಪನ್ ಮಾಡಿದ್ರೆ ಗ್ರಾಹಕರ ಕೋಡ್ ನಂಬರ್ ಇರಲಿದೆ. ಕೋಡ್ ನಂಬರನ್ನು ಸ್ಥಳೀಯ ರಿಲಾಯನ್ಸ್ ಜಿಯೋ ಮಳಿಗೆಯಲ್ಲಿ ತೋರಿಸಿದ್ರೆ ಜಿಯೋ ಫೋನ್ ನಿಮ್ಮ ಕೈ ಸೇರಲಿದೆ ಎಂದು ಮೂಲಗಳು ಹೇಳ್ತಿವೆ.

ಮೊದಲೇ ಹೇಳಿದಂತೆ ರಿಲಾಯನ್ಸ್ ಜಿಯೋ ಫೀಚರ್ ಫೋನನ್ನು ಉಚಿತವಾಗಿ ನೀಡ್ತಿದೆ. ಭದ್ರತೆಗಾಗಿ 1500 ರೂಪಾಯಿ ನೀಡಬೇಕಾಗುತ್ತದೆ. ಮೂರು ವರ್ಷಗಳ ನಂತ್ರ ಗ್ರಾಹಕ ಈ ಫೋನನ್ನು ವಾಪಸ್ ಮಾಡಬಹುದಾಗಿದೆ. ಈ ಫೋನ್ ಗೆ ಪ್ರತಿ ತಿಂಗಳು 153 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಮಾತ್ರ ಕಂಪನಿ ನೀಡುವ ಲಾಭವನ್ನು ನೀವು ಪಡೆಯಬಹುದಾಗಿದೆ.