ಗರ್ಭಿಣಿ ಸ್ತ್ರೀಯರು ಶಾಂಪೂ, ಹೇರ್ ಕಂಡೀಶನರ್ ಮತ್ತು ಡಿಟರ್ಜೆಂಟ್ ಗಳನ್ನು ಅತಿಯಾಗಿ ಬಳಸುವುದರಿಂದ ಹುಟ್ಟುವ ಮಕ್ಕಳಿಗೆ ಕೆಲ ನ್ಯೂನತೆಗಳು ಕಾಣಿಸಿಕೊಳ್ಳುತ್ತವೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.
ಇಲಿಗಳ ಮೇಲೆ ತಜ್ಞ್ಯರು ಪ್ರಯೋಗ ನಡೆಸಿ ಈ ಅಂಶವನ್ನು ಕಂಡುಕೊಂಡಿದ್ದಾರೆ. ಮಹಿಳೆಯರು ಹೆಚ್ಚಾಗಿ ಬಳಸುವ ವಿವಿಧ ಸೌಂದರ್ಯವರ್ದಕ ಉತ್ವನ್ನಗಳಲ್ಲಿ ಅಮೋನಿಯಂ ಸಂಯುಕ್ತಗಳು ಇರುತ್ತವೆ.
ಅವು ಹುಟ್ಟಲಿರುವ ಮಗುವಿನ ಮಿದುಳು, ಬೆನ್ನುಹುರಿ ಸಹಿತ ವಿವಿಧ ಅಂಗಗಳ ನ್ಯೂನತೆಗೆ ಕಾರಣವಾಗುತ್ತವೆ ಎಂದು ತಜ್ಞ್ಯರು ಎಚ್ಚರಿಸಿದ್ದಾರೆ.
ಮನೆಯಲ್ಲಿ, ಆಸ್ವತ್ರೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಈಜುಕೊಳದಲ್ಲಿ ಹೆಚ್ಚಾಗಿ ಬಳಸುವ ಉತ್ವನ್ನಗಳಲ್ಲಿ ಅಮೋನಿಯಂ ಅಂಶಗಳು ಇರುತ್ತವೆ ಎಂದು ಅಮೇರಿಕದ ವರ್ಜೀನಿಯಾದ ಎಡ್ವರ್ಡ್ ವಿಯಾ ಓಸ್ಥೋಪಾಥಿಕ್ ಮೆಡಿಸನ್ ಕಾಲೇಜಿನ ಪ್ರೊಫೆಸರ್ ಟೆರ್ರಿ ಹ್ಯೂಬೆಕ್ ತಿಳಿಸಿದ್ದಾರೆ.
ಅಲ್ಕೈಲ್ ಡಿಮೆಥಿಲ್ ಬೆಂಝಿಲ್ ಅಮೋನಿಯಂ ಕ್ಲೋರೈಡ್ ಮತ್ತು ಡಿಡೈಕ್ಲ್ ಡಿಮೆಥಿಲ್ ಅಮೋನಿಯಂ ಕ್ಲೋರೈಡ್ ಅಂಶಗಳ ಮಕ್ಕಳಿನ ಅಂಗಾಂಶ ಬೆಳವಣಿಗೆ ಮೇಲೆ ವ್ಯತಿರಿಕ್ತ ಫ್ರಭಾವ ಬೀರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.