ಬೆಂಗಳೂರು: ಗಾಯಿತ್ರಿ ಚಿತ್ರ ನೋಡುತ್ತಿದ್ದ ವಿಜಿ ಎಂಬಾತ ಬಾಲ್ಕನಿಯಿಂದ ಬಿದ್ದಿಲ್ಲ. ಆತ ಕುಳಿತ ಸ್ಥಳದಿಂದಲೇ ಕುಸಿದು ಬಿದ್ದಿದ್ದಾನೆ ಎಂದು ಮೇನಕಾ ಚಿತ್ರ ಮಂದಿರ ಮಾಲೀಕರಾದ ವಿಶ್ವನಾಥ್ ತಿಳಿಸಿದ್ದಾರೆ.
ಗಾಂಧಿನಗರದಲ್ಲಿರೋ ಮೇನಕಾ ಚಿತ್ರಮಂದಿರದಲ್ಲಿ ಗಾಯಿತ್ರಿ ಚಿತ್ರ ನೋಡುತ್ತಿದ್ದ ವ್ಯಕ್ತಿಯೊಬ್ಬ ಕುಳಿತ ಸ್ಥಳದಿಂದಲೇ ಕುಸಿದು ಬಿದ್ದಿರುವ ವಿಚಾರಕ್ಕೆ ಟ್ವಿಸ್ಟ್ ದೊರೆತಿದೆ.
ಘಟನೆಗೆ ಸಂಬಂಧಿಸಿದಂತೆ ಇದೀಗ ಪಬ್ಲಿಕ್ ಟಿವಿಗೆ ಮಾಹಿತಿಯೊಂದು ಲಭ್ಯವಾಗಿದ್ದು, ಇಂದೊಂದು ಸೆಕೆಂಡ್ ಕ್ಲಾಸ್ ನಲ್ಲಿ ಟಿಕೆಟ್ ಪಡೆದು ಚಿತ್ರ ವೀಕ್ಷಿಸುತ್ತಿದ್ದಾಗ ನಡೆದ ಘಟನೆ ನಡೆದಿರೋದು ಸ್ಪಷ್ಟವಾಗಿದೆ. ಅಲ್ಲದೇ ಚಿತ್ರದ ಪ್ರಚಾರಕ್ಕಾಗಿ ಮಾಡಿರೋ ಪ್ರೀ ಪ್ಲಾನ್ ಅನ್ನೋ ಅನುಮಾನ ಹುಟ್ಟಿಸಿದೆ. ಘಟನೆ ಆದ ತಕ್ಷಣ ಚಿತ್ರತಂಡದವರೊಬ್ಬರು ಫೇಸ್ ಬುಕ್ ಲೈವ್ ಮಾಡಿದ್ದರಿಂದ ಈ ಅನುಮಾನ ಪ್ರಶ್ನೆ ಎದ್ದಿದೆ.
ಒಟ್ಟಿನಲ್ಲಿ ಬಿದ್ದ ಅಸ್ವಸ್ಥಗೊಂಡು ಯುವಕ ಲಕ್ಕಪ್ಪನನ್ನು ಕೂಡಲೇ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ. ಲಕ್ಕಪ್ಪ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
ಗಾಯಿತ್ರಿ ಚಿತ್ರ ನೋಡುತ್ತಿದ್ದ ಪ್ರೇಕ್ಷಕ ಸಿನಿಮಾ ನೋಡಿ ಬಾಲ್ಕನಿಯಿಂದ ಬಿದ್ದಿದ್ದಾನೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ಸಿನಿಮಾ ತಂಡದಲ್ಲಿ ಕೆಲಸ ಮಾಡಿದ ವ್ಯಕ್ತಿ ಇವತ್ತು ಸೆಕೆಂಡ್ ಕ್ಲಾಸ್ ನಲ್ಲಿ ಕುಳಿತುಕೊಂಡಿದ್ದ. ಬಾಲ್ಕನಿಯಿಂದ ಆತ ಬಿದ್ದಿಲ್ಲ. ಅಪಸ್ಮರ ಬಂದು ಕುಳಿತ ಸ್ಥಳದಿಂದಲೇ ಆತ ಕೆಳಗೆ ಬಿದ್ದಿದ್ದಾನೆ. ಈಗ ಆತನನ್ನು ಕೆಸಿ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ತಿಳಿಸಿದರು.
