govt

ಗೋ ಮಾತೆ ರಕ್ಷಿಸಿವ ಪ್ರಯತ್ನ ಮಾಡಿದ ಭಾರತದ ಮೊದಲ ಧೈರ್ಯವಂತ ಪ್ರಧಾನಿ – ನಮೋ- ನಮೋ

By admin

May 27, 2017

ಇನ್ನು ಮುಂದೆ ಕಸಾಯಿಖಾನೆಗಳಿಗೆ ಗೋವುಗಳನ್ನು ಮಾರಾಟ ಮಾಡುವಂತಿಲ್ಲ

ದೇಶಾದ್ಯಂತ ಗೋ ಹತ್ಯೆ ನಿಷೇಧ, ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ, ಬಲಿಕೊಡಲು ಅಥವಾ ಕೊಲ್ಲಲು ಕೊಡುವಂತಿಲ್ಲ, ಕೇವಲ ರೈತರಿಗಷ್ಟೇ ಮಾರಾಟ ಮಾಡಬಹುದು ಯಾರಿಗೆ ಮಾರಾಟ ಮಾಡಿದೆ ಅನ್ನೋ ದಾಖಲೆ ಹೊಂದಿರಬೇಕು, ಮಾರಾಟ ಮಾಡಿದ ಮತ್ತು ಖರೀದಿ ಮಾಡಿದ ವ್ಯಕ್ತಿಗಳು ರಸೀದಿ ಹೊಂದಿರಬೇಕು.

ಮೋದಿ ಸರ್ಕಾರ ಕಸಾಯಿಖಾನೆಗಳಿಗೆ ಜಾನುವಾರುಗಳ ಮಾರಾಟವನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮೂರನೇ ವರ್ಷದ ಸಂಭ್ರಮದ ಹೊತ್ತಲ್ಲೇ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

ಪರಿಸರ ಖಾತೆ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಭಾರತ ಸರ್ಕಾರ ಒಮ್ಮತದಿಂದ ಈ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದ್ದು ಈ ವಾರವೇ ಅಧಿಸೂಚನೆ ಜಾರಿಯಗುವ ಸಾಧ್ಯತೆಯಿದೆ. ಜಾನುವಾರುಗಳನ್ನು ಕೃಷಿ ಉಪಯೋಗಕ್ಕೆ ಮಾತ್ರ ಮಾರಾಟ ಮಾಡಬೇಕು, ಕಸಾಯಿಖಾನೆಗೆ ಮಾರುವಂತಿಲ್ಲ ಎಂದು ಪ್ರಾಣಿ ಹಿಂಸೆ ತಡೆ (ಪಿಸಿಎ) ಕಾಯ್ದೆಯ 1960ರ ಸೆಕ್ಷನ್ ಅಡಿಯಲ್ಲಿ ಈ ನಿರ್ಬಂಧ ಹೇರಲಾಗಿದೆ.

ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆಗೆದುಕೊಂಡು ಹೋಗುವಾಗ ಆ ರಾಜ್ಯ ಸರ್ಕಾರದ ವಿಶೇಷ ಅನುಮತಿಯನ್ನು ಪಡೆಯಬೇಕು. ಧಾರ್ಮಿಕ ಕಾರ್ಯಕ್ರಮದಲ್ಲೂ ಈ ಮೇಲೆ ತಿಳಿಸಿದ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಲಾಗಿದೆ.

ಹೊಸ ನಿಯಮದಲ್ಲಿರುವ ಪ್ರಮುಖ ಅಂಶಗಳು ಇನ್ನು ಮುಂದೆ ಜಾನುವಾರುಗಳನ್ನು ವ್ಯಾಪಾರ ಮಾಡುವ ಮಾರಾಟಗಾರರು ಮತ್ತು ಖರೀದಿ ಮಾಡುವವರು ಗುರುತಿನ ಚೀಟಿ ಮತ್ತು ಮಾಲೀಕತ್ವದ ದಾಖಲೆಗಳನ್ನು ತೋರಿಸಬೇಕಾಗುತ್ತದೆ.

