ದರ್ಶನ್ ಅಭಿಮಾನಿಗಳ ಬಳಗ ಇದನ್ನು ಅಧಿಕೃವಾಗಿ ಘೋಷಿಸಿಕೊಂಡಿದೆ. ‘ಕುರುಕ್ಷೇತ್ರ’ ಚಿತ್ರ ಬರೊಬ್ಬರಿ . 100 ಕೋಟಿ ಕಲೆಕ್ಷನ್ ಮಾಡಿದೆ ಎಂದು ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದೆ. ಆ ಸಂಭ್ರಮಾಚರಣೆಯಲ್ಲಿ ಚಿತ್ರದ ಪ್ರಮುಖ ಪಾತ್ರಧಾರಿ ದರ್ಶನ್ ಕೂಡ ಭಾಗಿಯಾಗಿದ್ದಾರೆ.
ಇದೊಂದುಖುಷಿವಿಚಾರ. ಅಧಿಕೃತವಾಗಿಇದರಗಳಿಕೆಎಷ್ಟು, ಏನುಎನ್ನುವುದುಗೊತ್ತಿಲ್ಲ. ಆದರೆಆರಂಭದಿಂದಲೇದಾಖಲೆಕಲೆಕ್ಷನ್ ಆಗುತ್ತಿರುವಬಗ್ಗೆಮಾಹಿತಿಇತ್ತು. ಆಗಾಗನಿರ್ಮಾಪಕರುಸಿಕ್ಕಾಗಲೂಹೇಳುತ್ತಿದ್ದರು. ಈಗನಮ್ಮಚಿತ್ರ 100 ಕೋಟಿರೂ. ಗಳಿಕೆಕಂಡುದಾಖಲೆಸೃಷ್ಟಿಸಿದೆಎನ್ನುವುದುನಮಗೆಹೆಮ್ಮೆಯಸಂಗತಿ. ಅದರಜತೆಗೆಕನ್ನಡಚಿತ್ರರಂಗಕ್ಕೂಖುಷಿಕೊಡುವಂತಹಸಂಗತಿ.– ನಾಗಣ್ಣ, ನಿರ್ದೇಶಕ
ದರ್ಶನ್ ಪಾಲಿಗೆ ಇದೊಂದು ವಿಶೇಷವಾದ ಸಿನಿಮಾ. ಅವರ ಸಿನಿ ಕರಿಯರ್‌ನಲ್ಲಿ ಇದು ನಾಯಕನಟರಾಗಿ 50ನೇ ಚಿತ್ರ. ಅದ್ಧೂರಿ ವೆಚ್ಚದ ಪೌರಾಣಿಕ ಚಿತ್ರವೆಂದೇ ಕರೆಸಿಕೊಂಡಿದ್ದ ಈ ಚಿತ್ರ ಬಿಡುಗಡೆ ಆಗಿ 3ನೇ ವಾರ ಪೂರೈಸುತ್ತಿದೆ. ಆರಂಭದಿಂದಲೂ ಈ ಚಿತ್ರಕ್ಕೆ ಎಲ್ಲಾ ಕಡೆಗಳಲ್ಲೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನದ ಗಳಿಕೆಯೇ 13 ಕೋಟಿ ರೂ. ಎನ್ನುವ ಸುದ್ದಿ ಇತ್ತು.
ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆ ಗಳಿಕೆಯೂ ಹೌದು. ಎರಡನೇ ದಿನ 10 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅಲ್ಲಿಂದ ಸದ್ದಿಲ್ಲದೆ ನೂರಾರು ಚಿತ್ರಮಂದಿರಗಳಲ್ಲಿ ಯಶಸ್ವಿ 3 ವಾರದ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರದ ಇದುವರೆಗಿನ ಒಟ್ಟು ಕಲೆಕ್ಷನ್ 100 ಕೋಟಿ ರೂ. ಎನ್ನುವುದು ದರ್ಶನ್ ಅಭಿಮಾನಿ ಬಳಗದ ಘೋಷಣೆ. ಅದಕ್ಕೆ ಸಾಕ್ಷಿ ಸಾಮಾಜಿಕ ಜಾಲದಲ್ಲಿ ವೈರಲ್ ಆದ ‘ಕುರುಕ್ಷೇತ್ರ’ದ 100 ಕೋಟಿ ಗಳಿಕೆಯ ಸಂಭ್ರಮಾಚರಣೆಯ ಫೋಟೋಗಳು.
ನಿಜನಾನುಈಸಿನಿಮಾದವಿತರಕ. ಆದರೆನಾನುಯಾವುದೇಸಿನಿಮಾಬಜೆಟ್ ಆಗಲಿ, ಇಲ್ಲವೇಅದರಕಲೆಕ್ಷನ್ ವಿಚಾರದಲ್ಲಾಗಲಿಮಾತನಾಡಿಲ್ಲ. ಅದುನನ್ನಅಭ್ಯಾಸ. ಈಗಲೂಅಷ್ಟೇ. ಅಧಿಕೃತವಾಗಿಎಲ್ಲವನ್ನುನೋಡಿ, ಪರಿಶೀಲಿಸಿದನಂತರಎಷ್ಟು, ಏನುಅನ್ನೋದುಗೊತ್ತಾಗುತ್ತೆ. ಅದುಬಿಟ್ಟರೆ, ಈಗಿನಯಾವುದೇಸುದ್ದಿಬಗ್ಗೆನಾನುಕಮೆಂಟ್ ಮಾಡುವುದಿಲ್ಲ.- ರಾಕ್‌ಲೈನ್ ವೆಂಕಟೇಶ್, ಕುರುಕ್ಷೇತ್ರಚಿತ್ರದವಿತರಕ, ಕುರುಕ್ಷೇತ್ರ ದ 100 ಕೋಟಿ ರೂ. ಗಳಿಕೆಯ ಸಂಭ್ರಮಾಚರಣೆ ಮಾಡಿದ್ದು ದರ್ಶನ್ ಅಭಿಮಾನಿ ಬಳಗ. ಅಲ್ಲಿ ದರ್ಶನ್ ಮಾತ್ರವೇ ಇದ್ದು ವಿಶೇಷ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.