ಬೆಂಗಳೂರು, ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮಹಿಳೆಯರ ಸುಖಃಕರ ಪ್ರಯಾಣಕ್ಕಾಗಿ ಬಸ್‌ಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮಾರಗಳನ್ನು ಆಳವಡಿಸಲು ಮುಂದಾಗಿದೆ.
ಬೆಂಗಳೂರಿನಾದ್ಯಂತ ಸಂಚಾರಕ್ಕೆ ಹೆಚ್ಚಿನ ಮಹಿಳೆಯರು ಬಿಎಂಟಿಸಿಯನ್ನೇ ಅವಲಂಭಿಸಿದ್ದಾರೆ. ಹೀಗಾಗಿ ನಮ್ಮ ಬೆಂಗಳೂರಲ್ಲಿ ದೆಹಲಿ ನಿರ್ಬಯಾ ಪ್ರಕರಣದಂತ ಘಟನೆ ನಡೆಯಬಾರದೆಂದು, ಮುನ್ನೆಚ್ಚರಕಾ ಕ್ರಮವಾಗಿ ಮಹಿಳೆಯರ ಭದ್ರತೆಗೆ ಹೆಚ್ಚಿನ ಆಧ್ಯತೆ ನೀಡಿದ್ದು, ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿದೆ. 48 ಗಂಟೆಗಳ ಕಾಲ ಕೊಟಿಂಗ್ ಕೆಪಾಸಿಟಿ ಇರೋ ಕ್ಯಾಮಾರಗಳು ಇವಾಗಿದ್ದು, ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಪತ್ತೆ ಹಚ್ಚಲು ಸಹಕಾರಿಯಾಗಲಿದ್ಯಂತೆ.
6700 ಬಸ್‌ಗಳ ಪೈಕಿ ಇದೀಗ 500 ಬಸ್‌ಗಳಲ್ಲಿ ಮಾತ್ರ ಅಳವಡಿಸಲಾಗಿದೆ. ಶೀಘ್ರದಲ್ಲೇ ಹೊಸ ಟೆಂಡರ್ ಕರೆದು ಒಂದು ಸಾವಿರ ಬಸ್ ಗಳಲ್ಲಿ ಕ್ಯಾಮರ ಆಳವಡಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಒಟ್ಟಾರೆ, ಕೇಂದ್ರದ ಸೂಚನೆಯಿಂದಾಗಿ ಬಸ್‌ಗಳಲ್ಲಿ ಸಿಸಿ ಕ್ಯಾಮರ ಆಳವಡಿಸ್ತೇನೆ ಅಂತ ಹೇಳ್ತದೆ. ಆದರೆ ಇದು ಕಾಗದ ಮೇಲೆ ಉಳಿಯದೆ ಅನುಷ್ಟಾನ ಬರಲಿ ಅನ್ನೋದು ಬೆಂಗಳೂರಿಗರ ಆಶಯ