ಸುದ್ದಿ

ಕೇವಲ ಎರಡು ಸಾವಿರಕ್ಕಾಗಿ 50 ಮೊಟ್ಟೆ ತಿನ್ನಲು ಸ್ನೇಹಿತರೊಡನೆ ಪಂದ್ಯ ; 41 ಮೊಟ್ಟೆ ತಿಂದ ಬಳಿಕ ವ್ಯಕ್ತಿಗೆ ಏನಾಯ್ತು ಗೊತ್ತಾ ?ತಿಳಿದರೆ ಶಾಕ್….

By admin

November 05, 2019

ವ್ಯಕ್ತಿಯೊಬ್ಬ 2 ಸಾವಿರ ರೂ. ಹಣಕ್ಕಾಗಿ 41 ಮೊಟ್ಟೆ ತಿಂದು ಮೃತಪಟ್ಟ ಘಟನೆ ಸೋಮವಾರ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸುಭಾಷ್ ಯಾದವ್(42) ಮೃತಪಟ್ಟ ವ್ಯಕ್ತಿ. ಸುಭಾಷ್ ಮೊಟ್ಟೆ ತಿನ್ನಲು ತನ್ನ ಸ್ನೇಹಿತನ ಜೊತೆ ಜೌನ್‌ಪುರದ ಬಿಬಿಗಂಜ್ ಮಾರ್ಕೆಟ್‌ಗೆ ಹೋಗಿದ್ದನು. ಈ ವೇಳೆ ಸುಭಾಷ್ ಹಾಗೂ ಆತನ ಸ್ನೇಹಿತನ ನಡುವೆ ಹಣಕ್ಕಾಗಿ ಜಗಳ ನಡೆದಿದೆ.

ಸುಭಾಷ್  ಸ್ನೆಹಿತ 50 ಮೊಟ್ಟೆ ತಿಂದರೆ 2 ಸಾವಿರ ರೂ. ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಸುಭಾಷ್ ಕೂಡ ಒಪ್ಪಿಕೊಳ್ಳುತ್ತಾನೆ. ಬಳಿಕ 2 ಸಾವಿರ ರೂ.ಹಣಕ್ಕಾಗಿ 50 ಮೊಟ್ಟೆ ತಿನ್ನುವ ಚಾಲೆಂಜ್  ಸ್ವೀಕರಿಸುತ್ತಾನೆ.

ಚಾಲೆಂಜ್  ಸ್ವೀಕರಿಸಿ ಸುಭಾಷ್ ಮೊಟ್ಟೆ ತಿನ್ನಲುಶುರು ಮಾಡುತ್ತಾನೆ. ಮೊದಲು 41 ಮೊಟ್ಟೆ ತಿಂದ ಸುಭಾಷ್ ನಂತರ 42ನೇ ಮೊಟ್ಟೆ ತಿನ್ನಲು ಮುಂದಾದಾಗ ಪ್ರಜ್ಞೆ ತಪ್ಪಿ ಬೀಳುತ್ತಾನೆ .ಬಳಿಕ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಸ್ಥಳೀಯರು ಮೊದಲು ಸುಭಾಷ್‌ನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.

ಬಳಿಕ ಅಲ್ಲಿನ ವೈದ್ಯರು ಆತನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸುವಂತೆ ಹೇಳುತ್ತಾರೆ. ಆಸ್ಪತ್ರೆಗೆ ದಾಖಲಾದ ಒಂದು ಗಂಟೆಯಲ್ಲಿ ಸುಭಾಷ್ ಮೃತಪಟ್ಟಿದ್ದಾನೆ. ಸುಭಾಸ್ ಅತಿಯಾಗಿ ಮೊಟ್ಟೆ ಸೇವಿಸಿದ್ದಕ್ಕೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಸುಭಾಷ್ ಕುಟುಂಬದವರು ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.