ಕ್ರೀಡೆ

ಖ್ಯಾತ ಬ್ಯಾಡ್ಮಿಂಟನ್ ತಾರೆ,ಈಗ ಜಿಲ್ಲಾಧಿಕಾರಿ!ಇದಕ್ಕೆ ನಿಮ್ಮ ಸಹಮತವೇನು?ಈ ಲೇಖನಿ ಓದಿ,ಕಾಮೆಂಟ್ ಮಾಡಿ ತಿಳಿಸಿ…

By admin

August 11, 2017

ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿತ್ತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಪಾಯಿಂಟ್ಮೆಂಟ್ ಲೆಟರ್ ಅನ್ನು ಸಿಂಧುಗೆ ಹಸ್ತಾಂತರಿಸಿದ್ದರು. 30 ದಿನಗಳೊಳಗೆ ಡೆಪ್ಯೂಟಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸುವಂತೆ ಆಂಧ್ರ ಸರ್ಕಾರ ಸಿಂಧುಗೆ ಸೂಚಿಸಿತ್ತು. ಹಾಗೂ ಸಿಂಧು ಅವರನ್ನು ಗ್ರೂಪ್-1 ಹುದ್ದೆಗೆ ನೇಮಕ ಮಾಡಲು ರಾಜ್ಯ ಸಾರ್ವಜನಿಕ ಸೇವಾ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು.

ಇದಕ್ಕೆ ಪ್ರತಿಕ್ರಯಿಸಿದ್ದ ಸಿಂಧುರವರು, ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದರು ಹಾಗೂ ಬ್ಯಾಡ್ಮಿಂಟನ್ ಗೆ ತಮ್ಮ ಮೊದಲ ಆದ್ಯತೆ ಅಂತಾ ಹೇಳಿದ್ದರು. ಆಗ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುರವರು ಸಿಂಧುಗೆ ಶುಭ ಹಾರೈಸಿ, ದೇಶಕ್ಕೆ ಮತ್ತಷ್ಟು ಪದಕಗಳನ್ನು ಗೆದ್ದು ತರಲಿ ಅಂತಾ ಹೇಳಿದ್ರು.

ಹೀಗಾಗಿ ಭಾರತದ ಖ್ಯಾತ ಶಟಲ್‌ ಬ್ಯಾಡ್ಮಿಂಟನ್‌ ಆಟಗಾರ್ತಿ, ಒಲಿಂಪಿಕ್‌ ಪದಕ ವಿಜೇತೆ, ಪಿ ವಿ ಸಿಂಧು ಆಂಧ್ರ ಪ್ರದೇಶ ಸರಕಾರದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಸಿಂಧು ಅವರಿಗೆ ಕಳೆದ ಜು.27ರಂದೇ ಜಿಲ್ಲಾಧಿಕಾರಿಯಾಗಿ ಅಧಿಕೃತ ನೇಮಕಾತಿ ಪತ್ರವನ್ನು ನೀಡಲಾಗಿತ್ತು. ಆದರೆ ಅವರು ನಿನ್ನೆ ಬುಧವಾರ ಔಪಚಾರಿಕವಾಗಿ ತಮ್ಮ ಅಧಿಕಾರ ವಹಿಸಿಕೊಂಡರು.

ಪಿ ವಿ ಸಿಂಧುರವರ ಬಾಲ್ಯದ ಬಗ್ಗೆ ತಿಳಿಯೋಣ:-

ಪಿ.ವಿ ಸಿಂಧುರವರು, 5 ಜುಲೈ 1995ರಂದು ಹೈದರಾಬಾದ್ನoಲ್ಲಿ ಜನಿಸಿದರು. ತಂದೆ ಪಿ.ವಿ. ರಮಣ ಮತ್ತು ತಾಯಿ ಪಿ. ವಿಜಯ. ಸಿಂಧುವಿನ ತಂದೆ-ತಾಯಿ ಇಬ್ಬರೂ ಸಹ ಮಾಜಿ ವಾಲಿಬಾಲ್ ಆಟಗಾರರಾಗಿರುವುದೊಂದು ವಿಶೇಷ. ಭಾರತ ಸರ್ಕಾರವು ಕೊಡಮಾಡುವ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಪಿ.ರಮಣರು 2000 ನೆಯ ಇಸವಿಯಲ್ಲಿ ಭಾಜನರಾಗಿದ್ದಾರೆ. ತಂದೆ ವೃತ್ತಿಪರ ವಾಲಿಬಾಲ್ ಆಟಗಾರರಾಗಿದ್ದರೂ ಸಹ ಸಿಂಧು ಮಾತ್ರ ಬ್ಯಾಡ್ಮಿಂಟನ್ ನಡೆಗೆ ಆಕರ್ಷಿತರಾದರು.ಅದಕ್ಕೆ ಕಾರಣ, 2001 ರ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಪುಲ್ಲೇಲ ಗೋಪಿಚಂದ್‍‍ರ ಯಶಸ್ಸು ಮತ್ತು ಅವರಿಂದ ಪಡೆದ ಸ್ಫೂರ್ತಿ. ತನ್ನ ಎಂಟನೆಯ ವಯಸ್ಸಿನಲ್ಲೇ ಸಿಂಧು ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ್ದರು, ಇದೂ ಸಹ ಅವರನ್ನು ಬ್ಯಾಡ್ಮಿಂಟನ್ ಕಡೆಗೆ ಸೆಳೆಯಲು ಕಾರಣವಾಯಿತು.

