ಕೆಮಿಕಲ್ ಗೋಡಾನ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಪಶ್ಚಿಮ ಬಂಗಾಳದ ಹೌರಾ ಬ್ರಿಡ್ಜ್‍ನಲ್ಲಿ ನಡೆದಿದೆ.
ಇಂದು ನಸುಕಿನ ಜಾವ 2 ಗಂಟೆಗೆ ಗೋಡಾನ್‍ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವಿಷಯ ತಿಳಿದು 20 ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಜಗನ್ನಾಥ್ ಘಾಟ್‍ನಲ್ಲಿ ಗೋಡಾನ್ ಇದ್ದು, ಇಂದು ಬೆಳಗ್ಗೆ ಬೆಂಕಿ ಹೊತ್ತಿಗೊಂಡಿದೆ. ಈಗ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಸಚಿವ ಸುಜಿತ್ ಬೋಸ್ ಹಾಗೂ ಅಗ್ನಿಶಾಮಕ ದಶದ ಮಹಾನಿರ್ದೇಶಕರು ಸ್ಥಳದಲ್ಲಿ ಉಪಸ್ಥಿತರಿದ್ದರು.