ಖರೀದಿಸಿದ ಜಾನುವಾರನ್ನು 6 ತಿಂಗಳೊಳಗೆ ಮತ್ತೊಮ್ಮೆ ಮಾರಾಟ ಮಾಡುವಂತಿಲ್ಲ. ರೈತರಿಗೆ ಮಾತ್ರ ಜಾನುವರನ್ನು ಮಾರಾಟ ಮಾಡಬೇಕು. ಖರೀದಿಸುವಾಗ ಕಡ್ಡಾಯವಾಗಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಎಳೆ ಕರುಗಳನ್ನು ಅಥವಾ ಅನಾರೋಗ್ಯ ಪೀಡಿತ ಹಸುಗಳನ್ನು ಮಾರಾಟ ಮಾಡುವಂತಿಲ್ಲ.

5 ಪ್ರತಿಗಳನ್ನು ಇಟ್ಟುಕೊಳ್ಳಬೇಕು: ಒಂದು ಹಸುವನ್ನು ಕೊಂಡುಕೊಂಡರೆ, ಜಾನುವಾರು ವ್ಯಾಪಾರಿಯು ಮಾರಾಟ ಮಾಡಿದ ದಾಖಲೆಗಳ 5 ಪ್ರತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಒಂದು ಪ್ರತಿಯನ್ನು ಸ್ಥಳೀಯ ಕಂದಾಯ ಅಧಿಕಾರಿಗೆ, ಎರಡನೇ ಪ್ರತಿಯನ್ನು ಹಸು ಖರೀದಿ ಮಾಡಿದ ವ್ಯಕ್ತಿಯ ಜಿಲ್ಲೆಯ ಸ್ಥಳೀಯ ಪಶು ವೈದ್ಯರಿಗೆ, ಮೂರನೇ ಪ್ರತಿಯನ್ನು ಜಾನುವಾರು ಮಾರುಕಟ್ಟೆ ಸಮಿತಿಗೆ ನೀಡಬೇಕಾಗುತ್ತದೆ. ಮಾರಾಟಗಾರ ಮತ್ತು ಖರೀದಿಸಿದ ವ್ಯಕ್ತಿಯೂ ಒಂದೊಂದು ಪ್ರತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.

ಸಂಕ್ಷಿಪ್ತ ವಾಗಿ ಏನಿದು ಇಲ್ಲಿ ನೋಡಿ.

ಕೇರಳದಲ್ಲಿ ಬಾರಿ ವಿರೋಧ 

ಹಸುವಿನ ವಧೆ ನಿಷೇಧದ ಬಗ್ಗೆ ಕೇರಳ ಸರ್ಕಾರ ಕೋಪ ವ್ಯಕ್ತಪಡಿಸಿದೆ. ಸುದ್ದಿಗೆ ಪ್ರತಿಕ್ರಿಯಿಸಿದ ಕೇರಳದ ಎಡಪಕ್ಷ ಸರ್ಕಾರವು ಅದು ಫ್ಯಾಸಿಸ್ಟ್ ಚಳುವಳಿ ಎಂದು ಹೇಳಿದೆ. ವಾಸ್ತವವಾಗಿ, ಕೇರಳದ ಮುಖ್ಯಮಂತ್ರಿ ಪಿನಾರೈ ವಿಜಯನ್ ಅವರು ಟ್ವೀಟ್ ಮಾಡಿದರು: “ಆರ್ಎಸ್ಎಸ್ ಮತ್ತು ಇತರ ಅಂಚುಗಳ ಫ್ಯಾಸಿಸ್ಟ್ ನೀತಿಗಳನ್ನು ಜಾರಿಗೆ ತರಲು ನಾವು (ಕೇಂದ್ರ) ಸರ್ಕಾರವನ್ನು ಅನುಮತಿಸುವುದಿಲ್ಲ. ಇಂತಹ ಹಲವು ಅಧಿಸೂಚನೆಗಳನ್ನು ನಾವು ಬಿಡುಗಡೆ ಮಾಡೋಣ, ನಾವು ಅವರನ್ನು ಅನುಸರಿಸುವುದಿಲ್ಲ “ಎಂದು ಕೇರಳ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಹೇಳಿದ್ದಾರೆ.