ಬಾಲ್ಕನಿಯಿಂದ ಬಿದ್ದಿದ್ದಾನೆ ಎನ್ನುವ ಸುದ್ದಿ ಬಂದಿದೆ ಎನ್ನುವ ಪ್ರಶ್ನೆಗೆ, ಬಾಲ್ಕನಿಯಿಂದ ಆತ ಬೀಳಲೇ ಇಲ್ಲ. ನಮ್ಮಲ್ಲಿ ಸಿಸಿಟಿವಿ ದೃಶ್ಯವಿದೆ. ಕುಳಿತಲ್ಲಿಂದ ಬಿದ್ದ ಕೂಡಲೇ ಆತನನ್ನು ಆಂಬುಲೆನ್ಸ್ ಮೂಲಕ ಕೆಸಿ ಜನರಲ್ ಆಸ್ಪತ್ರಗೆ ದಾಖಲಿಸಲಾಗಿದೆ. ಬಾಲ್ಕನಿಯಿಂದ ಬಿದ್ದಿದ್ದಾನೆ ಎನ್ನುವ ಸುದ್ದಿ ಸುಳ್ಳು ಅದು ಗಿಮಿಕ್ ಎಂದು ವಿಶ್ವನಾಥ್ ಹೇಳಿದರು.
ಚಿತ್ರದ ನಿರ್ಮಾಪಕಿ ಭಾರತಿ ಅವರು ಪ್ರತಿಕ್ರಿಯಿಸಿ, ಸಿನಿಮಾ ಶೂಟಿಂಗ್ ವೇಳೆ ಆತ ಭಯ ಆಗುತ್ತದೆ ಎಂದು ಹೇಳಿದ್ದ. ಅಷ್ಟೇ ಅಲ್ಲದೇ ಆತ ಕ್ಲೈಮಾಕ್ಸ್ ಪಾತ್ರದಲ್ಲೂ ಅಭಿನಯಿಸಿದ್ದ. ಆತನಿಗೆ ಏನಾಯ್ತು ಎನ್ನುವ ಮಾಹಿತಿ ತಿಳಿದಿಲ್ಲ ಎಂದು ಅವರು ತಿಳಿಸಿದರು.
ಸತ್ಯ ಸಾಮ್ರಾಟ್ ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಚೇತನ್, ಶೋಭಾರಾಣಿ, ನಯನಾ ಕೃಷ್ಣ, ಸ್ಮೈಲ್ ಶಿವು, ರೋಹಿತ್, ಪೂಜಾ, ರಂಜಿತಾ, ಲೋರ್ಡ್ ತೆಲಾಸ್, ಶೋಭರಾಜ್, ರಾಣಿ, ಥ್ರಿಲ್ಲರ್ ವೆಂಕಟೇಶ್, ಮೋಹನ್ ಜುನೇಜ, ದುಬೈ ರಫೀ ಅಭಿನಯಿಸಿದ್ದಾರೆ.
ಮನೆಯೊಂದರಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಸುತ್ತ ಚಿತ್ರಕತೆ ಇದ್ದು, ಒಂದು ಬಂಗಲೆಯಲ್ಲಿ ಮೂರು ಜನ ಅತಿಥಿಗಳಾಗಿ ಹೋಗುತ್ತಾರೆ. ಅಲ್ಲಿ ಮೂವರು ಹೆಣ್ಣು ಮಕ್ಕಳು ವಾಸವಿರುತ್ತಾರೆ. ಬಂಗಲೆಯಲ್ಲಿ ನಡೆಯುವ ನಿಗೂಢ ಘಟನೆಗಳೇ ಈ ಚಿತ್ರದಲ್ಲಿ ತೋರಿಸಲಾಗಿದೆ.
ಗಾಯಿತ್ರಿ ಎಂಬ ಕನ್ನಡ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಸತ್ಯ ಸಾಮ್ರಾಟ್ ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಚೇತನ್, ಶೋಭಾರಾಣಿ, ನಯನಾ ಕೃಷ್ಣ, ಸ್ಮೈಲ್ ಶಿವು, ರೋಹಿತ್, ಪೂಜಾ, ರಂಜಿತಾ, ಲೋರ್ಡ್ ತೆಲಾಸ್, ಶೋಭರಾಜ್, ರಾಣಿ, ಥ್ರಿಲ್ಲರ್ ವೆಂಕಟೇಶ್, ಮೋಹನ್ ಜುನೇಜ, ದುಬೈ ರಫೀ ಅಭಿನಯಿಸಿದ್ದಾರೆ. ಭಾರತಿ ಈ ಚಿತ್ರದ ನಿರ್ಮಾಪಕಿಯಾಗಿದ್ದಾರೆ.
ಮನೆಯೊಂದರಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಸುತ್ತ ಚಿತ್ರಕತೆ ಇದ್ದು, ಒಂದು ಬಂಗಲೆಯಲ್ಲಿ ಮೂರು ಜನ ಅತಿಥಿಗಳಾಗಿ ಹೋಗುತ್ತಾರೆ. ಅಲ್ಲಿ ಮೂವರು ಹೆಣ್ಣು ಮಕ್ಕಳು ವಾಸವಿರುತ್ತಾರೆ. ಬಂಗಲೆಯಲ್ಲಿ ನಡೆಯುವ ನಿಗೂಢ ಘಟನೆಗಳೇ ಈ ಚಿತ್ರದಲ್ಲಿ ತೋರಿಸಲಾಗಿದೆ