ಆರೋಗ್ಯ

ಕ್ಯಾನ್ಸರ್ ಚಿಕಿತ್ಸೆಯಿಂದ ನಿಮ್ಮ ಕೂದಲು ಉದುರುತ್ತಿದಿಯೇ -ಏನು ಮಾಡಬೇಕು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

By admin

December 11, 2017

ಕಿಮೊಥೆರಪಿ ಹಾಗು ರೇಡಿಯೇಶನ್ ಥೆರಪಿ ಮಾಡಿಸಿಕೊಂಡಲ್ಲಿ ಕೂದಲು ಉದುರುವಿಕೆ ಅಥವಾ ಅಲೋಪಿಶಿಯಾವು ಒಂದು ಪ್ರಧಾನ ಅಡ್ಡ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕೂದಲು ಉದುರುವಿಕೆಯು ಭಾಗಶಃ ಕಾಣಿಸಿಕೊಳ್ಳಬಹುದು ಅಥವಾ ಮುಖ, ಕೈ, ತಲೆ, ಕಾಲು, ಕಂಕುಳು ಹಾಗು ಜನನಾಂಗದ ಭಾಗದ ಮೇಲಿರುವ ಕೂದಲುಗಳೆಲ್ಲಾ ಸಹ ಉದುರಲು ಆರಂಭಿಸಬಹುದು.

ಹಾಗೆಂದು ಕೂದಲು ಶಾಶ್ವತವಾಗಿ ಉದುರಿ ಹೋಗುತ್ತದೆ ಎಂದು ಭಾವಿಸಬೇಡಿ. ಇದು ಈ ಚಿಕಿತ್ಸೆಯನ್ನು ಪಡೆಯುವವರೆಗೆ ಮಾತ್ರ, ಚಿಕಿತ್ಸೆ ನಿಲ್ಲಿಸಿದ ಕೂಡಲೆ ಕೂದಲು ಬೆಳೆಯುವಿಕೆಯು ಮೊದಲಿನಂತಾಗುತ್ತದೆ. ಆದರೆ ಕೂದಲು ತೆಳ್ಳಗೆ ಇರುತ್ತದೆ ಅಷ್ಟೇ.

  1. ಕೂದಲು ಉದುರುವಿಕೆಯ ಕಾರಣಗಳು ಯಾವುವು

ಕೂದಲು ಉದುರುವಿಕೆಯು ಈ ಕೆಳಕಂಡ ಕಾರಣಗಳ ಸಲುವಾಗಿ ಕಾಣಿಸಿಕೊಳ್ಳಬಹುದು:

  1. ಯಾವಾಗ ಕೂದಲು ಬೆಳೆಯುತ್ತದೆ ?

ಈ ಮೊದಲೇ ಹೇಳಿದಂತೆ, ಕೂದಲು ಉದುರುವಿಕೆಯು ಕ್ಯಾನ್ಸರ್‌ ಚಿಕಿತ್ಸೆಯ ಒಂದು ತಾತ್ಕಾಲಿಕ ಭಾಗವಾಗಿರುತ್ತದೆ.

  1. ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೇಗೆ ತಡೆದುಕೊಳ್ಳುವುದು ?

ಕೂದಲು ಉದುರುವಿಕೆಗೆ ಮೊದಲೇ ಅದನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಚಿಕಿತ್ಸೆ ನಡೆಯುವಾಗ ಮತ್ತು ನಡೆದ ಮೇಲೆ ಈ ಸಲಹೆಗಳನ್ನು ಅನುಸರಿಸಿ:-

a.ಚಿಕಿತ್ಸೆಗೆ ಮೊದಲು :-

ಕೂದಲನ್ನು ಸಣ್ಣಗೆ ಕತ್ತರಿಸಿಕೊಳ್ಳಿ: ಚಿಕಿತ್ಸೆ ಪಡೆಯುವ ಮೊದಲೇ ಕೂದಲನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಆಗ ಕೂದಲು ಉದುರುವುದು ಮತ್ತು ಬೆಳೆಯುವುದು ನಿಮ್ಮ ಅರಿವಿಗೆ ಬರುವುದು ಕಡಿಮೆಯಾಗುತ್ತದೆ. ಪುರುಷರು ತಮ್ಮ ತಲೆಯನ್ನು ಬೋಳಿಸಿಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಮಹಿಳೆಯರಿಗೆ ಇದು ಇಷ್ಟವಾಗದ ಸಲಹೆಯಾಗಿರುತ್ತದೆ.

ಕೋಲ್ಡ್ ಕ್ಯಾಪ್ ಥೆರಪಿ: ನಿಮಗೆ ಚಿಕಿತ್ಸೆ ನೀಡುವಾಗ ಕ್ಯಾಪ್ ಅಥವಾ ಕೋಲ್ಡ್ ಪ್ಯಾಕ್‌ಗಳನ್ನು ಧರಿಸಲು ಸಲಹೆ ಮಾಡಬಹುದು. ಕೂದಲು ಉದುರುವುದನ್ನು ತಪ್ಪಿಸಲು ಈ ತಂತ್ರವನ್ನು ಬಳಸಲಾಗುತ್ತದೆ. ಕೋಲ್ಡ್ ಪ್ಯಾಕ್ ತಲೆಯಲ್ಲಿನ ರಕ್ತನಾಳಗಳನ್ನು ಸಂಕುಚಿತಗೊಳಿಸುವ ಮೂಲಕ ಕಿಮೊಥೆರಪಿಯ ಔಷಧಿಗಳು ಕೂದಲಿನ ಬುಡಕ್ಕೆ ತಲುಪುವುದನ್ನು ತಡೆಯುತ್ತದೆ.

b.ಚಿಕಿತ್ಸೆ ಅವಧಿಯಲ್ಲಿ:-

c.ಚಿಕಿತ್ಸೆಯ ನಂತರ  :-

ನಿಮ್ಮ ಸ್ವಾಭಾವಿಕ ಕೂದಲನ್ನು ಮೃದುವಾಗಿ ತೊಳೆಯಿರಿ, ಬಾಚಿರಿ ಅಥವಾ ಕಲರ್ ಮಾಡಿ. ಏಕೆಂದರೆ ಈ ಕೂದಲುಗಳು ತುಂಬಾ ಸೂಕ್ಷ್ಮವಾಗಿ ವರ್ತಿಸುತ್ತವೆ:

ಆತುರಪಡಬೇಡಿ, ನೀವು ಕೂದಲು ಬೆಳೆಯುವುದನ್ನು ನೋಡಲು ಕಾತರದಿಂದ ಇರಬಹುದು. ಆದರೆ ಅದಕ್ಕೂ ಸ್ವಲ್ಪ ಸಮಯ ಬೇಕಾಗುತ್ತದೆ.