ಜಪಾನ್ ವಾಹನ ತಯಾರಕ ಹೋಂಡಾ ತನ್ನ ಕ್ರೀಡಾ ಆವೃತಿಯ ಇ.ವಿ ಪರಿಕಲ್ಪನೆಯನ್ನು ಟೊಕಿಯೊ ಮೋಟಾರ್ ಪ್ರದರ್ಶನದಲ್ಲಿ ಬಹಿರಂಗಪಡಿಸಿದೆ. ಈ ವಾಹನವು ನಗರ ಇ.ವಿ ಪರಿಕಲ್ಪನೆಯನ್ನು ಆಧರಿಸಿದೆ.
ಹೋಂಡಾ ಕಂಪನಿಯು ಮುಂದಿನ 2020ರಲ್ಲಿ ಈ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ ಮತ್ತು 2019ರಲ್ಲಿ ಈ ಎಲೆಕ್ಟ್ರಿಕ್ ವಾಹನದ ಉತ್ಪಾದನೆಯನ್ನು ಪ್ರಾರಂಭಿಸಲಿದೆ. ಸದ್ಯ ಈ ಹೋಂಡಾ ವಿದ್ಯುತ್ ವಾಹನದ ಬಗ್ಗೆ ಹೆಚ್ಚಿನ ವಿವರಗಳನ್ನು ಕಂಪನಿ ಬಹಿರಂಗಪಡಿಸಿದೆ.
2020ರ ಹೊತ್ತಿಗೆ ಬಿಡುಗಡೆಯಾಗುವ ಈ ಹೋಂಡಾ ವಿದ್ಯುತ್ ವಾಹನವನ್ನು ಕೇವಲ 15 ನಿಮಿಷ ಸಮಯದಲ್ಲಿ ಚಾರ್ಜ್ ಮಾಡಬಹುದಾಗಿದೆ ಎಂದು ವರದಿ ಹೇಳಿದೆ. ವಿದ್ಯುತ್ ವಾಹನಗಳು ಕಡಿಮೆ ಸಮಯದಲ್ಲಿ ಚಾರ್ಜ್ ಆಗುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕಡೆ ಹಲವಾರು ತಯಾರಕರು ಕಂಪನಿಗಳು ಈಗಾಗಲೇ ಕಾರ್ಯೋನ್ಮುಕವಾಗಿದ್ದು, ಹೋಂಡಾ ಕಂಪನಿಯ ಈ ಸುದ್ದಿ ಸದ್ಯ ಹೆಚ್ಚು ಚರ್ಚೆಗೆ ಕಾರಣವಾಗಿದೆ.
ಆಧುನಿಕ ಜಗತ್ತಿನಲ್ಲಿ 1 ಗಂಟೆ ಅಥವಾ 2 ಗಂಟೆ ಕೂತು ವಾಹನ ಚಾರ್ಜ್ ಮಾಡುವ ಸಮಯ ಯಾರ ಬಳಿಯೂ ಇಲ್ಲ ಎನ್ನಬಹುದು. ಅದರಲ್ಲಿಯೂ ದಿನ ಬೆಳಗ್ಗೆ ಎದ್ದು ಚಾರ್ಜ್ ಮಾಡುವಷ್ಟು ತಾಳ್ಮೆ ಯಾರು ಇಟ್ಟುಕೊಂಡಿರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಹೋಂಡಾ ಕಂಪನಿ ನೀಡಿರುವ ಈ ಸುದ್ದಿ ಪರಿಸರ ಸ್ನೇಹಿ ವಾಹನ ಪ್ರಿಯರಿಗೆ ಖುಷಿ ನೀಡಿದೆ.
ಕೇವಲ 15 ನಿಮಿಷಗಳ ಚಾರ್ಜಿಂಗ್ ಸಮಯದೊಂದಿಗೆ ಈ ವಾಹನವು 241 ಕಿ.ಮೀ ವ್ಯಾಪ್ತಿಯನ್ನು ತಲುಪಲಿದೆ. ಅಂತಹ ಕಡಿಮೆ ಚಾರ್ಜಿಂಗ್ ಸಮಯವನ್ನು ಸಾಧಿಸಲು, ಹೋಂಡಾ ಕಂಪನಿಯು ಅಲ್ಟ್ರಾ ಫಾಸ್ಟ್ ಚಾರ್ಜರ್‌ಗಳೊಂದಿಗೆ ಹೊಸ ಬ್ಯಾಟರಿ ಅಳವಡಿಸಿದೆ.
ಹೊಸ ಬ್ಯಾಟರಿಗಳನ್ನು ಪೂರೈಸಲು ಮತ್ತೊಂದು ಕಂಪನಿಯೊಂದಿಗೆ ಕೈಜೋಡಿಸಲಿದೆಯೇ ಕಾದು ನೋಡಬೇಕಾಗಿದೆ. ವೇಗದ ಚಾರ್ಜಿಂಗ್ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಮೊದಲು, ಕ್ರಮವಾಗಿ 2019 ಮತ್ತು 2020ರಲ್ಲಿ ಯೂರೋಪ್ ಮತ್ತು ಜಪಾನ್ ಸಮೂಹ-ಮಾರುಕಟ್ಟೆಗೆ ಹೊಸ ವಿದ್ಯುತ್ ವಾಹನಗಳನ್ನು ಪ್ರಾರಂಭಿಸುವ ಯೋಜನೆಯನ್ನು ಹೋಂಡಾ ಹೊಂದಿದೆ.
ಇತರ ರಾಷ್ಟ್ರಗಳಂತೆಯೇ, ಶುದ್ಧ ವಿದ್ಯುತ್ ವಾಹನಗಳಿಗೆ ಭಾರತವೂ ಸಹ ಹೆಚ್ಚು ಒತ್ತು ನೀಡುತ್ತಿದೆ. ಆದರೆ, ಮೂಲ ಸೌಕರ್ಯಗಳನ್ನು ಇಲ್ಲದೆ ಈ 2030 ಮಿಷನ್ ಸಾಧಿಸುವುದು ಕಷ್ಟ ಸಾಧ್ಯವಾಗಲಿದೆ. ಈ ಬಗ್ಗೆ ಕೇಂದ್ರ ಗಮನಹರಿಸಬೇಕಾಗಿದೆ.