ಖಾಲಿ ಹೊಟ್ಟೆಯಲ್ಲಿ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ!

By admin

June 26, 2017

ಖಾಲಿ ಹೊಟ್ಟೆಯಲ್ಲಿ ಲಿಚ್ಚಿ ತಿಂದರೆ ಸಾವು ಸಂಭವಿಸುತ್ತದೆಯೇ ?

ಲಿಚ್ಚಿಯಲ್ಲಿರುವ ಅಮಿನೋ ಆ್ಯಸಿಡ್ ಎಂಬ ರಾಸಾಯನಿಕ ಅಂಶದಿಂದಾಗಿ ಮಕ್ಕಳಲ್ಲಿ ಸಿಡುಬು ಮತ್ತು ದಡಾರಾ ಕಾಯಿಲೆಯ ಲಕ್ಷಣಗಳು ಗೋಚರಿಸುವಂತೆ ಮಾಡುತ್ತಿವೆ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಅಂಶ ಗಣನೀಯವಾಗಿ  ಇಳಿಯುವಂತೆ ಮಾಡಿ ಮಕ್ಕಳಲ್ಲಿ ಹೈಪೊಗ್ಲಿಸಿಮಿಯಾ ಎಂಬ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದು ಹೆಚ್ಚಾದರೆ ಸಾವು ಕೂಡ ಸಂಭವಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಈ ಹೈಪೊಗ್ಲಿಸಿಮಿಯಾ ಎಂಬ ಸಮಸ್ಯೆಗೆ  ತ್ತುತ್ತಾಗುವ ಮಕ್ಕಳಲ್ಲಿ ಶೇ.40 ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂಬ ಗಂಭೀರ ಅಂಶವನ್ನೂ ವೈದ್ಯರು ಬಯಲಿಗೆಳೆದಿದ್ದಾರೆ.

ಈ ಲಿಚ್ಚಿ ಹಣ್ಣನ್ನು ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅಪರೂಪದ  ಪ್ರಕರಣಗಳಲ್ಲಿ ಸಾವು ಕೂಡ ಸಂಭವಿಸಬಹುದು ಎಂದೂ ವೈದ್ಯರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಲಿಚ್ಚಿ ಹಣ್ಣನ್ನು ತಿನ್ನುವುದೇ ನೇರವಾಗಿ ಅನಾರೋಗ್ಯಕ್ಕೆ ಕಾರಣವಲ್ಲವಾದರೂ ಈ ಹಣ್ಣಿನ ಸೇವನೆ ಬಳಿಕ ಮಧ್ಯಾಹ್ನದ ಊಟ ಸೇವಿಸದೇ ಇರುವುದರಿಂದ ಸಮಸ್ಯೆಗಳು ಉಂಟಾಗುತ್ತವೆ. ಅತೀ ಹೆಚ್ಚು ಪ್ರಮಾಣದಲ್ಲಿ ಲಿಚ್ಚಿ  ಸೇವಿಸುವುದರಿಂದ ಹೊಟ್ಟೆ ತುಂಬಿದಂತಾಗಿ ಊಟ ಮಾಡುವುದನ್ನು ಬಿಡುತ್ತೇವೆ. ಹೀಗಾದಾಗ ದೇಹದಲ್ಲಿನ ಗ್ಲೂಕೋಸ್ ಅಂಶ ಗಣನೀಯವಾಗಿ ಇಳಿಕೆಯಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದೂ ವೈದ್ಯರು ತಿಳಿಸಿದ್ದಾರೆ.

ನಮ್ಮ ದೇಶದ  ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಲಿಚ್ಚಿ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಜೂನ-ಜುಲೈ ತಿಂಗಳಲ್ಲಿ ಈ ಹಣ್ಣುಗಳು ವ್ಯಾಪಕವಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ.