ಈ ಭೂಮಿಮೇಲೆ ಹುಟ್ಟಿರುವ ಎಲ್ಲ ಜೀವಿಗಳಿಗೂ ನಿದ್ರೆ ಅತೀ ಅವಶ್ಯಕ. ನಿದ್ದೆ ಮಾಡುವುದರಿಂದ ಶರೀರ ಉತ್ತೇಜನಗೊಂಡು ,ಮಾರನೇ ದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಿರುವ ಶಕ್ತಿ ಲಭಿಸುತ್ತದೆ. ನಿದ್ರಿಸುವುದರಿಂದ ಶರೀರಕ್ಕೆ ಇನ್ನೂ ಅನೇಕ ರೀತಿಯ ಪ್ರಯೋಜನಗಳು ಆಗುತ್ತವೆ. ಆದರೆ, ಇಂದಿನ ಧಾವಂತದ ಜೀವನದಲ್ಲಿ ಬಹಳಷ್ಟು ಮಂದಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದು ಸಾಲದೆಂಬಂತೆ ನಿದ್ರೆಯಲ್ಲಿ ಯಾವಾಗಲೂ ಕೆಟ್ಟ ಕನಸುಗಳು ಬಿದ್ದು ನಿದ್ದೆಯನ್ನು ಹಾಳುಮಾಡುತ್ತಿವೆ. ವಾಸ್ತು ಶಾಸ್ತ್ರದಲ್ಲಿ ಇವೆಲ್ಲಕ್ಕೂ ಪರಿಹಾರಗಳಿವೆ. ಆ ಪರಿಹಾರಗಳು ಯಾವುವೆಂದು ತಿಳಿದುಕೊಳ್ಳೊಣ.
1.ಸ್ಪಟಿಕ :- ನಿದ್ದೆಮಾಡುವಾಗ ಒಂದು ತುಂಡು ಸ್ಪಟಿಕ ( 0) ವನ್ನು ತಲೆ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಕೆಟ್ಟ ಕನಸುಗಳು ಬೀಳುವುದಿಲ್ಲ.
ಪಾಸಿಟಿವ್ ಎನರ್ಜಿ ದೇಹದೊಳಗೆ ಪ್ರವೇಶಿಸುತ್ತದೆ. ಹಲವು ರೀತಿಯ ತೊಂದರೆಗಳು ದೂರವಾಗುತ್ತವೆ. ದುಷ್ಟಶಕ್ತಿಗಳಿಂದ ಮುಕ್ತಿ ದೊರೆಯುತ್ತದೆ.
2.ಸೋಂಪು :- ತಲೆದಿಂಬಿನ ಕೆಳಗೆ ಸೋಂಪು ಕಾಳುಗಳನ್ನು ಇಟ್ಟುಕೊಂಡು ಮಲಗುವುದರಿಂದ ನೆಗೆಟಿವೆ ಎನರ್ಜಿ ದೂರವಾಗುತ್ತದೆ. ಚೆನ್ನಾಗಿ ನಿದ್ರೆ ಬರುತ್ತದೆ.
ನೀದ್ರಾ ಹೀನತೆ ದೂರವಾಗುತ್ತದೆ. ವಾಸ್ತು ದೋಷವಿದ್ದಲ್ಲಿ ಅದೂ ಸಹ ನಿವಾರಣೆಯಾಗುತ್ತದೆ.
3.ಬೆಳ್ಳುಳ್ಳಿ:- ನಿಮಗೆ ಕಣ್ಣ್ ತುಂಬಾ ನಿದ್ದೆ ಬರಬೇಕೆ. ಹಾಗಾದರೆ, ತಲೆದಿಂಬಿನ ಕೆಳಗೆ 3,4 ಬೆಳ್ಳುಳ್ಳಿ ಹಿಳುಕುಗಳನ್ನು ಇಟ್ಟುಕೊಂಡು ಮಲಗಿ.
ಹೀಗೆ ಮಾಡುವುದರಿಂದ ಮಿದುಳಿಗೆ ವಿಶ್ರಾಂತಿ ದೊರೆತು ನಿದ್ರಾಹೀನತೆ ದೂರವಾಗುತ್ತದೆ. ನಿಮ್ಮ ದೇಹದೊಳಕ್ಕೆ ಪಾಸಿಟಿವ್ ಎನರ್ಜಿ ಪ್ರವೇಶವಾಗುತ್ತದೆ.
4.ಮಲಗುವ ದಿಕ್ಕು :- ನಿದ್ದೆಯಲ್ಲಿ ಕನಸುಗಳು ಬೀಳದಿರಲು ಹಾಗೂ ನಿದ್ರಾಹೀನತೆಯನ್ನು ದೂರ ಮಾಡುವಲ್ಲಿ ನೀವು ಯಾವ ದಿಕ್ಕಿನಲ್ಲಿ ಮಲಗುತ್ತೀರಿ ಎನ್ನು ವುದು ಮುಖ್ಯ ಪಾತ್ರ ವಹಿಸುತ್ತದೆ.
ಕಾಲುಗಳನ್ನು ಉತ್ತರ ದಿಕ್ಕಿಗೆ, ತಲೆಯ ದಕ್ಷಿಣ ದಿಕ್ಕಿಗೆ ಇರುವಂತೆ ಮಲಗಿ ನೋಡಿ, ಯಾವುದೇ ಕೆಟ್ಟ ಕನಸುಗಳು ಬೀಳುವುದಿಲ್ಲ. ಸುಖ ನಿದ್ರೆ ನಿಮ್ಮದಾಗುತ್ತದೆ.
5.ತಲೆ ದಿಂಬು:-
ಶುಭ್ರವಾದ, ಮೆತ್ತಗಿರುವ ದಿಂಬನ್ನು ತಲೆಕೆಳಗೆ ಇಟ್ಟುಕೊಂಡು ಮಲಗುವುದರಿಂದ ದೇಹದೊಳಗೆ ಪಾಸಿಟಿವ್ ಎನರ್ಜಿ ಪ್ರವೇಶಿಸಿ ಚೆನ್ನಾಗಿ ನಿದ್ದೆ ಬರುತ್ತದೆ.
6.ಮ್ಯಾಜಿಕ್ ಮಿಶ್ರಣ :- ಮಲಗುವ ಮುಂಚೆ ,ಪಾದಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಕೊಬ್ಬರಿ ಎಣ್ಣೆಗೆ ಸ್ವಲ್ಪ ಕರ್ಪೂರವನ್ನು ಬೆರೆಸಿ, ಈ ಮಿಶ್ರಣವನ್ನು ಹಿಮ್ಮಡಿಗಳಿಗೆ ಹಚ್ಚಿ ನಿದ್ರಿಸಿದರೆ, ಚೆನ್ನಾಗಿ ನಿದ್ದೆ ಬರುತ್ತದೆ.