ಸಿನಿಮಾ

ಕಾರು ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ ಈ ವ್ಯಕ್ತಿ ,ಸೂಪರ್ ಸ್ಟಾರ್ ಆಗಿದ್ದು ಹೇಗೆ..?ತಿಳಿಯಲು ಈ ಲೇಖನ ಓದಿ..

By admin

January 08, 2018

ರಾಘವ ಲಾರೆನ್ಸ್ ಈಗ ಟಾಲೀವುಡ್, ಕೋಲೀವುಡ್ ನಲ್ಲಿ ಉತ್ತಮ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಇವರು ನಿರ್ದೇಶಕರಾಗುವ ಮೊದಲು ಕೊರಿಯಾಗ್ರಾಫರ್ ಆಗಿ ತನ್ನ ಜೀವನವನ್ನು ಆರಂಭಿಸಿದ್ದರು. ಪ್ರಭುದೇವಾ ಟ್ರೂಪ್ ನಲ್ಲಿ ಒಬ್ಬನಾಗಿದ್ದು..ಎಲ್ಲರನ್ನೂ ಆಕರ್ಷಿಸುವಂತೆ ನೃತ್ಯ ಅಭಿನಯಿಸಿ ಮೆಗಾಸ್ಟಾರ್ ಗಮನ ಸೆಳೆದಿದ್ದೇ ತಡ ಮೆಗಾಸ್ಟಾರ್ ರವರ ಹಿಟ್ಲರ್ ಚಿತ್ರದಲ್ಲಿ ಅವಕಾಶ ನೀಡಿದರು. ಆ ಚಿತ್ರವು ಹಿಟ್ ಆಗುವುದರ ಮೂಲಕ ಲಾರೆನ್ಸ್ ಕೊರಿಯೋಗ್ರಾಫರ್ ಆಗಿ ಸ್ಥಿರಪಟ್ಟಿದ್ದಾರೆ.

ಇದಕ್ಕೂ ಮೊದಲು ಅವರು ಏನು ಮಾಡುತ್ತಿದ್ದರು ಎಂಬುದನ್ನು ತಿಳಿದರೆ ಬೆಚ್ಚಿ ಅಚ್ಚರಿಗೊಳ್ಳುತ್ತೀರಿ. ಈ ಹಿಂದೆ ದಕ್ಷಿಣ ಭಾಗದಲ್ಲಿ ಸೂಪರ್ ಫೈಟ್ ಮಾಸ್ಟರ್ ಗಳಲ್ಲಿ ಸೂಪರ್ ಸುಬ್ಬರಾಯನ್ ಒಬ್ಬರಾಗಿದ್ದರು. ಅವರು ತಮ್ಮ ಫೈಟ್ ದೃಶ್ಯಗಳೊಂದಿಗೆ ಆಕರ್ಷಿಸುತ್ತಿದ್ದರು. ಸಣ್ಣಪುಟ್ಟ ಸ್ಟಾರ್ ಗಳಿಂದ ಹಿಡಿದು ಹೆಸರಾಂತ ಸ್ಟಾರ್ ಗಳಿಗೂ ಅವರೇ ಫೈಟ್ ಕಂಪೋಸ್ ಮಾಡುತ್ತಿದ್ದರು.

