ಈಜುಕೊಳಗಳ ರೂಬಿಕ್ ಕ್ಯೂಬ್ ಗಳಲ್ಲಿ ಕಂಡು ಬರುವ ಸಮಸ್ಯೆಯನ್ನು ಬರೀ 48 ಸೆಕೆಂಡ್ ಗಳಲ್ಲಿ ಪರಿಹಾರ ಹುಡುಕಿದ ಮುಂಬೈಕರ್ ಒಬ್ಬರು ಗಿನ್ನಿಸ್ ದಾಖಲೆ ಬರೆದಿದ್ದಾನೆ.
ಮುಂಬೈನ 19 ವರ್ಷದ ಚಿನ್ಮಯಿ ಪ್ರಭು, ಈಜುಕೊಳದ ನೀರಿನ ಒಳಗಡೆ ಕೂತು 9 ರೂಬಿಕ್ ಕ್ಯೂಬ್ ಸಮಸ್ಯೆ ಗಳನ್ನು ಬರೀ 48 ಸೆಕೆಂಡ್ ಗಳಲ್ಲಿ ಬಗೆಹರಿಸಿರೋದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ.
ಪಿರಮಿಡ್ ಮಾದರಿಯಲ್ಲಿರುವ ರೂಬಿಕ್ ಕ್ಯೂಬ್ ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡ್ರೆ ಒಂದೆರಡು ದಿನ ಸಮಯ ಬೇಕಾಗುತ್ತದೆ. ಈ ಹಿಂದೆ ಜಾರ್ಜಿಯಾದಲ್ಲಿ 18 ವರ್ಷದ ಹುಡುಗನೊಬ್ಬ 6 ರೂಬಿಕ್ ಕ್ಯೂಬ್ ಸಮಸ್ಯೆಗಳನ್ನು ಬರೀ ಎರಡು ನಿಮಿಷಗಳಲ್ಲಿ ಬಗೆಹರಿಸಿ ಗಿನ್ನಿಸ್ ದಾಖಲೆ ಬರೆದಿದ್ದ.
ಪ್ರಭು ಈ ಸಾಧನೆಯನ್ನು ಕಳೆದ ಡಿಸೆಂಬರ್ ನಲ್ಲಿ ಮಾಡಿದ್ದ. ಆದ್ರೆ ಗಿನ್ನಿಸ್ ಸಂಸ್ಥೆ 2019ರ ಮಾಚ್೯ನಲ್ಲಿ ಇದಕ್ಕೆ ಅಂಗೀಕಾರದ ಮುದ್ರೆ ಒತ್ತಿದೆ. ಗಿನ್ನಿಸ್ ಸಂಸ್ಥೆ ಕೇವಲ ನಾಲ್ಕು ಟಾರ್ಗೆಟ್ ನೀಡ್ತು. ನಾನು 9 ಬಗೆಹರಿಸಿದೆ ಅಂತಾರೆ ಪ್ರಭು.