ಉಪಯುಕ್ತ ಮಾಹಿತಿ

ಕಾಲಿನ ಬೆರಳುಗಳು ನೋಡಿ ವ್ಯಕ್ತಿತ್ವ ತಿಳಿದುಕೊಳ್ಳುವುದು ಹೇಗೆ ಎಂದು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ …

By admin

November 08, 2017

ನಮ್ಮ ದೇಹದ ಆಕಾರವನ್ನು ನೋಡಿ ಒಬ್ಬರ ವ್ಯಕ್ತಿತ್ವವನ್ನು ಅಳೆಯಬಹುದು. ಯಾರೇ ಆಗಲಿ ನಮ್ಮನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಎಂತಹ ವ್ಯಕ್ತಿ ಎಂಬುದನ್ನು ಹಾಗೆಯೇ ತಿಳಿಯಬಹುದು. ಅದೇ ರೀತಿ ಪಾದವನ್ನು ನೋಡಿ ವ್ಯಕ್ತಿತ್ವವನ್ನು ತಿಳಿಯುವ ಪದ್ಧತಿ ಭಾರತ ಮತ್ತು ಚೀನಾದಲ್ಲಿ ಬಹಳ ವರ್ಷಗಳಿಂದ ಇದೆ. ನಮ್ಮ ಪಾದಗಳು ನಮ್ಮ ದೇಹ ಮತ್ತು ವ್ಯಕ್ತಿತ್ವಕ್ಕೆ ಕನ್ನಡಿ ಇದ್ದ ಹಾಗೆ ಎಂದು ನಂಬಲಾಗಿದೆ. ಕಾಲಿಗೆ ಏನೇ ತೊಂದರೆ ಆದರೂ ಅದು ದೇಹದಲ್ಲಿ ಏನೋ ಆಗಿದೆ ಎಂಬುದಕ್ಕೆ ಸೂಚನೆ. ಪಾದದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ನೀವು ಖಂಡಿತ ಬೆನ್ನುನೋವಿನಿಂದ ನರಳುತ್ತಿದ್ದೀರಿ ಎಂದರ್ಥ. ಇದೇ ರೀತಿ ನಮ್ಮ ಮನಸ್ಸಿನ ಸ್ಥಿತಿಯನ್ನೂ , ವ್ಯಕ್ತಿತ್ವವನ್ನೂ ಪಾದ ನೋಡಿ ತಿಳಿದುಕೊಳ್ಳಬಹುದು

ಹೆಬ್ಬೆರಳು :-

ಉಳಿದ ಬೆರಳುಗಳಿಗಿಂತ ಹೆಬ್ಬರಳು ಉದ್ದವಾಗಿದ್ದರೆ ಇವರು ತುಂಬಾ ಸ್ಮಾರ್ಟ್, ಬುದ್ಧಿವಂತರು ಹಾಗೂ ಸೃಜನಶೀಲ ವ್ಯಕ್ತಿತ್ವ ವುಳ್ಳವರಾಗಿರುತ್ತಾರೆ. ಯಾವುದೇ ಸಮಸ್ಯೆ ಬರಲಿ ಹಾಗೆಯೇ ಪರಿಹರಿಸಿಕೊಳ್ಳುತ್ತಾರೆ. ಒಂದು ವೇಳೆ ಇದು ಉಳಿದ ಬೆರಳುಗಳಿಗಿಂತ ಚಿಕ್ಕದಾಗಿದ್ದರೆ ಇವರು ಮಲ್ಟಿಟಾಸ್ಕಿಂಗ್ ವ್ಯಕ್ತಿತ್ವವುಳ್ಳವರು. ಬೇರೆಯವರನ್ನು ಪ್ರಭಾವಿಸುವ ಗುಣವುಳ್ಳವರು.

