- ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು.
ನೀರು ಬಹಳ ರುಚಿ ಆಗಿರುತ್ತದೆ. ಹಾಗೆಯೇ ಗಂಜಿಯೂ ಸಹ ಸಿಹಿಯಾಗಿರುತ್ತದೆ. ಅದರ ಬಣ್ಣ ನೋಡಿದರೆ ಬಹುಶಃ ಇದರಲ್ಲಿ ಹೆಚ್ಚಿನ ಖನಿಜಾಂಶಗಳು ಇರುತ್ತವೆ ಅನ್ನಿಸುತ್ತದೆ.
ಬೆಂಗಳೂರಿನಲ್ಲಿ ಈ ತಳಿಯ ಒಂದು ಎಳನೀರನ್ನು 40-50 ರೂಪಾಯಿಗೆ ಮಾರುತ್ತಿದ್ದಾರೆ.
ಯಾವುದೇ ಪಾನೀಯಕ್ಕಿಂತ ಎಳನೀರು ಉತ್ತಮ, ಶ್ರೇಷ್ಠ, ಕ್ಷೇಮ; ಆರೋಗ್ಯಕರ.
copyright and credits to
Ravi krishna reddy fb page