*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*
ಕೆಲವು ಮಹಿಳೆಯರಿಗೆ ಹೆಚ್ಚು ಕಾಲ ಬೋಳಿಸದ ಗಡ್ಡದ ಪುರುಷರೇ ಹೆಚ್ಚು ಇಷ್ಟ. ಈ ಗಡ್ಡ ಚುಚ್ಚುತ್ತದೆ ಎಂದು ಉಳಿದ ಮಹಿಳೆಯರು ದೂರು ಸರಿದರು ಕೆಲವರಿಗೆ ಮಾತ್ರ ಈ ಚುಚ್ಚುವಿಕೆಯೇ ಹೆಚ್ಚು ಇಷ್ಟವಾಗುತ್ತದಂತೆ! ಈಗ ಬಹುತೇಕ ಪುರುಷರು ರಗಡ್ ಲುಕ್ ಎಂದು ಗಡ್ಡ ಮತ್ತು ಮೀಸೆಯನ್ನು ಉರಿಗೊಳಿಸುವುದನ್ನು ನೀವು ನೋಡಿರಬಹುದು.
ಮಹಿಳೆಯರು ಈ ಲುಕ್ ಅನ್ನು ಇಷ್ಟಪಡುತ್ತಾರೆ ಎಂದೇ ಪುರುಷರು ಈ ಲುಕ್ ಅನ್ನು ಬಯಸುವುದು.ಆದರೆ ಸಾಮಾನ್ಯವಾಗಿ ಒಂದು ನೀತಿ ಇದೆ ಮಹಿಳೆಯರಿಗೆ ಗಡ್ಡವನ್ನು ಕಂಡರೆ ಆಗುವುದಿಲ್ಲ. ಅದರಲ್ಲೂ ಹೆಂಡತಿಯರು ಗಂಡನ ಕೆನ್ನೆಯ ಮೇಲೆ ಸ್ವಲ್ಪ ಕೂಳೆ ಬಂದರೂ ಚುಂಬಿಸುವಾಗ ಮತ್ತು ಮುದ್ದಾಡುವಾಗ ಕಿರಿಕಿರಿಗೆ ಒಳಗಾಗಿ ಗಂಡನಿಗೆ ಒಂದು ಏಟು ಸಹ ಬಿಟ್ಟು ಶೇವ್ ಮಾಡಿ ಎಂದು ಹೇಳುತ್ತಾರೆ. ಆದರೆ ಕೆಲವು ಮಹಿಳೆಯರು ಈಗ ಇರುವ ಟ್ರೆಂಡ್ ಅನ್ನು ತನ್ನ ಸಂಗಾತಿ ಸಹ ಪಾಲಿಸಬೇಕು ಎಂದು ಗಡ್ಡ ಬೆಳೆಸಲು ಪ್ರೋತ್ಸಾಹಿಸುತ್ತಾರೆ.
ಗಡ್ಡ ವನ್ನು ಕುರಿತು ಮಹಿಳೆಯರ ಅಭಿಪ್ರಾಯ ಏನು ಗೊತ್ತಾ ..?
1. ಗಡ್ಡವು ಮುಖದ ವಿಸ್ತರಸಿದ ಭಾಗವಾಗಿ ಕಾಣುತ್ತದೆ. ಇದರಿಂದಾಗಿ ಮುಖವು ಸ್ನಾಯುಗಳಿಂದ ಕೂಡಿದಂತೆ ಕಾಣುತ್ತದೆ. ಇದು ಮಹಿಳೆಯರನ್ನು ಸುಪ್ತವಾಗಿ ಆಕರ್ಷಿಸುತ್ತದೆ.
2. ಕೆಲವು ಸಂಶೋಧನೆಗಳ ಪ್ರಕಾರ ಗಡ್ಡವನ್ನು ಇಷ್ಟಪಡುವ ಮಹಿಳೆಯರ ತಂದೆ, ಅಜ್ಜ ಅಥವಾ ಆಕೆಯ ಆಪ್ತರಲ್ಲಿ ಯಾರಾದರೂ ಗಡ್ಡವನ್ನು ಹೊಂದಿದ್ದು ಆ ವ್ಯಕ್ತಿತ್ವವನ್ನು ಆಕೆ ತನ್ನ ಪುರುಷನಲ್ಲಿಯೂ ಕಾಣಬಯಸುತ್ತಾಳೆ. ಇದು ಗಡ್ಡವನ್ನು ಇಷ್ಟಪಡಲು ಪ್ರಮುಖವಾದ ಕಾರಣವಾಗಿದೆ.
3. ಗಡ್ಡವು ಪ್ರಬುದ್ಧತೆಯ ಸಂಕೇತ. ಬಹುತೇಕ ಮಹಿಳೆಯರು ಪ್ರಬುದ್ಧ ವ್ಯಕ್ತಿಯ ಜೊತೆಗೆ ಇರುವುದು ಸುರಕ್ಷಿತ ಎಂದು ಭಾವಿಸುತ್ತಾರೆ.
4. ಹಲವಾರು ಸಮೀಕ್ಷೆಗಳಲ್ಲಿ ಮಹಿಳೆಯರು ಗಡ್ಡವು ತಮ್ಮ ಕೆನ್ನೆಯ ತ್ವಚೆಯನ್ನು ತರಚುವ ಅನುಭವ ತಮಗೆ ಇಷ್ಟ, ಹಾಗಾಗಿ ನಾವು ಗಡ್ಡವನ್ನು ಇಷ್ಟಪಡುತ್ತೇವೆ ಎಂದು ತಿಳಿಸಿದ್ದಾರೆ.
5. ಕೆಲವು ಮಹಿಳೆಯರು ಚೆನ್ನಾಗಿ ಶೇವ್ ಮಾಡಿದ ಪುರುಷರನ್ನು ಹೆಣ್ಣಿನಂತೆ ಕಾಣುತ್ತಾನೆ ಎಂದು ತಿರಸ್ಕರಿಸುತ್ತಾರೆ.
6. ಗಡ್ಡ ಇರುವ ಮತ್ತು ಗಡ್ಡ ಇಲ್ಲದಿರುವ ವ್ಯಕ್ತಿಗಳಿಬ್ಬರನ್ನು ನೀವು ಹೋಲಿಸಿ ನೋಡಿದಾಗ ಗಡ್ಡ ಇರುವ ವ್ಯಕ್ತಿಯು ತುಂಬಾ ಸದೃಢನಾಗಿ ಕಾಣುತ್ತಾನೆ.