ಎರಡನೇ ಬೆರಳು:-

ಎರಡನೇ ಬೆರಳು ಉದ್ದವಾಗಿದ್ದರೆ ಇವರಲ್ಲಿ ನಾಯಕತ್ವ ಗುಣಗಳಿರುತ್ತವೆ. ಇವರಲ್ಲಿ ಬಾಸಿಸಂ ಜಾಸ್ತಿ. ಒಂದು ವೇಳೆ ಉದ್ದವಾಗಿ ಇಲ್ಲದಿದ್ದರೆ ಸಾಮರಸ್ಯದ ಜೀವನ ನಡೆಸುತ್ತಾರೆ. ಹೊಂದಿಕೊಂಡು ಹೋಗುತ್ತಾರೆ.

ಮೂರನೇ ಬೆರಳು:- ಈ ಬೆರಳು ಉದ್ದವಾಗಿದ್ದರೆ ಇವರು ಕೆಲಸದಲ್ಲಿ ನಾವೀನ್ಯತೆ, ಸಂಪನ್ಮೂಲ ವ್ಯಕ್ತಿಯಾಗಿರುತ್ತಾರೆ. ತಮ್ಮ ಸಾಮರ್ಥ್ಯ ಮತ್ತು ದೃಢಸಂಕಲ್ಪದಿಂದ ಗುರಿ ತಲುಪುತ್ತಾರೆ.

ಆದರೆ ಇವರು ಕುಟುಂಬ ಮತ್ತು ಮನರಂಜನೆಗೆ ಅಷ್ಟಾಗಿ ಪ್ರಾಮುಖ್ಯತೆ ನೀಡಲ್ಲ. ಒಂದು ವೇಳೆ ಇದು ಕಿರಿದಾಗಿದ್ದರೆ ಜೀವನವನ್ನು ಎಂಜಾಯ್ ಮಾಡುತ್ತಾರೆ, ಕುಟುಂಬದ ಕಡೆಗೂ ಗಮನಹರಿಸುವವರಾಗಿತ್ತಾರೆ.

ನಾಲ್ಕನೇ ಬೆರಳು:- ಈ ಬೆರಳು ಉದ್ದವಾಗಿದ್ದರೆ ಇವರ ಮೊದಲ ಆದ್ಯತೆ ಕುಟುಂಬ. ಈ ಬೆರಳು ತುಂಬಾ ಬಗ್ಗಿದ್ದರೆ ನಿಮ್ಮ ಪ್ರೀತಿಪಾತ್ರರೊಂದಿಗೆ ಸುಖವಾಗಿ ಇರಲ್ಲ.

ಆದರೆ ಇವರು ಏನನ್ನೇ ಆಗಲಿ ಗಮನವಿಟ್ಟು ಕೇಳುತ್ತಾರೆ. ಒಂದು ವೇಳೆ ಈ ಬೆರಳು ಕಿರಿದಾಗಿದ್ದರೆ ಇವರು ಜೀವನದಲ್ಲಿ ಕುಟುಂಬ ಹೊರತಾಗಿ ಬೇರೆ ಏನೋ ಒತ್ತಡವನ್ನು ಎದುರಿಸುತ್ತಿರುತ್ತಾರೆ.

ಕಿರುಬೆರಳು:- ಈ ಬೆರಳು ಚಿಕ್ಕದಾಗಿದ್ದರೆ ಇವರದು ಹುಡುಗಾಟಿಕೆ ವ್ಯಕ್ತಿತ್ವ. ಜವಾಬ್ದಾರಿಗಳಿಂದ ತುಂಬಾ ದೂರ ಇರುತ್ತಾರೆ. ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳುವವರು. ಈ ಕಿರುಬೆರಳನ್ನು ನಾಲ್ಕನೆ ಬೆರಳಿನಿಂದ ಅಂತರ ಕಾಪಾಡಿದರೆ ಸಾಕಷ್ಟು ಲಾಭಗಳಿವೆ. ಇದರಿಂದ ಹುಡುಗಾಟಿಕೆ ಎಲ್ಲವೂ ಹೋಗುತ್ತವೆ ಎನ್ನುತ್ತಾರೆ ರಿಫ್ಲೆಕ್ಸಾಲಜಿಸ್ಟ್‌ರು.