ಪಿ.ವಿ ಸಿಂಧುರವರ ಬ್ಯಾಡ್ಮಿಂಟನ್ ಸಾಧನೆ:-

ಪಿ.ವಿ ಸಿಂಧುರವರು ಅಂತರರಾಷ್ಟ್ರೀಯ ಖ್ಯಾತಿಯ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ. ಹೈದರಾಬಾದ್ ನ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಇವರು, ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ಸ್ವಸಹಾಯ ಸಂಸ್ಥೆಯಾದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನ ಭಾಗವಾಗಿದ್ದಾರೆ. 10 ಆಗಸ್ಟ್ 2012 ರಂದು ಇವರು ಚೀನಾ ದಲ್ಲಿ ಜರುಗಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ (ಪ್ರಕಾಶ್ ಪಡುಕೋಣೆ 1983 ರಲ್ಲಿ ಕಂಚು ಗೆದ್ದಿದ್ದಾರೆ. ಅನಂತರ ಭಾರತದ ಮೊದಲ ಸಿಂಗಲ್ಸ್ ಪದಕ) ನ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಸೆಪ್ಟೆಂಬರ್ 21,2012 ರಂದು ಬಿಡುಗಡೆ ಮಾಡಲಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಶ್ರೇಯಾಂಕಗಳಲ್ಲಿ ಮೊದಲ 20ರೊಳಗಿನ ಶ್ರೇಣಿಯಲ್ಲಿದ್ದರು. ಬಿಡಬ್ಲ್ಯೂಎಫ್ ಜೂನಿಯರ್ ಶ್ರೇಯಾಂಕಗಳಲ್ಲಿ 3 ನೇ ಸ್ಥಾನದಲ್ಲಿದ್ದಾರೆ.

ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ:-

ಭೂ ಆಡಳಿತೆಯ ಮುಖ್ಯ ಆಯುಕ್ತರಾಗಿರುವ ಅನಿಲ್‌ ಚಂದ್ರ ಪುನೇತ ಅವರಿಗೆ ಪಿ ವಿ ಸಿಂಧು ತಮ್ಮ ನೇಮಕಾತಿ ಪತ್ರವನ್ನು ಸಲ್ಲಿಸಿ ಗ್ರೂಪ್‌ 1 ಸರಕಾರಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಸರಕಾರಿ ಆಡಳಿತೆಯಲ್ಲಿನ ತಮ್ಮ ಜೀವನದ ಹೊಸ ಪಾತ್ರವನ್ನು ಆರಂಭಿಸಿದರು.

ಸಿಂಧು ಅವರ ತನ್ನ ಹೆತ್ತವರೊಡಗೂಡಿ ಸರಕಾರದ ಭೂ ಆಡಳಿತೆಯ ಮುಖ್ಯ ಆಯುಕ್ತರ ಕಚೇರಿಗೆ ತೆರಳಿ ಗೊಲ್ಲಪುಡಿಯಲ್ಲಿನ ಸರಕಾರಿ ಸಚಿವಾಲಯದಲ್ಲಿ ಅಧಿಕಾರ ಗ್ರಹಣ ಮಾಡಿದರು.

 

ಸಿಂಧು ಎರಡು ಬಾರಿಯ ಕಂಚಿನ ಪದಕ ವಿಜೇತೆಯಾಗಿದ್ದಾರೆ.

ಸ್ನೇಹಿತರೆ ನಮ್ಮ ಪ್ರಕಾರ ಯಾವುದೇ ಕ್ರೀಡೆಯಲ್ಲಿ ಯಾರೇ ಆಗಲಿ, ನಮ್ಮ ದೇಶಕ್ಕೆ ಪದಕ ತಂದು ಕೊಡುವಲ್ಲಿ ಸಫಲ ರಾಗಿದ್ದಲ್ಲಿ, ಅಂತಹ ಕ್ರೀಡಾ ಪಟುಗಳಿಗೆ ಅದೇ ಕ್ರೀಡೆಯಲ್ಲಿ ಮುಂದುವರಿಯಲು, ಅವರಿಗೆ ಆರ್ಥಿಕವಾಗಲಿ, ಅಥವಾ ಬೇರೆ ಯಾವುದೇ ರೀತಿಯಿಂದಾಗಲಿ, ಸರಕಾರಗಳು ಪ್ರೋತ್ಸಾಹ ಕೊಡಬೇಕು ಮತ್ತು ಅವರನ್ನು ಬೆಳೆಸಬೇಕು.

ಅದು ಬಿಟ್ಟು ಸರಕಾರಗಳು ತಮ್ಮ ತೋರಿಕೆಗಾಗಿ ಅಧಿಕಾರದ ಗದ್ದುಗೆಯನ್ನು ಕೊಟ್ಟರೆ, ಈ ಅಧಿಕಾರದ ಮಾಯೆ ಕ್ರೀಡೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡುತ್ತದಯೇ? ಹಾಗೂ ಇನ್ನಷ್ಟು ಮತ್ತಷ್ಟು ಪದಕಗಳು ನಮ್ಮ ದೇಶಕ್ಕೆ ಬರಲು ಸಾಧ್ಯವೇ? ನಾವು ನಮ್ಮ ದೇಶದ ಹೆಸರನ್ನು ಸಾಗರದಾಚೆ ಕೊಂಡಯ್ಯುವಂತ, ಉತ್ತಮ ಕ್ರೀಡಾಪಟುವನ್ನು ಕಳೆದುಕೊಂಡಂತೆ ಆಗುವುದಿಲ್ಲವೇ? ಇದಕ್ಕೆ ನಿಮ್ಮ ಅಭಿಪ್ರಾಯವನ್ನು ನಿಮ್ಮ ಕಾಮೆಂಟ್ ಮೂಲಕ ತಿಳಿಸಿ…