ರಾತ್ರಿ ಹೊತ್ತು ಕಾಲುಸೆಳೆತವುಂಟಾಗಿ ನಿಮಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಿದೆಯೇ..? ಹೀಗೆ ಸೆಳೆತ ಉಂಟಾಗಲು ಹಲವಾರು ಕಾರಣಗಳಿವೆ. ಮಧುಮೇಹ, ನರಗಳ ಬಲಹೀನತೆ, ಗರ್ಭಧಾರಣೆ ಹಾಗೂ ಡೀಹೈಡ್ರೇಶನ್(ನಿರ್ಜಲೀಕರಣ) ಮುಂತಾದ ಕಾರಣಗಳಿಂದ ಕಾಲುಗಳ ಸೆಳೆತ ಉಂಟಾಗಬಹುದು. ಇದರಿಂದ ನಿಮ್ಮ ರಾತ್ರಿಯ ನಿದ್ದೆ ಹಾಳಾಗುತ್ತಿದೆಯೇ…? ಹಾಗಾದರೆ, ಇಲ್ಲಿದೆ ನೋಡಿ ಸುಲಭ ಪರಿಹಾರ.
ವಿಂಟರ್ ಗ್ರೀನ್ ಆಯಿಲ್ :- ಮೀಥೈಲ್ ಸಿಲಿಕೇಟ್ ಹೊಂದಿರುವ ವಿಂಟರ್ ಗ್ರೀನ್ ಆಯಿಲ್ ನೋವು ನಿವಾರಕವಾಗಿ ಕೆಲಸಮಾಡುತ್ತದೆ. ಮೀಥೈಲ್ ಸಿಲಿಕೇಟ್ ರಕ್ತ ಪ್ರಸರಣವನ್ನು ಉತ್ತೇಜಿಸುತ್ತದೆ.
ಈ ಎಣ್ಣೆಯೊಂದಿಗೆ ಸ್ವಲ್ಪ ಆಲೀವ್ ಅಯಿಲ್ ಅಥವಾ ಬಾದಾಮಿ ಎಣ್ಣೆ ಬೆರೆಸಿ ಕಾಲುಗಳನ್ನು ಮಸಾಜ್ ಮಾಡುವುದರಿಂದ ಸೆಳೆತ ಕಡಿಮೆಯಾಗುತ್ತದೆ.
ವಿಟಮಿನ್-ಇ :-
ಮುಚ್ಚಿಕೊಂಡಿರುವ ನರಗಳಲ್ಲಿ ರಕ್ತ ಪ್ರಸರಣ ಸರಿಯಾಗಿ ಆಗದೆ, ರಾತ್ರಿವೇಳೆ ಕಾಲುಗಳ ಸೆಳೆತ ಉಂಟಾಗುತ್ತದೆ. ವಿಟಮಿನ್ -ಇ ಅಧಿಕವಾಗಿರುವ ಬಾದಾಮಿ, ಸ್ಪಿನಾಚ್ ಹಾಗೂ ಅವಕಾಡೋ ಗಳನ್ನು ತಿನ್ನುವುದರಿಂದ , ನರಗಳಲ್ಲಿ ರಕ್ತ ಪ್ರಸಾರ ಸುಗಮವಾಗುತ್ತದೆ. ವಿಟಮಿನ್-ಇ ಸಪ್ಲಿಮೆಂಟ್ ಗಳನ್ನೂ ಉಪಯೋಗಿಸಬಹುದು.