ಅದೇ ವೇಳೆ ಲಾರಿ ಕ್ಲೀನರ್ ಆಗಿದ್ದ ಲಾರೆನ್ಸ್ ,ಸುಬ್ಬರಾಯನ್ ಅವರ ಬಳಿ ಕಾರು ಕ್ಲೀನರ್ ಆಗಿ ಕೆಲಸಕ್ಕೆ ಸೇರಿದರು. ಡ್ಯಾನ್ಸ್ ಮಾಡುತ್ತಾ ಕಾರನ್ನು ಒರೆಸುತ್ತಿದ್ದರು. ಆ ದೃಶ್ಯ ಕೋಲೀವುಡ್ ಸೂಪರ್ ಸ್ಟಾರ್ ರಜನೀಕಾಂತ್ ರ ಗಮನ ಸೆಳೆಯಿತು. ಲಾರೆನ್ಸ್ ಡ್ಯಾನ್ಸ್ ಗೆ ಮಂತ್ರ ಮುಗ್ಧರಾದ ರಜನೀಕಾಂತ್ ತಕ್ಷಣವೇ ಲಾರೆನ್ಸ್ ರನ್ನು ಇಂಡಿಯನ್ ಮೈಖೇಲ್ ಜಾಕ್ಸನ್ ಆಗಿ ಹೆಸರುಗಳಿಸಿದ ಪ್ರಭುದೇವಾ ಟ್ರೂಪ್ ನಲ್ಲಿ ಸೇರಿಸಿದರು.

ಅಲ್ಲಿ ಪ್ರಭುದೇವಾ ಬಳಿ ಅರಿತುಕೊಂಡು, ಆ ಟ್ರೂಪ್ ನಲ್ಲಿ ಉತ್ತಮ ಡ್ಯಾನ್ಸರ್ ಆಗಿ ಹೆಸರುಗಳಿಸಿದರು. ಮುಠಾಮೇಸ್ತ್ರಿ ಚಿತ್ರದಲ್ಲಿ ಲಾರೆನ್ಸ್ ಡ್ಯಾನ್ಸ್ ಅನ್ನು ಮೆಚ್ಚಿಕೊಂಡ ಮೆಗಾಸ್ಟಾರ್ ಚಿರಂಜೀವಿ ತನ್ನ ಹಿಟ್ಲರ್ ಚಿತ್ರದಲ್ಲಿ ಅವಕಾಶ ಕಲ್ಪಿಸಿದರು.

ಆ ಚಿತ್ರದಲ್ಲಿ ಅದ್ಭುತವಾದ ಕೊರಿಯೋಗ್ರಫಿ ನೀಡಿದ ಲಾರೆನ್ಸ್ ಅಂದಿನಿಂದ ಮುಂದೆ ಸಾಗುತ್ತಲೇ ಇದ್ದಾರೆ. ಕೊರಿಯೋಗ್ರಫಿ ಮಾಡುತ್ತಲೇ ನಟನಾಗಿಯೂ ಒಳ್ಳೆಯ ಹೆಸರು ಗಳಿಸಿದ್ದಾರೆ. ಹೀಗೆ ತನ್ನಲ್ಲಿರುವ ಪ್ರತಿಭೆಯನ್ನು ತೋರಿದ ಅವರು ಮೆಗಾಫೋನ್ ನಿಂದ ನಿರ್ದೇಶನ ಮಾಡಿದ್ದಾರೆ.

ಪ್ರತಿಭೆ ಇದ್ದರೆ ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂಬುದು ಲಾರೆನ್ಸ್ ವಿಷಯದಲ್ಲಿ ಸ್ಪಷ್ಟವಾಗಿದೆ. ಈ ಉದಾಹರಣೆಯಿಂದ ಗಾಡ್ ಫಾದರ್ ಇಲ್ಲದಿದ್ದರೂ ಪ್ರತಿಭೆ ಇದ್ದರೆ ಸಾಕೆಂದು ಹೇಳಬಹುದು. ಕಾರು ಕ್ಲೀನರ್ ಆಗಿ ಕೆಲಸ ಮಾಡಿದ ರಾಘವ ಈಗ ಹತ್ತಾರು ಕಾರುಗಳಿಗೆ ಯಜಮಾನರಾಗಿದ್ದಾರೆ. ಆದರೂ ಅವರ ಹಿಂದೆ ನಡೆದದ್ದನ್ನು ಮರೆತಿಲ್ಲ. ತನ್ನ ಸಂಪಾದನೆಯಲ್ಲಿ ಸಾಕಷ್ಟು ಹಣವನ್ನು ಬಡವರಿಗೆ ಸಹಾಯ ಮಾಡುತ್ತಾರೆ.