ತಮ್ಮ ಜೀವನದ ಬಗ್ಗೆ ಸಂಪೂರ್ಣವಾಗಿ ಗೊಂದಲದಲ್ಲಿ ಸಿಲುಕಿಕೊಂಡಿರುವರು. ಇದರಿಂದ ಅವರಿಗೆ ಜೀವನದಲ್ಲಿ ಏನು ಮಾಡಬೇಕೆನ್ನುವುದೇ ತಿಳಿಯಲ್ಲ. ಇಲ್ಲೊಬ್ಬ ವ್ಯಕ್ತಿಗೆ ತನ್ನ ಲಿಂಗದ ಬಗ್ಗೆಯೇ ಗೊಂದಲ ಮೂಡಿದೆ.
ಆ ವ್ಯಕ್ತಿಯೇ ರಿಯಾ ಕೂಪರ್. ಆತ ತನ್ನ ಲಿಂಗದ ಗೊಂದಲದಲ್ಲಿ ಮೂರು ಸಲ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾನೆ. ರಿಯಾ ಕೂಪರ್ ಇಂಗ್ಲೆಂಡಿನಲ್ಲಿ ಅತೀ ಸಣ್ಣ ವಯಸ್ಸಿನಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡವ ಎನ್ನುವ ಪ್ರಸಿದ್ಧಿಗೆ ಒಳಗಾದ. ಆತ ಕೇವಲ 15 ವರ್ಷದಲ್ಲಿ ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿ ಕೊಂಡ ಮತ್ತು ಇದರಿಂದ ಬೇಸತ್ತು ಮತ್ತೆ ಲಿಂಗ ಪರಿವರ್ತನೆಗೆ ಮುಂದಾದ. ಆತ ಹೀಗೆ ಮೂರು ಸಲ ಲಿಂಗ ಪರಿವರ್ತನೆ ಮಾಡಿದ.
12ನೇ ವಯಸ್ಸಿನಲ್ಲಿ ಆರಂಭ:-
12 ವಯಸ್ಸಿನಲ್ಲಿ ಕೂಪರ್ ಮಹಿಳೆಯರಂತೆ ಬಟ್ಟೆ ಧರಿಸಲು ಆರಂಭಿಸಿದ. 15ನೇ ವಯಸ್ಸಿನಲ್ಲಿ ಆತ ಮಹಿಳೆಯಾಗಬೇಕೆಂದು ಸಂಪೂರ್ಣವಾಗಿ ನಿರ್ಧರಿಸಿದ್ದ.
ವೈದ್ಯಕೀಯ ಸಲಹೆ ಮತ್ತು ಮನೋಶಾಸ್ತ್ರಜ್ಞರ ನೆರವಿನಿಂದ ಹಾರ್ಮೋನು ಚಿಕಿತ್ಸೆ ಆರಂಭಿಸಲಾಯಿತು ಮತ್ತು ಈ ಚಿಕಿತ್ಸೆಯ ಅಂತ್ಯಕ್ಕೆ ಆತ ಮಹಿಳೆಯಾದ.
ಮನಸ್ಸು ಬದಲಾವಣೆ:-
ಇಷ್ಟು ಸಣ್ಣ ವಯಸ್ಸಿನಲ್ಲಿ ತನ್ನ ಲಿಂಗ ಪರಿವರ್ತನೆ ಮಾಡಿಕೊಂಡಿರುವುದು ಸರಿಯಲ್ಲ ಎಂದು ಕೂಪರ್ ಗೆ ಅನಿಸಿತು. ಇದರಿಂದ 18ನೇ ಹುಟ್ಟುಹಬ್ಬದ ಬಳಿಕ ಆತ ಮತ್ತೆ ಪುರುಷನಾದ ಮತ್ತು ಸಲಿಂಗಿಯಾಗಿ ವಾಸಿಸಲು ಆರಂಭಿಸಿದ.
ಮತ್ತೆ ಮಹಿಳೆಯಾಗುವ ಮನಸ್ಸು ಆಯಿತು..
ಪುರುಷ ಹಾಗೂ ಸಲಿಂಗಿಯಾಗಿ ಬದುಕುವುದು ಕೂಪರ್ ಗೆ ಸಂತಸ ನೀಡಲಿಲ್ಲ. ಇದರಿಂದ ಆತ ಮತ್ತೆ ತನ್ನ ಲಿಂಗ ಪರಿವರ್ತನೆ ಮಾಡಿಕೊಳ್ಳಲು ನಿರ್ಧರಿಸಿದ. ಮಹಿಳೆಯಾಗಿ ಪರಿವರ್ತೆನೆಯಾಗಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು.
ಈ ಅವಧಿಯಲ್ಲಿ ಆತ ತುಂಬಾ ಭಾವನಾತ್ಮಕ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದ. ಶಸ್ತ್ರಚಿಕಿತ್ಸೆಯನ್ನು ಅರ್ಧದಲ್ಲೇ ನಿಲ್ಲಿಸಿದ ಆತ ಮತ್ತೆ ಪುರುಷನಾಗಲು ಇಚ್ಛಿಸಿದ.
ಈ ಪ್ರಕ್ರಿಯೆಯಲ್ಲಿ ಹಲವಾರು ಪ್ರೀತಿ ಪಾತ್ರರನ್ನು ಕಳದು ಕೊಂಡ:-
ತನ್ನ ನಿರ್ಧಾರದಿಂದಾಗಿ ಕುಟುಂಬದಿಂದ ದೂರವಾಗಬೇಕಾಯಿತು ಮತ್ತು ಇದನ್ನು ಸರಿಯಾಗಿಸಬೇಕಾಗಿದೆ. ಇದಕ್ಕಾಗಿ ಆತ ಮತ್ತೆ ಪುರುಷನಾಗಿದ್ದಾನೆ. ಪುರುಷನಾಗಿ ಆತನಿಗೆ ಒಳ್ಳೆಯ ಪ್ರೀತಿ ಸಿಗಲಿದೆ ಎಂದು ಆತ ಭಾವಿಸಿದ್ದಾನೆ.