ನೀರು :- ಪ್ರತೀದಿನ 8 ಲೋಟ ಶುದ್ಧನೀರಿನೊಂದಿಗೆ ನಿಂಬೆ ರಸ ಬೆರೆಸಿ ಕುಡಿಯಬೇಕು. ಒಂದು ಲೋಟದಲ್ಲಿ ನಿಂಬೆ ರಸ ಬೆರೆಸಿರುವ ನೀರನ್ನು ನಿಮ್ಮ ಬಳಿ ಇಟ್ಟುಕೊಂಡು ಬಾಯರಿಕೆ ಆದಾಗಲೆಲ್ಲಾ ಸ್ವಲ್ಪ ಸ್ವಲ್ಪ ಕುಡಿಯಬೇಕು
ಶಾಖ : –ಕಾಲು ಸೆಳೆತದಿಂದ ನೋವು ಕಡಿಮೆಯಾಗಲು ವಿದ್ಯುತ್ ಪ್ಯಾಡ್ ಗಳನ್ನು ಉಪಯೋಗಿಸಿ. ಇದರಿಂದ ರಕ್ತ ಪ್ರಸಾರ ಹೆಚ್ಚಾಗುತ್ತದೆ.
15-20 ನಿಮಿಷಗಳ ಕಾಲ ಉಪಯೋಗಿಸಿದರೆ ಸಾಕು. ಬಿಸಿ ನೀರಿಗೆ ಸ್ವಲ್ಪ ಎಪ್ಸಮ್ ಸಾಲ್ಟ್ ಬೆರೆಸಿ ಶಾಖ ನೀಡುವುದರಿಂದಲೂ ನೋವು ಕಡಿಮೆಯಾಗುತ್ತದೆ.
ಎಲೆಕ್ಟ್ರೋಲೈಟ್ :-
ದೇಹಕ್ಕೆ ಎಲೆಕ್ಟ್ರೋಲೈಟ್ ಗಳು ಅತ್ಯವಶ್ಯಕ. ಸೋಡಿಯಮ್, ಪೊಟಾಶಿಯಮ್,ಕ್ಯಾಲ್ಶಿಯಮ್ ಹಾಗೂ ಮೆಗ್ನೀಶಿಯಮ್ ಮುಂತಾದ ಖನಿಜಗಳ ಕೊರತೆಯಿಂದಾಗಿ ಕಾಲುಗಳ ಸೆಳೆತ ಉಂಟಾಗುತ್ತದೆ. ಈ ಎಲ್ಲಾ ಎಲೆಕ್ಟ್ರೋಲೈಟ್ ಗಳನ್ನು ಒಳಗೊಂಡಿರುವ ಆಹಾರ ಸೇವಿಸುವುದು ಉತ್ತಮ.
ಸ್ಟ್ರೆಚಿಂಗ್ : –ಒಂದು ವೇಳೆ ನಿಮಗೆ ಕಾಲಿನ ಸೆಳೆತವುಂಟಾಗಿ ರಾತ್ರಿಯಲ್ಲಿ ಎಚ್ಚರವಾದರೆ, ಕಾಲುಗಳನ್ನು ಸ್ಟ್ರೆಚ್ ಮಾಡಬೇಕು. ಇದು ಸ್ವಲ್ಪ ನೋವನ್ನು ಉಂಟುಮಾಡುತ್ತದೆ. ಪಾದಗಳನ್ನು ಹಿಂದೆ,ಮುಂದೆ ಆಡಿಸಬೇಕು. ಹೀಗೆ ಮಾಡುವುದರಿಂದ ಕಾಲುಗಳ ಸೆಳೆತ ಕಡಿಮೆಯಾಗುತ್ತದೆ.
ಕಾಲುಗಳ ಸೆಳೆತ ನಿಮ್ಮ ರಾತ್ರಿ ನಿದ್ದೆಯನ್ನು ಹಾಳುಗೆಡವುತ್ತದೆ. ಸಾಕಷ್ಟು ಶುದ್ದನೀರು, ಸತ್ವಯುತ ಆಹಾರ ಸೇವನೆ, ಸ್ಟ್ರೆಚ್ಚಿಂಗ್, ಮಸಾಜು ಮಾಡುವುದು ಮುಂತಾದುವುಗಳಿಂದ ಸೆಳೆತವನ್ನು ಕಡಿಮೆ ಮಾಡಿಕೊಂಡು ಆರಾಮವಾಗಿರಬಹುದು.