ಕ್ರೀಡೆ

ಕ್ರಿಕೆಟ್ ವಿಶ್ವಕಪ್’ನಲ್ಲಿ ರನ್ನರ್’ಅಪ್ ಆಗಿದ್ದ ಭಾರತ ತಂಡದ, ಕನ್ನಡದ ಈ ಮಹಿಳೆಯರಿಗೆ ಸಿಕ್ಕಿದ್ದೇನು ಗೊತ್ತಾ?

By admin

August 17, 2017

ಇತ್ತೀಚಿಗೆ ನಡೆದ ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಸೋಲು ಅನುಭವಿಸಿತ್ತು.

ಆದರೂ ರನ್ನರ್ ಆಪ್ ಸ್ಥಾನವನ್ನು ಉಳಿಸಿಕೊಂಡಿತ್ತು. ರನ್ನರ್ ಆಪ್ ಸಾಧನೆ ಮಾಡಿದ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್’ಗೆ ತೆಲಂಗಾಣ ಸರ್ಕಾರವು ಒಂದು ಕೋಟಿ ಬೆಲೆ ಬಾಳುವ ನಿವೆಶವವನ್ನು ನೀಡಿ ಜೊತೆಗೆ ಒಂದು ಬಿಎಂಡಬ್ಲು ಕಾರನ್ನು ಗೊಷಿಸಿತ್ತು.

 

ಅದೇ ರೀತಿ ಹರಮನ್ ಪ್ರೀತ್ ಕೌರ್ ಅವರಿಗೆ ಅಲ್ಲಿನ ಸರಕಾರ DYSP ನೇಮಕ ಮಾಡಿಕೊಂಡಿತ್ತು.

 

ಕರ್ನಾಟಕ ರಾಜ್ಯದಿಂದ ಸ್ಪರ್ಧಿಸಿದ್ದ ವೇದಾ ಕೃಷ್ಣ ಮೂರ್ತಿ ಹಾಗೂ ರಾಜೇಶ್ವರಿ ಗಾಯಕವಾಡ್ ಅವರಿಗೆ ತಲಾ 25ಲಕ್ಷ ಮಾತ್ರ ಕರ್ನಾಟಕ ರಾಜ್ಯ ಸರಕಾರ ಘೋಷಿಸಿತ್ತು. ಇದರ ಜೊತೆ ಸರಕಾರಿ ಉದ್ಯೋಗವನ್ನು ನೀಡಬಹುದಿತ್ತು.

ರಾಜೇಶ್ವರಿ ಗಾಯಕವಾಡ್’ರವರಿಗೆ ಸ್ವಂತ ನಿವೆಶನವಿಲ್ಲದ ಕಾರಣ ಅವರು ಬಾಡಿಗೆ ಮನೆಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ವಿಶ್ವ ಮಹಿಳಾ ಕ್ರಿಕೆಟ್ ನಲ್ಲಿ ಹೆಸರು ಮಾಡಿರುವ ಗಾಯಕವಾಡ್’ರವರಿಗೆ ಒಂದು ಸ್ವಂತ ನೀವೇಶನವನ್ನಾದರು ನೀಡಬಹುದಿತ್ತು.

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿರುವ ಇಂತಹ ಪ್ರತಿಭೆಗಳಿಗೆ ಸರಕಾರಗಳು ಪ್ರೋತ್ಸಾಹಿಸಿ ಕ್ರೀಡೆಯಲ್ಲಿ ಮುಂದುವರಿಯಲು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು.