ತಿಥಿ ಚಿತ್ರ ಗಡ್ಡಪ್ಪನಿಗೆ ಹೆಸರು ತಂದು ಕೊಟ್ಟಿತು. ನಂತರ ಹಿಂತಿರುಗಿ ನೋಡದ ಗಡ್ಡಪ್ಪ ತರ್ಲೆ ವಿಲೇಜ್, ಏನ್ ನಿನ್ನ ಪ್ರಾಬ್ಲಮ್ಮು, ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಗಡ್ಡಪ್ಪ ಎಂಬ ಖ್ಯಾತಿಯಿಂದಾಗಿ, ಅವರ ಮೂಲ ಹೆಸರೇ ಮರೆತು ಹೋಗಿದೆ. ಅಂದಂಗೆ ಅವರ ಮೂಲ ಹೆಸರು ಚನ್ನೇಗೌಡ.
‘ತಿಥಿ’ ಸ್ಟಾರ್ ಗಡ್ಡಪ್ಪ ಹಾಗೂ ಸೆಂಚುರಿಗೌಡ ಸದ್ಯ ಸ್ಯಾಂಡಲ್ ವುಡ್ ನ ‘ಟಾಕ್ ಆಫ್ ದಿ ಟೌನ್’ ಆಗಿದ್ದಾರೆ. ಬಿಗ್ ಸ್ಟಾರ್ ಗಳಂತೆ ಬ್ಯುಸಿಯಾಗಿರುವ ಇವರಿಬ್ಬರು ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಈಗ ಎಲೇಕ್ಷನ್ ಸಮಯವಾಗಿದ್ದರಿಂದ ಕಾಂಗ್ರೇಸ್ , ಜೆಡಿಎಸ್ ಬಿಜೆಪಿ ಸೇರಿದಂತೆ ಎಲ್ಲ ಪಕ್ಷದವರು ಈ ಗಡ್ಡಪ್ಪನ ಹಿಂದೆ ಬಿದ್ದಿದ್ದಾರೆ, ಕಾರಣ, ತಮ್ಮ ಪಕ್ಷದ ಪ್ರಚಾರಕ್ಕಾಗಿ ದುಟ್ಟು ಕೊಡುತ್ತೇವೆ ಬನ್ನಿ ಅಂತ ಗೋಗರಿಯುತ್ತಾರಂತೆ . ಹೀಗಾಗಿ ಗಡ್ಡಪ್ಪ ಅವರಿಗರ ಬೇಸರವಾಗಿದೆಯಂತೆ.
“ಎಲ್ಲ ಪಕ್ಷದವರೂ ನನ್ನನ್ನು ಕರಿತಾರೆ, ಆದರೆ ನಾನು ಈ ಪಕ್ಷಕ್ಕೆ ಹೋದರೆ ಆ ಪಕ್ಷದವರಿಗೆ ಬೇಜಾರು, ಹೀಗಾಗಿ ನಾನು, ನನಗೆ ಹುಷಾರಿಲ್ಲ ಅಂತ ಹೇಳಿ ತಪ್ಪಿಸಿಕೊಳ್ಳುತ್ತಿದ್ದೇನೆ” ಎನ್ನುತ್ತಾರೆ ಗಡ್ಡಪ್ಪ.