ಸುದ್ದಿ

ಕಿಚ್ಚನ ನಳಪಾಕ ಸೌಟು ಹಿಡಿದು ಮೊಟ್ಟೆ ದೋಸೆ ಮಾಡಿದ ಸುದೀಪ್…!

By admin

October 01, 2019

‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಚಿತ್ರೀಕರಣದ ವೇಳೆ ಶೂಟಿಂಗ್ ಸೆಟ್ಟಿನಲ್ಲಿ ಕಿಚ್ಚ ಸುದೀಪ್ ರುಚಿ ರುಚಿ ಮೊಟ್ಟೆ ದೋಸೆ ಮಾಡಿದ್ದ ವಿಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಚಿತ್ರೀಕರಣದ ನೆನಪನ್ನು ಮೆಲುಕು ಹಾಕಿದ್ದಾರೆ.

ಹೌದು, ಸೈರಾ ನರಸಿಂಹ ರೆಡ್ಡಿ ಚಿತ್ರ ಕನ್ನಡ ಸೇರಿದಂತೆ ಹಲವು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅ. 2 ಅಂದರೆ ನಾಳೆಯೇ ಚಿತ್ರ ತೆರೆಯಮೇಲೆ ಸಖತ್ ಸದ್ದು ಮಾಡಲಿದೆ. ಈ ನಡುವೆ ಸುದೀಪ್ ಚಿತ್ರೀಕರಣ ವೇಳೆ ಚಿತ್ರ ತಂಡದ ಜೊತೆ ಕಳೆದ ಸಿಹಿ ನೆನೆಪಿನ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶೂಟಿಂಗ್ ಸೆಟ್ಟಿನಲ್ಲಿ ತಾವೇ ಕೈಯಾರೇ ತಮ್ಮ ಸಹ ಕಲಾವಿದರಿಗೆ ಹಾಗೂ ಚಿತ್ರ ತಂಡದ ಸದಸ್ಯರಿಗೆ ಮೊಟ್ಟೆ ದೋಸೆ ಮಾಡಿ ಕೊಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿ ಖುಷಿ ಪಟ್ಟಿದ್ದಾರೆ.

ಇನ್‍ಸ್ಟಾ ಪೋಸ್ಟ್‍ನಲ್ಲಿ, ಎಸ್‍ಎನ್‍ಆರ್(ಸೈರಾ ನರಸಿಂಹ ರೆಡ್ಡಿ) ಸಿನಿಮಾ ಶೂಟಿಂಗ್ ಸೆಟ್ಟಿನಲ್ಲಿ ಕಳೆದ ಮೋಜಿನ ಸಮಯ, ಸ್ಪೇಷಲ್ ಆಮ್ಲೆಟ್ ದೋಸೆ ಎಂದು ಬರೆದು ಎಸ್‍ಎನ್‍ಆರ್ ಎಂದು ಹ್ಯಾಷ್‍ಟ್ಯಾಗ್ ಹಾಕಿ, ದೋಸೆ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಸುದೀಪ್ ದೋಸೆ ಮಾಡಿ ಕೊಡುತ್ತಿದ್ದರೆ, ಸಾಲಾಗಿ ಸಿನಿಮಾ ತಂಡದ ಸದಸ್ಯರು, ಕಲಾವಿದರು ಪ್ಲೇಟ್‍ನಲ್ಲಿ ದೋಸೆ ಹಾಕಿಸಿಕೊಂಡು ಸವಿಯುತ್ತಿರುವ ದೃಶ್ಯ ಸೆರೆಯಾಗಿದೆ.

ಈ ವಿಶೇಷ ಪೋಸ್ಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಶೂಟಿಂಗ್ ಸೆಟ್ಟಿನಲ್ಲಿ ಸೌಟು ಹಿಡಿದ ಕಿಚ್ಚನ ಸರಳತನಕ್ಕೆ ಮನಸೋತಿದ್ದಾರೆ. ಈವರೆಗೂ ಈ ವಿಡಿಯೋ ಸುಮಾರು 1 ಲಕ್ಷಕ್ಕೂ ಅಧಿಕ ಬಾರಿ ವಿಕ್ಷಣೆಯಾಗಿದ್ದು, ಸಾಕಷ್ಟು ಮಂದಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.